WTC Final: ಜೂನ್ 3ಕ್ಕೆ ಇಂಗ್ಲೆಂಡ್ ತಲುಪಲಿದೆ ಟೀಮ್ ಇಂಡಿಯಾ

ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟೂರ್ನಿಯ ಫೈನಲ್ ಪಂದ್ಯ ಜೂನ್ 18ರಿಂದ 22ರವರೆಗೆ ಸೌತಂಪ್ಟನ್ ಕ್ರೀಡಾಂಗಣದಲ್ಲಿ ನಡೆಯಲಿದ್ದು ನ್ಯೂಜಿಲೆಂಡ್ ತಂಡ ಈಗಾಗಲೇ ಸೌತಂಪ್ಟನ್ ತಲುಪಿದೆ. ಇತ್ತ ಟೀಂ ಇಂಡಿಯಾ ತಂಡದ ಆಟಗಾರರು ಕ್ವಾರಂಟೈನ್ ನಿಯಮವನ್ನು ಪಾಲಿಸುತ್ತಿದ್ದು ಜೂನ್ 3ರಂದು ಚಾರ್ಟರ್ಡ್ ವಿಮಾನದ ಮೂಲಕ ಇಂಗ್ಲೆಂಡ್ ತಲುಪಲಿದ್ದಾರೆ.
ಮುಂಬೈ ತಂಡದಲ್ಲಿದ್ದಾಗ ಅವಕಾಶ ಸಿಗದೇ ಕಡೆಗಣಿಸಲ್ಪಟ್ಟ ಈ ಆಟಗಾರರು ಇಂದು ಸ್ಟಾರ್ ಪ್ಲೇಯರ್ಸ್!
ಎಲ್ಲೆಡೆ ಕೊರೊನಾವೈರಸ್ ಹಾವಳಿ ಹೆಚ್ಚಿರುವ ಕಾರಣ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾ ತಂಡದ ಆಟಗಾರರು ಕಡ್ಡಾಯವಾಗಿ ನೆಗೆಟಿವ್ ವರದಿಯನ್ನು ಸಾಕ್ಷಿಯಾಗಿ ತೆಗೆದುಕೊಂಡು ಹೋಗಬೇಕಾಗಿದೆ. ಸೌತಾಂಪ್ಟನ್ ತಲುಪಿದ ಬಳಿಕ ಮತ್ತೊಮ್ಮೆ ಆಟಗಾರರಿಗೆ ಕೊರೊನಾ ಸೋಂಕಿನ ಪರೀಕ್ಷೆಯನ್ನು ನಡೆಸಿ ತದನಂತರ ವ್ಯವಸ್ಥಿತ ಐಸೋಲೇಷನ್‌ಗೆ ಒಳಪಡಿಸಲಾಗುತ್ತದೆ.
ಹೀಗೆ ಐಸೋಲೇಷನ್‌ಗೆ ಒಳಪಟ್ಟ ಆಟಗಾರರಿಗೆ ಐಸೋಲೇಷನ್ ವೇಳೆಯೇ ದಿನನಿತ್ಯದ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುವುದು. ಹೀಗೆ ಕೆಲ ವೈದ್ಯಕೀಯ ಪರೀಕ್ಷೆಗಳ ಬಳಿಕ ಪದೇ ಪದೇ ನೆಗೆಟಿವ್ ವರದಿ ಬಂದರೆ ಆಟಗಾರರಿಗೆ ಕ್ರಮೇಣವಾಗಿ ತಂಡದ ಇತರ ಆಟಗಾರರ ಜೊತೆ ಬೆರೆಯಲು ಅನುಮತಿ ನೀಡಲಾಗುವುದು ಎಂಬ ಮಾಹಿತಿ ಸಿಕ್ಕಿದೆ.
ಧೋನಿಗೆ 15 ಕೋಟಿ ಕೊಟ್ಟು ತಂಡದಲ್ಲಿ ಉಳಿಸಿಕೊಳ್ಳುವುದು ವ್ಯರ್ಥ ಎಂದ ಮಾಜಿ ಕ್ರಿಕೆಟಿಗ!
ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾ ತಂಡ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಮುಗಿದ ನಂತರ ಆಗಸ್ಟ್ 4ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications