For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ಬಾಬರ್ ಅಜಮ್ ಒಂದೇ ತಂಡದಲ್ಲಿ! ಆಫ್ರೋ-ಏಷ್ಯಾಕಪ್‌ ಟೂರ್ನಮೆಂಟ್

Kohli and Babar

ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಕಾಣುತ್ತಿರುವ ಕನಸು ನನಸಾದ್ರೆ, ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಒಟ್ಟಿಗೆ ಆಡುವುದರಲ್ಲಿ ಯಾವುದೇ ಅನುಮಾನವಿಲ್ಲ. 2023ರಿಂದ ಆಫ್ರೋ-ಏಷ್ಯಾ ಕಪ್ ಟಿ20 ಫಾರ್ಮೆಟ್‌ನಲ್ಲಿ ನಡೆಸುವ ಕುರಿತು ಎಸಿಸಿ ಯೋಜಿಸಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ವಿವಾದ ಮತ್ತು ಉಭಯ ರಾಷ್ಟ್ರಗಳ ರಾಜಕೀಯ ಉದ್ವಿಗ್ನತೆಯಿಂದಾಗಿ ಎರಡು ರಾಷ್ಟ್ರಗಳ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳು ನಡೆದ ದಶಕವೇ ಉರುಳಿದೆ. ಹೀಗಾಗಿ ಉಭಯ ರಾಷ್ಟ್ರಗಳು ಕೇವಲ ಐಸಿಸಿ ಟೂರ್ನಮೆಂಟ್‌ನ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.

2005-2007ರಲ್ಲಿ ನಡೆದಿದ್ದ ಟೂರ್ನಮೆಂಟ್‌ಗೆ ಮರುಜೀವ?

2005-2007ರಲ್ಲಿ ನಡೆದಿದ್ದ ಟೂರ್ನಮೆಂಟ್‌ಗೆ ಮರುಜೀವ?

ಆಫ್ರೋ-ಏಷ್ಯಾ ಕಪ್ ಟೂರ್ನಮೆಂಟ್‌ ಇದುವರೆಗೆ ಎರಡು ಬಾರಿ 2005 ಮತ್ತು 2007ರಲ್ಲಿ ನಡೆದಿದ್ದು ಏಷ್ಯಾ ತಂಡ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿದೆ.

ಏಷ್ಯಾ ಪರ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಮತ್ತು ಶ್ರೀಲಂಕಾದ ಆಟಗಾರರು ಒಂದು ತಂಡವಾಗಿ ಏಷ್ಯಾ ತಂಡವನ್ನ ಪ್ರತಿನಿಧಿಸಿದ್ರೆ, ಆಫ್ರಿಕಾ ತಂಡವನ್ನ ದಕ್ಷಿಣ ಆಫ್ರಿಕಾ, ಕೀನ್ಯಾ, ಜಿಂಬಾಬ್ವೆ ಪ್ರತಿನಿಧಿಸಲಿದೆ.

ಸ್ವಲ್ಪದರಲ್ಲೇ ವಿಶ್ವದಾಖಲೆ ಮಿಸ್ ಮಾಡಿಕೊಂಡ ಜಾಸ್ ಬಟ್ಲರ್‌: ABD ರೆಕಾರ್ಡ್‌ ಸೇಫ್!

BCCI ಮನವೊಲಿಸಲು ACC ಪ್ರಯತ್ನ

BCCI ಮನವೊಲಿಸಲು ACC ಪ್ರಯತ್ನ

ಭಾರತ-ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ನಡೆದು ಹಲವು ವರ್ಷಗಳೇ ಉರುಳಿವೆ. ಹೀಗಿರುವಾಗಿ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟಿಗರು ಒಂದೇ ತಂಡದಲ್ಲಿ ಆಡುವುದು ಸುಲಭದ ಮಾತಲ್ಲ. ಈ ಕಾರಣದಿಂದಾಗಿ ಎಸಿಸಿ ಬಿಸಿಸಿಐ ಗವರ್ನಿಂಗ್ ಕೌನ್ಸಿಸ್ ಮುಖ್ಯಸ್ಥ ಜಯ್ ಶಾರನ್ನ ಮನವೊಲಿಸುವ ಪ್ರಯತ್ನಕ್ಕೆ ಮುಂದಾಗಿದೆ.

ಈ ಹಿಂದೆ ಏಕದಿನ ಫಾರ್ಮೆಟ್‌ನಲ್ಲಿ ನಡೆದಿದ್ದ ಈ ಸರಣಿಯನ್ನು ಟಿ20 ಫಾರ್ಮೆಟ್‌ನಲ್ಲಿ ಆಡಿಸಲು ಪ್ರಯತ್ನ ನಡೆಸಲಾಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದ್ರೆ ಮುಂದಿನ ವರ್ಷ ಜೂನ್-ಜುಲೈ ತಿಂಗಳಿನಲ್ಲಿ ಈ ಟೂರ್ನಿ ನಡೆಯಲಿದೆ.

"ನಾವು ಇನ್ನೂ ಮಂಡಳಿಗಳಿಂದ ದೃಢೀಕರಣವನ್ನು ಪಡೆದಿಲ್ಲ. ನಾವು ಇನ್ನೂ ಶ್ವೇತಪತ್ರದಲ್ಲಿ ಕೆಲಸ ಮಾಡುತ್ತಿದ್ದೇವೆ ಮತ್ತು ಅದನ್ನು ಎರಡೂ ಮಂಡಳಿಗಳಿಗೆ ಸಲ್ಲಿಸಲಾಗುವುದು. ಆದರೆ ಭಾರತ ಮತ್ತು ಪಾಕಿಸ್ತಾನದ ಅತ್ಯುತ್ತಮ ಆಟಗಾರರು ಏಷ್ಯನ್ ಇಲೆವೆನ್‌ನಲ್ಲಿ ಆಡುವುದು ನಮ್ಮ ಯೋಜನೆಯಾಗಿದೆ. ಯೋಜನೆಗಳು ಅಂತಿಮಗೊಂಡ ನಂತರ ನಾವು ಪ್ರಾಯೋಜಕತ್ವ ಮತ್ತು ಪ್ರಸಾರಕ್ಕಾಗಿ ಮುಂದಾಗುತ್ತೇವೆ. ಅದೊಂದು ಬೃಹತ್ ಕಾರ್ಯಕ್ರಮವಾಗಲಿದೆ. ನಿಜವಾಗಿಯೂ, ನಿಜವಾಗಿಯೂ ದೊಡ್ಡದು, "ಎಂದು ಎಸಿಸಿ ವಾಣಿಜ್ಯ ಮತ್ತು ಈವೆಂಟ್‌ಗಳ ಮುಖ್ಯಸ್ಥ ಪ್ರಭಾಕರನ್ ಥನ್‌ರಾಜ್ ಹೇಳಿದ್ದಾರೆಂದು ಫೋರ್ಬ್ಸ್ ಉಲ್ಲೇಖಿಸಿದೆ.

15 ವರ್ಷಗಳ ಟಿ20 ಕೆರಿಯರ್‌ನಲ್ಲಿ ಚೊಚ್ಚಲ ಟಿ20 ಅರ್ಧಶತಕ ಸಿಡಿಸಿದ ದಿನೇಶ್ ಕಾರ್ತಿಕ್

ಪಾಕಿಸ್ತಾನ್ ಆಟಗಾರರಿಗೆ ಅವಕಾಶ ಸಿಗ್ತಿಲ್ಲ ! | *Cricket | OneIndia Kannada
2005 ಮತ್ತು 2007ರ ಆಫ್ರೋ-ಏಷ್ಯಾ ಕಪ್ ಫಲಿತಾಂಶ

2005 ಮತ್ತು 2007ರ ಆಫ್ರೋ-ಏಷ್ಯಾ ಕಪ್ ಫಲಿತಾಂಶ

2005ರಲ್ಲಿ ಮೊದಲ ಬಾರಿಗೆ ನಡೆದ ಆಫ್ರೋ-ಏಷ್ಯಾ ಕಪ್ ಟೂರ್ನಮೆಂಟ್‌ನಲ್ಲಿ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದರಿಂದ ಟೂರ್ನಿಯು 1-1 ರಲ್ಲಿ ಸಮಬಲಗೊಂಡಿತು. ಆದ್ರೆ 2007ರ ಆವೃತ್ತಿಯು ಒಂದು ಟಿ20 ಪಂದ್ಯ ಮತ್ತು 3 ಏಕದಿನ ಪಂದ್ಯಗಳನ್ನ ಒಳಗೊಂಡಿತ್ತು. ಇದರಲ್ಲಿ ಏಷ್ಯಾ ಇಲೆವೆನ್ ತಂಡವು ಆಫ್ರಿಕನ್ ಇಲೆವೆನ್ ತಂಡವನ್ನು ವೈಟ್‌ವಾಶ್ ಮಾಡಿತು. ಇದಾದ ಬಳಿಕ ಟಿ20 ಪಂದ್ಯವನ್ನು ಸಹ ಗೆದ್ದಿತು. ಆದ್ರೆ ಆ ವೇಳೆಯಲ್ಲಿ ಟಿ20 ಪಂದ್ಯವು ಅಂತರಾಷ್ಟ್ರೀಯ ಅಧಿಕೃತ ಸ್ಥಾನಮಾನವನ್ನು ಹೊಂದಿರಲಿಲ್ಲ.

Story first published: Friday, June 17, 2022, 23:19 [IST]
Other articles published on Jun 17, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+