ಭಾರತ ತಂಡದಲ್ಲಿ ಈ ಇಬ್ಬರ ಕ್ರಿಕೆಟ್ ಜೀವನ ಅಂತ್ಯ: 2024ರ ಟೂರ್ನಿಗೆ ಯುವ ತಂಡ?

ಗುರುವಾರ, ನವೆಂಬರ್ 10ರಂದು ಅಡಿಲೇಡ್ ಓವಲ್‌ನಲ್ಲಿ ನಡೆದ 2022ರ ಐಸಿಸಿ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳ ಸೋಲಿನ ನಂತರ ಹಿರಿಯ ಆಟಗಾರರಿಗೆ ಕೋಕ್ ನೀಡುವಂತೆ ಚರ್ಚೆ ಆರಂಭವಾಗಿದೆ.
ಮುಂದಿನ ಟಿ20 ವಿಶ್ವಕಪ್ 2024ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿದ್ದು, ಆ ವೇಳೆಗೆ ಯುವ ಪಡೆಯನ್ನು ಕಟ್ಟಲು ಭಾರತ ತಂಡದ ಮ್ಯಾನೇಜ್‌ಮೆಂಟ್ ನಿರ್ಧರಿಸಿದ್ದು, ಟೂರ್ನಿಯಲ್ಲಿ ವೈಫಲ್ಯ ಕಂಡ ಮತ್ತು ಹಿರಿಯ ಆಟಗಾರರಾದ ದಿನೇಶ್ ಕಾರ್ತಿಕ್ ಮತ್ತು ರವಿಚಂದ್ರನ್ ಅಶ್ವಿನ್ ಅವರನ್ನು ಬದಿಗಿರಿಸಿ ಯುವ ಆಟಗಾರರಿಗೆ ಮಣೆಹಾಕುವಂತೆ ಒತ್ತಡ ಬಿದ್ದಿದೆ.
ತಮಿಳುನಾಡು ಮೂಲದ ಇಬ್ಬರು ಆಟಗಾರರಾದ ದಿನೇಶ್ ಕಾರ್ತಿಕ್ ಅವರಿಗೆ ಈಗಾಗಲೇ 37 ವರ್ಷ ವಯಸ್ಸಾಗಿದ್ದು, 2024ರ ವಿಶ್ವಕಪ್ ವೇಳೆಗೆ ಅವರಿಗೆ 39 ವರ್ಷವಾಗಲಿದೆ. ಇದೇ ವೇಳೆ ರವಿಚಂದ್ರನ್ ಅಶ್ವಿನ್ ಕೂಡ ಈ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ.
ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಜಾಗವನ್ನು ಬಹುತೇಕ ರಿಷಭ್ ಪಂತ್ ತುಂಬಲಿದ್ದರೆ, ಸ್ಪಿನ್ನರ್ ಆರ್ ಅಶ್ವಿನ್ ತಮ್ಮ ಜಾಗವನ್ನು ಯುವ ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್, ರಾಹುಲ್ ಚಹಾರ್ ಮತ್ತು ವರುಣ್ ಚಕ್ರವರ್ತಿ ಅವರಂತವರಿಗೆ ಬಿಟ್ಟುಕೊಡಲಿದ್ದಾರೆ.

2022ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ರವಿಚಂದ್ರನ್ ಅಶ್ವಿನ್ ಬೌಲಿಂಗ್ ಸಾಧನೆ
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 4 ಓವರ್‌ಗಳಲ್ಲಿ 23 ರನ್ ನೀಡಿ ವಿಕೆಟ್ ರಹಿತರಾದರು.
ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್‌ಗಳಲ್ಲಿ 21 ರನ್ ನೀಡಿ 2 ವಿಕೆಟ್ ಪಡೆದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 4 ಓವರ್‌ಗಳಲ್ಲಿ 43 ರನ್ ನೀಡಿ 1 ವಿಕೆಟ್ ಪಡೆದುಕೊಂಡರು.
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 4 ಓವರ್‌ಗಳಲ್ಲಿ 19 ರನ್ ನೀಡಿ ಯಾವುದೇ ವಿಕೆಟ್ ಪಡೆಯಲು ವಿಫಲರಾದರು.
ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ 4 ಓವರ್‌ಗಳಲ್ಲಿ 22 ರನ್ ನೀಡಿ 3 ವಿಕೆಟ್ ಪಡೆದರು.
ಇಂಗ್ಲೆಂಡ್ ವಿರುದ್ಧ 4 ಓವರ್‌ಗಳಲ್ಲಿ 27 ರನ್ ನೀಡಿ ವಿಕೆಟ್ ರಹಿತರಾದರು.

ಟಿ20 ವಿಶ್ವಕಪ್ ಫೈನಲ್‌ನ 5 ದಿನಗಳ ನಂತರ ಟಿ20 ಸರಣಿ
ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡುವಾಗ ರವಿಚಂದ್ರನ್ ಅಶ್ವಿನ್, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಮತ್ತು ಕೆಎಲ್ ರಾಹುಲ್ ಅವರನ್ನು ಕಡೆಗಣಿಸಲಾಗಿದೆ. ಇದು ತಂಡದಲ್ಲಿ ಬದಲಾವಣೆಯ ಸುಳಿವನ್ನು ಭಾರತ ತಂಡದ ಮ್ಯಾನೇಜ್‌ಮೆಂಟ್ ನೀಡಿದೆ.
ಆದಾಗ್ಯೂ, ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಹೇಳುವ ಪ್ರಕಾರ, "ಟಿ20 ವಿಶ್ವಕಪ್ ಫೈನಲ್‌ನ 5 ದಿನಗಳ ನಂತರ ಟಿ20 ಸರಣಿ ಆರಂಭವಾಗಿಲಿದ್ದು, ತಂಡದ ನಿರ್ವಹಣೆಯ ಮೇಲೆ ಹೆಚ್ಚು ಗಮನಹರಿಸುತ್ತಿದ್ದೇವೆ. ಯಾರಿಗೆ, ಯಾವಾಗ ವಿಶ್ರಾಂತಿ ನೀಡಬೇಕು ಎಂಬುದನ್ನು ಮನಗಂಡಿದ್ದೇವೆ. ದಿನೇಶ್ ಕಾರ್ತಿಕ್ ಅವರು ತಂಡಕ್ಕೆ ಬಂದ ರೀತಿ ಮತ್ತು ಅವರ ಪ್ರದರ್ಶನದ ರೀತಿಯಿಂದಾಗಿ ಆಯ್ಕೆದಾರರಿಗೆ ಯಾವಾಗಲೂ ಲಭ್ಯವಿರುತ್ತಾರೆ," ಎಂದು ಹೇಳಿದ್ದರು.

2022ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಪ್ರದರ್ಶನ
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೇವಲ 1 ರನ್ ಗಳಿಸಿದರು
ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಆಡಲಿಲ್ಲ
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 6 ರನ್ ಗಳಿಸಿದರು
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕೇವಲ 7 ರನ್ ಗಳಿಸಿ ನಿರಾಸೆ ಮೂಡಿಸಿದರು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications