ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World Cup: ಟಿ20 ವಿಶ್ವಕಪ್ ಫೈನಲ್‌ ತಲುಪುವ ತಂಡಗಳ ಭವಿಷ್ಯ ನುಡಿದ ಕ್ರಿಸ್ ಗೇಲ್

T20 World Cup: West Indies And Australia Teams Will Reach the T20 World Cup Final Says Chris Gayle

ಆಸ್ಟ್ರೇಲಿಯದಲ್ಲಿ ನಡೆಯಲಿರುವ 2022ರ ಟಿ20 ವಿಶ್ವಕಪ್‌ನ ಅಂತಿಮ ಪಂದ್ಯದಲ್ಲಿ ಮುಖಾಮುಖಿಯಾಗುವ ತಂಡಗಳನ್ನು ವೆಸ್ಟ್ ಇಂಡೀಸ್ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಭವಿಷ್ಯ ನುಡಿದಿದ್ದಾರೆ. ಎರಡು ಬಾರಿ ಟಿ20 ವಿಶ್ವಕಪ್ ವಿಜೇತ ವೆಸ್ಟ್ ಇಂಡೀಸ್ ತಂಡವು ಫೈನಲ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಎದುರಿಸಬಹುದು ಎಂದು ಭಾವಿಸಿದ್ದಾರೆ.

ಐಸಿಸಿ ಪುರುಷ ಸೆಪ್ಟೆಂಬರ್ ತಿಂಗಳ ಆಟಗಾರ ಪ್ರಶಸ್ತಿ; ಅಕ್ಷರ್ ಪಟೇಲ್ ಕೈತಪ್ಪಿ ಪಾಕ್ ಕ್ರಿಕೆಟಗನಿಗೆ ಪ್ರಶಸ್ತಿಐಸಿಸಿ ಪುರುಷ ಸೆಪ್ಟೆಂಬರ್ ತಿಂಗಳ ಆಟಗಾರ ಪ್ರಶಸ್ತಿ; ಅಕ್ಷರ್ ಪಟೇಲ್ ಕೈತಪ್ಪಿ ಪಾಕ್ ಕ್ರಿಕೆಟಗನಿಗೆ ಪ್ರಶಸ್ತಿ

ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವೆ ಫೈನಲ್ ಪಂದ್ಯ ನಡೆಯಬಹುದೆಂದು ನಾನು ಭಾವಿಸುತ್ತೇನೆ ಎಂದು ಕ್ರಿಸ್ ಗೇಲ್ ದೈನಿಕ್ ಜಾಗರಣ್‌ಗೆ ಹೇಳಿದ್ದಾರೆ. ಆಂಡ್ರೆ ರಸೆಲ್, ಕೀರಾನ್ ಪೋಲಾರ್ಡ್ ಮತ್ತು ಡ್ವೇನ್ ಬ್ರಾವೋ ಅವರ ಸೇವೆಯಿಲ್ಲದೆ ವೆಸ್ಟ್ ಇಂಡೀಸ್‌ ತಂಡಕ್ಕೆ ಕಷ್ಟವಾಗುತ್ತದೆ ಎಂದು ಮಾಜಿ ಬ್ಯಾಟರ್ ಕ್ರಿಸ್ ಗೇಲ್ ತಿಳಿಸಿದರು.

ತಂಡದ ನಾಯಕ ನಿಕೋಲಸ್ ಪೂರನ್ ಹೊಸಬರು

ತಂಡದ ನಾಯಕ ನಿಕೋಲಸ್ ಪೂರನ್ ಹೊಸಬರು

"ತಂಡದ ನಾಯಕ ನಿಕೋಲಸ್ ಪೂರನ್ ಹೊಸಬರು ಮತ್ತು ತಂಡದಲ್ಲಿ ಕೀರಾನ್ ಪೊಲಾರ್ಡ್, ಆಂಡ್ರೆ ರಸೆಲ್ ಮತ್ತು ಡ್ವೇನ್ ಬ್ರಾವೋ ಇಲ್ಲದಿರುವುದರಿಂದ ವೆಸ್ಟ್ ಇಂಡೀಸ್ ತಂಡಕ್ಕೆ ಇದು ತುಂಬಾ ಕಷ್ಟಕರವಾಗಿರುತ್ತದೆ," ಎಂದು ಕ್ರಿಸ್ ಗೇಲ್ ಅಭಿಪ್ರಾಯಪಟ್ಟರು.

ಮುಂಬರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡವು ಯಾವುದೇ ತಂಡದ ವಿರುದ್ಧ ಅಪಾಯಕಾರಿ ಎಂದು ಸಾಬೀತುಪಡಿಸಬಹುದು ಎಂದು ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಹೇಳಿದ್ದಾರೆ.

ವೆಸ್ಟ್ ಇಂಡೀಸ್ ತಂಡದಲ್ಲಿ ಪ್ರತಿಭಾವಂತರು ಮತ್ತು ಅಪಾಯಕಾರಿ

ವೆಸ್ಟ್ ಇಂಡೀಸ್ ತಂಡದಲ್ಲಿ ಪ್ರತಿಭಾವಂತರು ಮತ್ತು ಅಪಾಯಕಾರಿ

"ಹೌದು, ವೆಸ್ಟ್ ಇಂಡೀಸ್ ತಂಡದಲ್ಲಿ ಸೇರ್ಪಡೆಗೊಂಡಿರುವ ಆಟಗಾರರು ಪ್ರತಿಭಾವಂತರು ಮತ್ತು ಯಾವುದೇ ತಂಡಕ್ಕೆ ಅಪಾಯಕಾರಿ ಎಂದು ಸಾಬೀತುಪಡಿಸುತ್ತಾರೆ ಎಂಬುದು ಖಂಡಿತ. ಎಲ್ಲರಿಗೂ ತಿಳಿದಿರುವಂತೆ ಪಂದ್ಯದ ದಿನದಂದು ನಿಮ್ಮ ತಂತ್ರವನ್ನು ಸರಿಯಾದ ರೀತಿಯಲ್ಲಿ ಅಳವಡಿಸಿಕೊಳ್ಳುವುದು ಒಂದು ವಿಷಯವಾಗಿದೆ. ನಾನು ತಂಡವು ಉತ್ತಮವಾಗಿ ಆಡುತ್ತದೆ ಎಂದು ಭಾವಿಸುತ್ತೇನೆ," ಎಂದು ಕ್ರಿಸ್ ಗೇಲ್ ತಿಳಿಸಿದರು.

ಟಿ20 ವಿಶ್ವಕಪ್‌ನಲ್ಲಿ 16 ತಂಡಗಳು ಭಾಗವಹಿಸಲು ಸಜ್ಜಾಗಿದ್ದು, ಈ ಪೈಕಿ ಎಂಟು ತಂಡಗಳು ಈಗಾಗಲೇ ಸೂಪರ್-12 ಹಂತಕ್ಕೆ ಅರ್ಹತೆ ಪಡೆದಿವೆ. ಆ ತಂಡಗಳಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಸೇರಿವೆ. ಸೂಪರ್ 12 ಹಂತದ ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ನಂತರ ವಿಶ್ವಕಪ್‌ನ ನಾಕೌಟ್ ಹಂತಗಳಿಗೆ ಮುನ್ನಡೆಯುತ್ತವೆ.

ಇತ್ತೀಚೆಗೆ, ವೆಸ್ಟ್ ಇಂಡೀಸ್ ತಂಡವು ಆಸ್ಟ್ರೇಲಿಯಾ ವಿರುದ್ಧ ಎರಡು ಪಂದ್ಯಗಳ ಟಿ20 ಸರಣಿಯನ್ನು ಆಡಿದೆ, ಆದರೆ 2-0 ಅಂತರದಲ್ಲಿ ಸೋತಿದೆ.

ವೆಸ್ಟ್ ಇಂಡೀಸ್ ಟಿ20 ವಿಶ್ವಕಪ್ ತಂಡ

ವೆಸ್ಟ್ ಇಂಡೀಸ್ ಟಿ20 ವಿಶ್ವಕಪ್ ತಂಡ

ನಿಕೋಲಸ್ ಪೂರನ್ (ನಾಯಕ/ ವಿಕೆಟ್ ಕೀಪರ್), ರೋವ್‌ಮನ್ ಪೊವೆಲ್, ಯಾನಿಕ್ ಕ್ಯಾರಿಯಾ, ಜಾನ್ಸನ್ ಚಾರ್ಲ್ಸ್, ಶೆಲ್ಡನ್ ಕಾಟ್ರೆಲ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಅಕೆಲ್ ಹೋಸೇನ್, ಅಲ್ಜಾರಿ ಜೋಸೆಫ್, ಬ್ರ್ಯಾಂಡನ್ ಕಿಂಗ್, ಎವಿನ್ ಲೆವಿಸ್, ಕೈಲ್ ಮೇಯರ್ಸ್, ಒಬೆಡ್ ಮೆಕ್‌ಸಿಯರ್ಸ್ ರೇಮನ್ ರೈಫರ್, ಓಡಿಯನ್ ಸ್ಮಿತ್

Story first published: Monday, October 10, 2022, 16:30 [IST]
Other articles published on Oct 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X