
ಶಿಖರ್ ಧವನ್ ಜೊತೆಗೆ ಗಿಲ್ ಜೊತೆಯಾಟ ಮುಂದುವರಿಯಲಿದೆ!
ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಏಕದಿನ ಸರಣಿಯಲ್ಲಿ ನಾಯಕ ಶಿಖರ್ ಧವನ್ ಅವರ ಆರಂಭಿಕ ಪಾಲುದಾರ ಯುವ ಆಟಗಾರ ಶುಭಮನ್ ಗಿಲ್ ಜೊತೆಯಾಟ ಕ್ಲಿಕ್ ಆಗಿದೆ. ಹೀಗಾಗಿ ಜಿಂಬಾಬ್ವೆ ವಿರುದ್ಧ ಭಾರತ ಇದೇ ಜೋಡಿಯನ್ನು ಉಳಿಸಿಕೊಳ್ಳುವುದು ನಿಶ್ಚಿತ.
ವಿಂಡೀಸ್ ವಿರುದ್ಧ ಗಿಲ್ ಅದ್ಭುತ ಪ್ರದರ್ಶನ ನೀಡಿದ್ದರು. ಎರಡು ಅರ್ಧಶತಕಗಳನ್ನು ಗಳಿಸಿದ ಆಟಗಾರನು ಸರಣಿ ಶ್ರೇಷ್ಟ ಆಟಗಾರನಾಗಿಯೂ ಹೊರಹೊಮ್ಮಿದರು. ಧವನ್‌ಗೆ ತಮ್ಮ ಏಕದಿನ ವೃತ್ತಿಜೀವನವನ್ನು ಮತ್ತಷ್ಟು ಸುಧಾರಿಸಿಕೊಳ್ಳಲು ಮತ್ತೊಂದು ಸುವರ್ಣ ಅವಕಾಶ ಒದಗಿದೆ. ಅವರು ಈ ಸರಣಿಯಲ್ಲಿ ಗರಿಷ್ಠ ರನ್ ಗಳಿಸಲು ಪ್ರಯತ್ನಿಸಲಿದ್ದಾರೆ.

ಮಧ್ಯಮ ಕ್ರಮಾಂಕ ಪರೀಕ್ಷೆಗೆ ಒಳಪಡಲಿದೆ
ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ಈ ಪಂದ್ಯದಲ್ಲಿ ವಿಭಿನ್ನ ಮಧ್ಯಮ ಕ್ರಮಾಂಕವನ್ನು ಪರೀಕ್ಷಿಸಲಿದೆ. ಭಾರತ ತಂಡದಲ್ಲಿ ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ ಸೇರಿದಂತೆ ದೊಡ್ಡ ಹೆಸರುಗಳಿಲ್ಲ. ಜಿಂಬಾಬ್ವೆ ವಿರುದ್ಧ ಯುವ ಆಟಗಾರ ರುತುರಾಜ್ ಗಾಯಕ್ವಾಡ್ ಮೂರನೇ ಕ್ರಮಾಂಕದಲ್ಲಿ ಆಡಬಹುದು. ಹೊಸಬರಾದ ರಾಹುಲ್ ತ್ರಿಪಾಠಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ, ಆದರೆ ಅವರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಇರುತ್ತಾರೆಯೇ ಎಂಬ ಅನುಮಾನವಿದೆ.
ತನ್ನ ಫಿಟ್ನೆಸ್ ಕುರಿತು ಪ್ರಮುಖ ಮಾಹಿತಿ ನೀಡಿದ ಕೆ.ಎಲ್ ರಾಹುಲ್: ಟೀಂ ಇಂಡಿಯಾ ಕಂಬ್ಯಾಕ್ ಯಾವಾಗ?

ಸಂಜು ಸ್ಯಾಮ್ಸನ್‌ನ್‌ಗೆ ಐದನೇ ಕ್ರಮಾಂಕ?
ಭಾರತದ ಪರ ಯುವ ವಿಕೆಟ್ ಕೀಪರ್ ಇಶಾನ್ ಕಿಶನ್ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಸಂಜು ಸ್ಯಾಮ್ಸನ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಅಲ್ಲದೆ ತಂಡಕ್ಕೆ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ. ಇದಕ್ಕೂ ಮುನ್ನ ವಿಂಡೀಸ್ ವಿರುದ್ಧ ಸಂಜು ತಂಡದ ಹೆಚ್ಚು ರನ್ ಪಡೆದಿರಲಿಲ್ಲ. ಸಂಜು ಅವರು ಸರಣಿಯಲ್ಲಿ ತಮ್ಮ ವೃತ್ತಿಜೀವನದ ಮೊದಲ ಅರ್ಧಶತಕವನ್ನು ಗಳಿಸಿದರು.
ಟಿ20 ವಿಶ್ವಕಪ್‌ಗೆ ಈ ಸ್ಟಾರ್ ಆಯ್ಕೆಯಾಗುವುದು ಡೌಟು; ಪಾರ್ಥಿವ್ ಪಟೇಲ್
ದೀಪಕ್ ಹೂಡಾ ಮತ್ತು ಅಕ್ಷರ್ ಪಟೇಲ್ ಭಾರತ ತಂಡದಲ್ಲಿ ಆಲ್ ರೌಂಡರ್ ಆಗಲಿದ್ದಾರೆ. ಈ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಅವರಿಗೆ ವಿಶ್ರಾಂತಿ ನೀಡಿದೆ. ಆದ್ದರಿಂದ, ಹೂಡಾ ಮತ್ತು ಅಕ್ಷರ್ ಸರಣಿಯಲ್ಲಿ ನಿರ್ಣಾಯಕ ಪಾತ್ರವನ್ನು ಹೊಂದಿರುತ್ತಾರೆ. ಭಾರತದ ಬ್ಯಾಟಿಂಗ್‌ನಲ್ಲಿ ಹೂಡಾ ಅವರನ್ನು ಅಗ್ರಸ್ಥಾನಕ್ಕೆ ಏರಿಸುವ ಸಾಧ್ಯತೆಯೂ ಇದೆ.
ಈ ಹಿಂದೆ ವಿಂಡೀಸ್ ವಿರುದ್ಧದ ಸರಣಿಯಲ್ಲಿ ಅಕ್ಷರ್ ಅದ್ಭುತ ಪ್ರದರ್ಶನ ನೀಡಿದ್ದರು. ಜಿಂಬಾಬ್ವೆ ವಿರುದ್ಧ ಅದೇ ಪ್ರದರ್ಶನವನ್ನು ಪುನರಾವರ್ತಿಸಲು ಪ್ರಯತ್ನಿಸುತ್ತಾರೆ.

ಬೌಲಿಂಗ್‌ನಲ್ಲಿ ಯಾರಿಗೆಲ್ಲಾ ಸ್ಥಾನ?
ಬೌಲಿಂಗ್ ದಾಳಿಗೆ ಬಂದರೆ, ಕುಲದೀಪ್ ಯಾದವ್ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಲಿದ್ದಾರೆ. ದೀಪಕ್ ಚಹಾರ್, ಪ್ರಸಿದ್ದ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ಪೇಸ್ ಬೌಲಿಂಗ್‌ನ ಚುಕ್ಕಾಣಿ ಹಿಡಿಯಲಿದ್ದಾರೆ. ಈ ಸರಣಿಯು ಸುದೀರ್ಘ ಅಂತರದ ನಂತರ ಚಹಾರ್ ರಾಷ್ಟ್ರೀಯ ತಂಡಕ್ಕೆ ಮರಳಿರುವುದನ್ನು ಸೂಚಿಸುತ್ತದೆ. ಅವರು ಗಾಯಗೊಂಡ ಬಳಿಕ ಐಪಿಎಲ್‌ನಲ್ಲೂ ಆಡದೆ ಈ ವರ್ಷದ ಮಾರ್ಚ್‌ನಿಂದ ವಿಶ್ರಾಂತಿ ಪಡೆದರು. ಏಕದಿನ ಸರಣಿಯು ಕುಲ್‌ದೀಪ್‌ಗೆ ತನ್ನ ಫಾರ್ಮ್ ಅನ್ನು ಮರಳಿ ಪಡೆಯಲು ಮತ್ತು ತಂಡದಲ್ಲಿ ತನ್ನನ್ನು ತಾನು ಸ್ಥಾಪಿಸಿಕೊಳ್ಳಲು ಒಂದು ಅವಕಾಶವಾಗಿದೆ.

ಜಿಂಬಾಬ್ವೆ ವಿರುದ್ಧ ಸರಣಿಗೆ ಭಾರತದ ಸ್ಕ್ವಾಡ್
ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್-ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ದ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್


Click it and Unblock the Notifications












