Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನ್ಯೂಜಿಲೆಂಡ್ ಟಿ20 ಸರಣಿಗಿಲ್ಲ ಕೊಹ್ಲಿ, ರೋಹಿತ್: ಟಿ20 ತಂಡದಿಂದ ದಿಗ್ಗಜರ ಶಾಶ್ವತ ನಿರ್ಗಮನ?

Team India T20I squad: BCCI official important statement on Virat Kohli and Rohit Sharma T20I Future

ನ್ಯೂಜಿಲೆಂಡ್ ವಿರುದ್ಧದ ವೈಟ್‌ಬಾಲ್ ಸರಣಿಗೆ ಶುಕ್ರವಾರ ಟೀಮ್ ಇಂಡಿಯಾ ತಂಡವನ್ನು ಘೋಷಣೆ ಮಾಡಲಾಗಿದೆ. ಇದರಲ್ಲಿ ಟಿ20 ಸರಣಿಗೆ ಘೋಷಣೆ ಮಾಡಿರುವ ತಂಡದಲ್ಲಿ ಮತ್ತೊಮ್ಮೆ ತಂಡದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕಾಣಿಸಿಕೊಂಡಿಲ್ಲ. ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿಯೇ ನ್ಯೂಜಿಲೆಂಡ್ ತಂಡವನ್ನು ಟಿ20 ಮಾದರಿಯಲ್ಲಿ ಎದುರಿಸಲಿದೆ.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಬ್ಬರು ಕೂಡ ತಮ್ಮ ಲಭ್ಯತೆಯನ್ನು ಖಚಿತಪಡಿಸಿದ್ದರು. ಹಾಗಿದ್ದರು ಕೂಡ ಈ ಸರಣಿಗೆ ಅನುಭವಿ ಆಟಗಾರರನ್ನು ಕಡೆಗಣಿಸಿ ತಂಡವನ್ನು ಪ್ರಕಟಿಸಲಾಗಿದೆ. ಈ ಮೂಲಕ ಆಯ್ಕೆ ಮಂಡಳಿ ಅನುಭವಿ ಆಟಗಾರರಿಗೆ ಸ್ಪಷ್ಟ ಸಂದೇಶವೊಂದನ್ನು ನೀಡಿದೆ. ಈ ಬಗ್ಗೆ ಬಿಸಿಸಿಐ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು ಪ್ರಮುಖ ವಿಚಾರವನ್ನು ಮಾಧ್ಯಮವೊಂದಕ್ಕೆ ಹಂಚಿಕೊಂಡಿದ್ದಾರೆ.

ಮಹತ್ವದ ಮಾಹಿತಿ ಹಂಚಿಕೊಂಡ ಬಿಸಿಸಿಐ ಅಧಿಕಾರಿ

ಮಹತ್ವದ ಮಾಹಿತಿ ಹಂಚಿಕೊಂಡ ಬಿಸಿಸಿಐ ಅಧಿಕಾರಿ

ಇನ್ನು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಹೊರಗುಳಿಯುವ ಮಾಹಿತಿ ತಂಡ ಪ್ರಕಟವಾಗುವ ಮುನ್ನವೇ ಬಹಿರಂಗವಾಗಿತ್ತು. ಈ ಮೂಲಕ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮುಂಬರುವ ಟಿ20 ಸರಣಿಗಳಿಂದ ಶಾಶ್ವತವಾಗಿ ಹೊರಗುಳಿಯಲಿದ್ದು ಯುವ ಆಟಗಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ತಂಡ ರಚಿಸಲಾಗುತ್ತದೆ ಎಂಬ ಸುಳಿವು ದೊರೆತಿತ್ತು. ತಂಡದ ಆಯ್ಕೆ ಬಳಿಕ ಬಿಸಿಸಿಐ ಅಧಿಕಾರಿಯೊಬ್ಬರ ಹೇಳಿಕೆಯನ್ನು ಇನ್‌ಸೈಡ್‌ಸ್ಪೋರ್ಟ್ ವರದಿ ಮಾಡಿದೆ. ಈ ಸಂದರ್ಭದಲ್ಲಿ ಬಿಸಿಸಿಐ ಅಧಿಕಾರಿ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಟಿ20 ತಂಡದಿಂದ ಶಾಶ್ವತ ನಿರ್ಗಮನ ನೀಡಲಾಗಿದೆ ಎಂದಿದ್ದಾರೆ.

ಶಾಶ್ವತ ನಿರ್ಗಮನ ಖಚಿತ ಆದರೆ..

ಶಾಶ್ವತ ನಿರ್ಗಮನ ಖಚಿತ ಆದರೆ..

ಬಿಸಿಸಿಐ ಅಧಿಕಾರಿ ಇನ್‌ಸೈಡ್‌ ಸ್ಪೋರ್ಟ್‌ಗೆ ನೀಡಿರುವ ಹೇಳಿಕೆ ಹೀಗಿದೆ. "ರೋಹಿತ್ ಶರ್ಮಾ ಹಾಗು ವಿರಾಟ್ ಕೊಹ್ಲಿಯನ್ನು ಟಿ20 ತಂಡದಿಂದ ಶಾಶ್ವತವಾಗಿ ಹೊರಗಿಡಲಾಗಿದೆ. ಭವಿಷ್ಯದಲ್ಲಿ ಏನು ಬೇಕಾದರೂ ಸಂಭವಿಸಬಹುದು. ಆದರೆ ಈಗ ಅವರನ್ನು ಬಿಟ್ಟು ಮುಂದುವರಿಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅವರನ್ನು ಬಿಟ್ಟು ಮುಂದುವರಿಯುವ ಮೂಲಕ 2024ರ ಟಿ20 ವಿಶ್ವಕಪ್‌ಗೆ ತಂಡದ ಸಿದ್ಧವಾಗಬೇಕಿದೆ. ದುರದೃಷ್ಟವಶಾತ್ ಅವರು ಹೊಸ ಯೋಜನೆಯಲ್ಲಿ ತಂಡದಲ್ಲಿ ಸಮರ್ಥವೆನಿಸುವುದಿಲ್ಲ" ಎಂದಿದ್ದಾರೆ

Ind vs SL: ಪ್ರಮುಖ ದಾಖಲೆ ಬರೆದ ಭಾರತ, ಲಂಕಾ ಹೆಸರಿಗೆ ಬೇಡದ ದಾಖಲೆ: 2ನೇ ಪಂದ್ಯದಲ್ಲಿ ಮುರಿದ 3 ದಾಖಲೆಗಳು!

ಅವರಿಗೆ ಮಾತನಾಡುವ ಹಕ್ಕಿದೆ

ಅವರಿಗೆ ಮಾತನಾಡುವ ಹಕ್ಕಿದೆ

ಇನ್‌ಸೈಡ್‌ ಸ್ಪೋರ್ಟ್ ವರದಿ ಮಾಡಿದಂತೆ ಮುಂದುವರಿದು ಮಾತನಾಡಿರುವ ಬಿಸಿಸಿಐ ಅಧಿಕಾರಿ, "ನಾವು ಅರ ಭವಿಷ್ಯವನ್ನು ನಿರ್ಧರಿಸಲು ಹೇಗೆ ಸಾಧ್ಯ? ರಾಷ್ಟ್ರೀಯ ಆಯ್ಕೆಗಾರರು ಮಾತ್ರವೇ ತಂಡದ ಹಿತದೃಷ್ಟಿಯನ್ನು ಇಟ್ಟುಕೊಂಡು ಆಯ್ಕೆ ಮಾಡುತ್ತಾರೆ. ರೋಹಿತ್, ವಿರಾಟ್ ಮತ್ತು ಇತರ ಆಟಗಾರರು ತಮ್ಮ ನಿರ್ಧಾರವನ್ನು ಹೇಳಿಕೊಳ್ಳಲು ಹಾಗೂ ಅದರ ಬಗ್ಗೆ ಮಾತನಾಡಲು ಸಂಪೂರ್ಣವಾಗಿ ಸ್ವತಂತ್ರವಾಗಿದ್ದಾರೆ" ಎಂದಿದ್ದಾರೆ.

IND vs AUS: ಆಸ್ಟ್ರೇಲಿಯಾ ವಿರುದ್ಧದ ಮೊದಲ 2 ಟೆಸ್ಟ್ ಪಂದ್ಯಗಳಿಗೆ ಭಾರತ ತಂಡ ಪ್ರಕಟ

ಕಿವೀಸ್ ಸರಣಿಗೆ ಭಾರತದ ಟಿ20 ತಂಡ ಹೀಗಿದೆ

ಕಿವೀಸ್ ಸರಣಿಗೆ ಭಾರತದ ಟಿ20 ತಂಡ ಹೀಗಿದೆ

ಹಾರ್ದಿಕ್ ಪಾಂಡ್ಯ (ನಾಯಕ), ಸೂರ್ಯಕುಮಾರ್ ಯಾದವ್ (ಉಪನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶ್‌ದೀಪ್ ಸಿಂಗ್, ಉಮ್ರಾನ್ ಮಲಿಕ್, ಶಿವಂ ಮಾವಿ, ಪೃಥ್ವಿ ಶಾ, ಮುಖೇಶ್ ಕುಮಾರ್.

Story first published: Saturday, January 14, 2023, 9:47 [IST]
Other articles published on Jan 14, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+