
ಪಾಕಿಸ್ತಾನದ ವಿರುದ್ಧ ಉತ್ತಮ ಪ್ರದರ್ಶನ ನೀಡಿದೆ
ವಿಶ್ವಕಪ್ (ಟಿ20 ಮತ್ತು ಏಕದಿನ) ಇತಿಹಾಸವನ್ನು ನೋಡಿದ್ದರೆ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಉತ್ತಮ ಪ್ರದರ್ಶನ ನೀಡಿದೆ. ಆದರೆ ಯುಎಇಯಲ್ಲಿ ಉಭಯ ತಂಡಗಳ ನಡುವಿನ ಕೊನೆಯ ಹಣಾಹಣಿಯು ವ್ಯತಿರಿಕ್ತ ಫಲಿತಾಂಶವಾಗಿತ್ತು. ಭಾರತವು ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ವಿಫಲವಾಗಿ ಪಾಕಿಸ್ತಾನ ವಿರುದ್ಧ ಮೊದಲ ವಿಶ್ವಕಪ್ ಸೋಲು ಕಂಡರು.
ಶಾಹೀನ್ ಅಫ್ರಿದಿ ಹೊಸ ಚೆಂಡಿನ ಬೌಲಿಂಗ್ ದಾಳಿಗೆ ದಂಗಾಗಿ ಔಟಾದರು. ವಿರಾಟ್ ಕೊಹ್ಲಿ ಅರ್ಧಶತಕ ಗಳಿಸಿದರೂ, ತಂಡದ ಮೊತ್ತ 151 ಪಾಕಿಸ್ತಾನ ತಂಡಕ್ಕೆ ತೀರಾ ಕಡಿಮೆಯಾಗಿತ್ತು. ಪಾಕಿಸ್ತಾನ ವಿಕೆಟ್ ನಷ್ಟವಿಲ್ಲದೇ ಗುರಿ ತಲುಪಿತ್ತು.

ಭಾರತ ವಿರುದ್ಧ ತಮ್ಮ ಮೊದಲ ವಿಶ್ವಕಪ್ ಪಂದ್ಯವನ್ನು ಗೆಲುವು
ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಕ್ರಮವಾಗಿ 68 ಮತ್ತು 79 ರನ್ ಗಳಿಸಿ ಅಜೇಯರಾಗಿ ಉಳಿದರು. ಪಾಕಿಸ್ತಾನ ತಂಡ ಭಾರತ ವಿರುದ್ಧ ತಮ್ಮ ಮೊದಲ ವಿಶ್ವಕಪ್ ಪಂದ್ಯವನ್ನು ಗೆದ್ದು ಸಂಭ್ರಮಪಟ್ಟಿತ್ತು.
ಟಿ20 ವಿಶ್ವಕಪ್‌ನಲ್ಲಿ ಭಾರತದ ನೀರಸ ಪ್ರದರ್ಶನದ ನಂತರ ಕೋಚ್ ಸೇರಿದಂತೆ ಆಟಗಾರರ ವಿಷಯದಲ್ಲಿ ಸಾಕಷ್ಟು ಬದಲಾವಣೆ ಮಾಡಿತು. ಕೋಚ್ ಸ್ಥಾನದಿಂದ ರವಿಶಾಸ್ತ್ರಿ ಕೆಳಗಿಳಿದರೆ, ನಾಯಕನ ಜವಾಬ್ದಾರಿಯನ್ನು ವಿರಾಟ್ ಕೊಹ್ಲಿ ಒಲ್ಲದ ಮನಸ್ಸಿನಿಂದ ತ್ಯಜಿಸಿದರು. ಭಾರತ ತಂಡ ಈ ಬಾರಿ ಹೆಚ್ಚು ಉತ್ತಮ ಪ್ರದರ್ಶನವನ್ನು ನೀಡದಿದ್ದರೆ ಇದೇ ರೀತಿಯ ಬದಲಾವಣೆ ಮತ್ತೊಮ್ಮೆ ಕಾಣಬಹುದು.

ಟೀಮ್ ಇಂಡಿಯಾಗೆ ಆಡುವ 11ರ ಬಳಗದ ಚಿಂತೆ
ಭಾರತಕ್ಕೆ ವಿಕೆಟ್ ಕೀಪರ್ ಆಯ್ಕೆಯ ಸಂದಿಗ್ಧತೆ ಎದುರಾಗಿದ್ದು, ದಿನೇಶ್ ಕಾರ್ತಿಕ್ ಮತ್ತು ರಿಷಭ್ ಪಂತ್ ಕೀಪರ್ ಮತ್ತು ಬ್ಯಾಟರ್ ಸ್ಥಾನಕ್ಕಾಗಿ ಸ್ಪರ್ಧಿಸುತ್ತಿದ್ದಾರೆ. ದಿನೇಶ್ ಕಾರ್ತಿಕ್ ತಮ್ಮ ಫಿನಿಶರ್ ಪಾತ್ರದಿಂದ ರಿಷಭ್ ಪಂತ್ ಅವರಿಗಿಂತ ಮೊದಲ ಆಯ್ಕೆಯಾಗುತ್ತಾರೆ. ಆದರೆ ತಂಡದ ಮ್ಯಾನೇಜ್‌ಮೆಂಟ್ ಮಧ್ಯಮ ಕ್ರಮಾಂಕದಲ್ಲಿ ಎಡಗೈ ಆಟಗಾರನಿಗೆ ಆದ್ಯತೆ ನೀಡಬಹುದು.
ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಮೊಹಮ್ಮದ್ ಶಮಿ ಉತ್ತಮ ಪ್ರದರ್ಶನ ನೀಡಿದರು. ಆ ಪ್ರದರ್ಶನದ ಕಾರಣಕ್ಕಾಗಿ ಅವರಿಗೆ ಆಡುವ11ರ ಬಳಗದಲ್ಲಿ ಸ್ಥಾನ ನೀಡಲಾಗುತ್ತದೆಯೇ ಎಂಬುದು ಕುತೂಹಲಕಾರಿಯಾಗಿದೆ. ಜಸ್ಪ್ರೀತ್ ಬುಮ್ರಾ ಅವರ ಬದಲಿಯಾಗಿ ಮೊಹಮ್ಮದ್ ಶಮಿ ಆಯ್ಕೆಯಾಗುವ ಮೊದಲು ಟಿ20 ವಿಶ್ವಕಪ್‌ಗಾಗಿ 15 ಜನರ ತಂಡದಲ್ಲಿ ಹರ್ಷಲ್ ಪಟೇಲ್, ಅರ್ಷ್‌ದೀಪ್ ಸಿಂಗ್ ಮತ್ತು ಭುವನೇಶ್ವರ್ ಕುಮಾರ್ ಅವರಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಮೊಹಮ್ಮದ್ ಶಮಿ ಮಾರಕ ಬೌಲಿಂಗ್
ಆದಾಗ್ಯೂ, ಆಸ್ಟ್ರೇಲಿಯ ವಿರುದ್ಧ ಅಭ್ಯಾಸ ಪಂದ್ಯ ಮತ್ತು ನೆಟ್‌ನಲ್ಲಿ ಮೊಹಮ್ಮದ್ ಶಮಿಯ ಪ್ರದರ್ಶನವು ತಂಡದ ಮ್ಯಾನೇಜ್‌ಮೆಂಟ್ ದಿಟ್ಟ ನಿರ್ಧಾರ ತೆಗೆದುಕೊಳ್ಳುಬಹುದು.
ಪಾಕಿಸ್ತಾನಕ್ಕೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಹಿನ್ನಡೆ ದೊಡ್ಡ ಸಮಸ್ಯೆಯಾಗಿದೆ. ಮಧ್ಯಮ ಕ್ರಮಾಂಕದಲ್ಲಿ ರನ್ ಹೆಚ್ಚಿಸುವ ಬ್ಯಾಟರ್‌ಗಳಿಲ್ಲದಿರುವುದು ಬಾಬರ್ ಅಜಂ ಮತ್ತು ರಿಜ್ವಾನ್ ಮೇಲೆ ಹೆಚ್ಚಿನ ಅವಲಂಬಿತವಾಗಿದೆ. ಆದಾಗ್ಯೂ, ಭಾರತದ ವಿರುದ್ಧ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಲು ಕಾತರವಾಗಿದೆ.


Click it and Unblock the Notifications
