ಸಚಿನ್ ತೆಂಡೂಲ್ಕರ್ ದಾಖಲೆಯನ್ನ ಧೂಳೀಪಟ ಮಾಡಿದ ಕಿಂಗ್ ಕೊಹ್ಲಿ: ICC ಟೂರ್ನಿಯಲ್ಲಿ ಈತನಿಗಿಲ್ಲ ಸರಿಸಾಟಿ!

ಮೆಲ್ಬರ್ನ್‌ನ ಎಂಸಿಜಿ ಮೈದಾನದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವನ್ನ ಪಡೆದಿದೆ. ಟಿ20 ವಿಶ್ವಕಪ್‌ನ ಸೂಪರ್ 12 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 4 ವಿಕೆಟ್‌ಗಳ ರೋಚಕ ಗೆಲುವಿನೊಂದಿಗೆ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿದೆ. ಕೊನೆಯ ಎಸೆತದಲ್ಲಿ ಗೆಲುವಿನ ಸಿಹಿ ಪಡೆದ ಕೋಟ್ಯಾಂತರ ಭಾರತೀಯ ಅಭಿಮಾನಿಗಳು ದೀಪಾವಳಿಗೂ ಮೊದಲೇ ಹಬ್ಬದಂತೆ ಗೆಲುವನ್ನ ಸಂಭ್ರಮಿಸಿದ್ದಾರೆ.
ಟೀಂ ಇಂಡಿಯಾ ಗೆಲುವಿನಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದ ಆಟಗಾರರಲ್ಲಿ ಇಬ್ಬರು ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ. ಪಾಕಿಸ್ತಾನ ನೀಡಿದ್ದ 160ರನ್‌ಗಳ ಗುರಿ ಬೆನ್ನತ್ತಿದ ಭಾರತವು ಆರಂಭಿಕ ಆಘಾತದ ನಡುವೆ ಸೋಲಿನ ಸುಳಿಗೆ ಸಿಲುಕಿತ್ತು. ಈ ವೇಳೆಯಲ್ಲಿ ಮುಳುಗುತ್ತಿದ್ದ ಭಾರತದ ನೌಕೆಯನ್ನು ಮೇಲೆತ್ತಿದ ಕೀರ್ತಿ ಈ ಜೋಡಿಗೆ ಸಲ್ಲುತ್ತದೆ.
ಹಾರ್ದಿಕ್ ಪಾಂಡ್ಯ ಬ್ಯಾಟ್ ಹಾಗೂ ಬಾಲ್ ಎರಡರಲ್ಲೂ ಮಿಂಚುವ ಮೂಲಕ ಆ್ಯಂಕರ್ ರೋಲ್‌ನಲ್ಲಿ ಮಿಂಚಿದ್ರೆ, ವಿರಾಟ್ ಕೊಹ್ಲಿ ತನ್ನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಬೆಸ್ಟ್ ಇನ್ನಿಂಗ್ಸ್ ಆಡುವ ಮೂಲಕ ಟೀಂ ಇಂಡಿಯಾಗೆ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ವಿರಾಟ್ ಅನೇಕ ದಾಖಲೆಯ ಮೆಟ್ಟಿಲೇರಿದ್ದು, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಅತ್ಯಮೋಘ ದಾಖಲೆಯನ್ನು ಕೂಡ ಮುರಿದಿದ್ದಾರೆ. ಹಾಗಿದ್ರೆ ಸಚಿನ್ ದಾಖಲೆ ಯಾವುದು ಬ್ರೇಕ್ ಆಗಿದೆ? ವಿರಾಟ್ ಕೊಹ್ಲಿ ಅಂತಹದ್ದೇನು ಸಾಧನೆ ಮಾಡಿದ್ದಾರೆ ಎಂದು ತಿಳಿಯಲು ಈ ಕೆಳಗೆ ಓದಿ.

53 ಎಸೆತಗಳಲ್ಲಿ ಅಜೇಯ 82 ರನ್ ಸಿಡಿಸಿದ ವಿರಾಟ್ ಕೊಹ್ಲಿ
ಪಾಕಿಸ್ತಾನ ವಿರುದ್ಧ ಅತ್ಯಮೋಘ ಆಟವಾಡಿದ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ಫಾರ್ಮೆಟ್‌ನಲ್ಲಿ ತಾನೇ ಸ್ವತಃ ಹೇಳಿದಂತೆ ಅವರದ್ದು ಬೆಸ್ಟ್ ಇನ್ನಿಂಗ್ಸ್ ಇದಾಗಿದೆ. 53 ಎಸೆತಗಳಲ್ಲಿ ಅಜೇಯ 82 ರನ್ ಕಲೆಹಾಕಿದ ವಿರಾಟ್ ಕೊಹ್ಲಿ ಸೋಲು ಬಹುತೇಕ ಕಟ್ಟಿಟ್ಟ ಬುತ್ತಿ ಎಂಬತ್ತಿದ್ದ ಪಂದ್ಯವನ್ನ ಟೀಂ ಇಂಡಿಯಾಗೆ ಕಡೆಗೆ ತಿರುಗಿಸಿದ್ರು.
19 ಓವರ್‌ನಲ್ಲಿ ಹ್ಯಾರಿಸ್ ರೌಫ್‌ಗೆ ಎರಡು ಭರ್ಜರಿ ಸಿಕ್ಸರ್ ಸಿಡಿಸಿದ್ದ ವಿರಾಟ್, ಕೊನೆಯ ಓವರ್‌ನಲ್ಲಿ ಮೊಹಮ್ಮದ್ ನವಾಜ್ ಬೌಲಿಂಗ್‌ನಲ್ಲಿ 16ರನ್‌ಗಳು ಬೇಕಿತ್ತು. ಹಾರ್ದಿಕ್ ಮೊದಲ ಎಸೆತದಲ್ಲೇ ಔಟಾದಾಗ ಟೀಂ ಇಂಡಿಯಾ ಕಥೆ ಇಲ್ಲಿಗೆ ಮುಗೀತಾ? ಎಂಬೆಲ್ಲಾ ಪ್ರಶ್ನೆಗಳು ಎದುರಾಗಿದ್ದವು.
ಆದ್ರೆ ವಿರಾಟ್ 2 , 6, 3 ರನ್ ಕಲೆಹಾಕುವ ಮೂಲಕ ಭಾರತವನ್ನ ಗೆಲುವಿನ ದಡ ಸಮೀಪಿಸಿದ್ರು. ಅಂತಿಮ ಹಂತದಲ್ಲಿ ದಿನೇಶ್ ಕಾರ್ತಿಕ್ ಔಟಾದ ಬಳಿಕ ಅಶ್ವಿನ್ ಸಿಂಗಲ್ಸ್ ತೆಗೆದುಕೊಂಡು ಭಾರತವನ್ನ ಗೆಲ್ಲಿಸಿದ್ರು. ಆದ್ರೆ ಇಲ್ಲಿ ಕೊಹ್ಲಿಯ 82ರನ್‌ಗಳು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಜೊತೆಗೆ ಸಚಿನ್ ತೆಂಡೂಲ್ಕರ್ ದಾಖಲೆಯು ಮುರಿಯಿತು.

ICC ಟೂರ್ನಿಯಲ್ಲಿ ಅತಿ ಹೆಚ್ಚು 50+ ಸ್ಕೋರ್ ಮಾಡಿದ ಕೊಹ್ಲಿ
ICC ಟೂರ್ನಮೆಂಟ್‌ನಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು 50+ ಸ್ಕೋರ್ ಮಾಡಿದ ದಾಖಲೆಯನ್ನ ತಮ್ಮ ಹೆಸರಿಗೆ ದಾಖಲಿಸಿಕೊಂಡಿದ್ದಾರೆ. ಈ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆಯನ್ನ ಮುರಿದಿದ್ದಾರೆ. ಸಚಿನ್ ತೆಂಡೂಲ್ಕರ್ ಐಸಿಸಿ ಟೂರ್ನಿಗಳಲ್ಲಿ 61 ಪಂದ್ಯಗಳನ್ನ ಆಡಿದ್ದು 49.43ರ ಸರಾಸರಿಯಲ್ಲಿ 2719 ರನ್ ಕಲೆಹಾಕಿದ್ದಾರೆ. ಇದರಲ್ಲಿ 7 ಶತಕ ಹಾಗೂ 16 ಅರ್ಧಶತಕ ಒಳಗೊಂಡಿದ್ದು, ವೈಯಕ್ತಿಕ ಗರಿಷ್ಠ 152ರನ್ ಕಲೆಹಾಕಿದ್ದಾರೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 1996ರ ಏಕದಿನ ವಿಶ್ವಕಪ್ ಮತ್ತು 2003ರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಆಗಿ ಹೊರಹೊಮ್ಮಿದರು. 2003ರ ವಿಶ್ವಕಪ್‌ನಲ್ಲಿ 673ರನ್ ಕಲೆಹಾಕಿದ ಸಚಿನ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಆಗಿ ಮಿಂಚಿದ್ದರು. ಆದ್ರೆ ಗಮನಿಸಬೇಕಾದ ವಿಷಯ ಏನಂದ್ರೆ ತೆಂಡೂಲ್ಕರ್ ಯಾವುದೇ ಟಿ20 ವಿಶ್ವಕಪ್ ಆಡಿಲ್ಲ.
ಕೊಹ್ಲಿ ಅಬ್ಬರದ ನಡುವೆ ಹಾರ್ದಿಕ್ ಪಾಂಡ್ಯ ಇನ್ನಿಂಗ್ಸ್ ಮರೆತ ಅಭಿಮಾನಿಗಳು: ನೆಟ್ಟಿಗರ ಪ್ರಶ್ನೆ

ಸಚಿನ್ ದಾಖಲೆಯನ್ನ ಮುರಿದ ಕಿಂಗ್ ಕೊಹ್ಲಿ
ಐಸಿಸಿ ಟೂರ್ನಿಯಲ್ಲಿ ಇಷ್ಟು ದಿನಗಳ ಕಾಲ ಇದ್ದ ಸಚಿನ್ ದಾಖಲೆಯನ್ನ ಕಿಂಗ್ ಕೊಹ್ಲಿ ಮುರಿದಿದ್ದಾರೆ. ಐಸಿಸಿ ಟೂರ್ನಮೆಂಟ್‌ನಲ್ಲಿ ಇದುವರೆಗೆ 61 ಪಂದ್ಯಗಳಲ್ಲಿ ದಾಖಲೆಯ 60.63ರ ಬ್ಯಾಟಿಂಗ್ ಸರಾಸರಿಯಲ್ಲಿ ವಿರಾಟ್ 2486 ರನ್ ಕಲೆಹಾಕಿದ್ದಾರೆ. ಜೊತೆಗೆ 2 ಶತಕ ಹಾಗೂ 22 ಅರ್ಧಶತಕ ದಾಖಲಿಸುವ ಮೂಲಕ ಸಚಿನ್ ಹೆಸರಲ್ಲಿ 23 ಬಾರಿ 50+ ಸ್ಕೋರ್ ದಾಖಲೆಯನ್ನ ಮುರಿದರು. ವಿರಾಟ್ ಕೊಹ್ಲಿ ವೈಯಕ್ತಿಕ ಗರಿಷ್ಠ 107ರನ್ ಆಗಿದೆ.
ವಿರಾಟ್ ಕೊಹ್ಲಿ 2014 ಮತ್ತು 2016ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಅವಾರ್ಡ್ ಪಡೆದಿದ್ದಾರೆ.
ಟಿ20 ವಿಶ್ವಕಪ್: ಪಾಕ್ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡಿ ಕಣ್ಣೀರಿಟ್ಟ ಕಿಂಗ್ ಕೊಹ್ಲಿ

ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ವಿರಾಟ್!
ಪಾಕಿಸ್ತಾನ ವಿರುದ್ಧ ಅಜೇಯ 82 ರನ್ ಕಲೆಹಾಕಿದ ವಿರಾಟ್ ಕೊಹ್ಲಿ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಆಗಿ ಹೊರಹೊಮ್ಮಿದ್ರು. 110 ಪಂದ್ಯಗಳು 102 ಇನ್ನಿಂಗ್ಸ್‌ನಲ್ಲಿ ಕೊಹ್ಲಿ 51.97ರ ಸರಾಸರಿಯಲ್ಲಿ 3,794 ರನ್ ಕಲೆಹಾಕಿದ್ದಾರೆ. ಇದರಲ್ಲಿ 34 ಅರ್ಧಶತಕ ಮತ್ತು ಏಕೈಕ ಶತಕವನ್ನು ದಾಖಲಿಸಿದ್ದು, ಅಫ್ಘಾನಿಸ್ತಾನ ವಿರುದ್ಧ ವೈಯಕ್ತಿಕ ಗರಿಷ್ಠ ಅಜೇಯ 122 ರನ್ ಸಿಡಿಸಿದ್ದಾರೆ.
ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಆಡಿರುವ ಕಿಂಗ್ ಕೊಹ್ಲಿ ಇಡೀ ಟೂರ್ನಿಯಲ್ಲಿ ಈ ಫಾರ್ಮ್ ಅನ್ನು ಮುಂದುವರಿಸಿಕೊಂಡು ಹೋಗಿದ್ದೇ ಆದಲ್ಲಿ ಮತ್ತಷ್ಟು ದಾಖಲೆಯನ್ನು ತನ್ನ ಹೆಸರಿಗೆ ದಾಖಲಿಸುವುದರ ಜೊತೆಗೆ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಡುವುದರಲ್ಲಿ ಅನುಮಾನವಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications