
ಟೀಂ ಇಂಡಿಯಾದ ಗೆಲುವಿನ ಓಟ
ಭಾರತ ತಂಡ 2022ರ ಜನವರಿಯಿಂದ ಇಲ್ಲಿಯವರೆಗೆ 39 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದರಲ್ಲಿ 2 ಟೆಸ್ಟ್, 12 ಏಕದಿನ ಮತ್ತು 24 ಟಿ20 ಪಂದ್ಯಗಳು ಸೇರಿವೆ. ಸ್ಟೀವ್ ವಾ ನಾಯಕತ್ವದಲ್ಲಿ ಆಸ್ಟ್ರೇಲಿಯಾ 2003ರಲ್ಲಿ 30 ಏಕದಿನ ಮತ್ತು 8 ಟೆಸ್ಟ್‌ಗಳಲ್ಲಿ ಜಯ ಸಾಧಿಸುವ ಮೂಲಕ ವಿಶ್ವದಾಖಲೆಯನ್ನು ನಿರ್ಮಿಸಿತ್ತು.
ಭಾರತವು ಈ ವರ್ಷ 56 ಪಂದ್ಯಗಳಲ್ಲಿ 39 ಗೆಲುವುಗಳನ್ನು ಹೊಂದಿದೆ. 2022ರಲ್ಲಿ ಭಾರತ ಒಟ್ಟು 5 ಟೆಸ್ಟ್ ಪಂದ್ಯಗಳನ್ನಾಡಿದ್ದು, 2 ಪಂದ್ಯಗಳಲ್ಲಿ ಜಯ ಗಳಿಸಿದಿರೆ ಉಳಿದ 3 ಪಂದ್ಯಗಳಲ್ಲಿ ಸೋಲನುಭವಿಸಿದೆ. 18 ಏಕದಿನ ಪಂದ್ಯಗಳನ್ನಾಡಿದ್ದು ಅವುಗಳಲ್ಲಿ 13 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಕೇವಲ 5 ಪಂದ್ಯಗಳಲ್ಲಿ ಮಾತ್ರ ಸೋತಿದೆ. ಇನ್ನು, ಈ ವರ್ಷದಲ್ಲಿ 32 ಟಿ20 ಪಂದ್ಯಗಳನ್ನಾಡಿದ್ದುಅವುಗಳಲ್ಲಿ 24ರಲ್ಲಿ ಗೆಲುವ ಸಾಧಿಸಿದ್ದು, 8 ಪಂದ್ಯಗಳಲ್ಲಿ ಸೋತಿದೆ.
ಸಚಿನ್ ತೆಂಡೂಲ್ಕರ್ ದಾಖಲೆಯನ್ನ ಧೂಳೀಪಟ ಮಾಡಿದ ಕಿಂಗ್ ಕೊಹ್ಲಿ: ICC ಟೂರ್ನಿಯಲ್ಲಿ ಈತನಿಗಿಲ್ಲ ಸರಿಸಾಟಿ!

ಪಾಕಿಸ್ತಾನದ ವಿರುದ್ಧ ಅಮೋಘ ಜಯ
ಮೆಲ್ಬೊರ್ನ್‌ನಲ್ಲಿ ನಡೆದ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಆಟವಾಡಿದರು. 160 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ 32 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿತ್ತು, ಆದರೆ, ಪಾಂಡ್ಯ ಜೊತೆಗೆ ಅತ್ಯುತ್ತಮ ಜೊತೆಯಾಟ ಆಡಿದ ವಿರಾಟ್ ಕೊಹ್ಲಿ ಭಾರತವನ್ನು ಜಯದತ್ತ ಮುನ್ನಡೆಸಿದರು.
53 ಎಸೆತಗಳಲ್ಲಿ 6 ಬೌಂಡರಿ, 4 ಭರ್ಜರಿ ಸಿಕ್ಸರ್ ಸಹಿತ 82 ರನ್ ಗಳಿಸಿದರು. ಅಂತಿಮ ಓವರ್ ಗಳಲ್ಲಿ 16 ರನ್ ಗಳಿಸುವಲ್ಲಿ ಯಶಸ್ವಿಯಾದ ಟೀಂ ಇಂಡಿಯಾ ಕಳೆದ ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡಿತು. ಇದರ ಜೊತೆಗೆ ಅತಿ ಹೆಚ್ಚು ಪಂದ್ಯ ಗೆದ್ದ ದಾಖಲೆಯನ್ನು ಬರೆಯಿತು.

11 ಸರಣಿಗಳಲ್ಲಿ ಜಯ ಗಳಿಸಿರುವ ಭಾರತ
ಭಾರತ ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳಲ್ಲಿ ಸೋಲುವ ಮೂಲಕ ನಿರಾಸೆ ಮೂಡಿಸಿತ್ತು. ಆದರೆ, ನಂತರ ರೋಹಿತ್ ಶರ್ಮಾ ಪಡೆ ಗೆಲುವಿನ ಲಯಕ್ಕೆ ಮರಳಿತು.
ವೆಸ್ಟ್ ಇಂಡೀಸ್, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಭರ್ಜರಿ ಜಯ ಸಾಧಿಸಿತು. ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ 2-2ರಲ್ಲಿ ಸಮಬಲ ಸಾಧಿಸಿತು. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಐರ್ಲೆಂಡ್ ವಿರುದ್ಧ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತು.
ನಂತರ ಇಂಗ್ಲೆಂಡ್ ಪ್ರವಾಸದಲ್ಲಿ ಏಕದಿನ ಮತ್ತು ಟಿ20 ಸರಣಿಯನ್ನು ಗೆದ್ದುಕೊಂಡಿತು. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತು. ಟಿ20 ಸರಣಿಯಲ್ಲಿ 4-1 ಅಂತರದಲ್ಲಿ ಜಯ ಗಳಿಸಿತು. ಅದಾದ ನಂತರ ಜಿಂಬಾಬ್ವೆ ಪ್ರವಾಸ ಮಾಡಿದ ಟೀಂ ಇಂಡಿಯಾ 3 ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತು.

ಏಷ್ಯಾಕಪ್‌ನಲ್ಲಿ ಭಾರತಕ್ಕೆ ನಿರಾಸೆ
ಅತ್ಯುತ್ತಮ ಗೆಲುವಿನ ಲಯದಲ್ಲಿದ್ದರೂ ಏಷ್ಯಾಕಪ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಲಿಲ್ಲ. ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೋಲನುಭವಿಸುವ ಮೂಲಕ ಸೂಪರ್-4 ಹಂತದಲ್ಲಿ ನಿರ್ಗಮಿಸಿತು.ತವರಿನಲ್ಲಿ ನಡೆದ ಎರಡು ಟಿ20 ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳನ್ನು ಸೋಲಿಸಿತು.
2022 ರಲ್ಲಿ ಭಾರತವು 7 ಕ್ಯಾಪ್ಟನ್‌ಗಳನ್ನು ಹೊಂದಿತ್ತು ಏಕೆಂದರೆ ಸರದಿ ನೀತಿ ಜಾರಿಯಲ್ಲಿದೆ.ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್, ಶಿಖರ್ ಧವನ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ 2022 ರಲ್ಲಿ ಭಾರತವನ್ನು ಮುನ್ನಡೆಸಿದರು.


Click it and Unblock the Notifications












