India Vs Netherlands: ಪಾಕ್ ವಿರುದ್ಧದ ಜಯದ ನಂತರ ಮತ್ತೊಂದು ಗೆಲುವಿಗೆ ಟೀಂ ಇಂಡಿಯಾ ಸಿದ್ಧತೆ

ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಟೀಂ ಇಂಡಿಯಾ ಸಿಡ್ನಿಗೆ ಪ್ರಯಾಣ ಬೆಳೆಸಿದ್ದು, ಅಲ್ಲಿ ತಮ್ಮ ಟಿ20 ವಿಶ್ವಕಪ್‌ನ ಎರಡನೇ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ. ಸೋಮವಾರ ಸಿಡ್ನಿಗೆ ಪ್ರಯಾಣ ಮಾಡುವ ಮುನ್ನ, ಭಾನುವಾರ ರಾತ್ರಿ ಪಂದ್ಯ ಮುಗಿದ ನಂತರ ರೋಹಿತ್ ಶರ್ಮಾ ಮತ್ತು ತಂಡ ಸಂಭ್ರಮಾಚರಣೆ ಮಾಡಿದರು.
ಸೋಮವಾರ ಇಡೀ ದಿನ ಟೀಂ ಇಂಡಿಯಾ ಆಟಗಾರರು ವಿಶ್ರಾಂತಿ ಪಡೆದರು. ಅಲ್ಲದೆ, ಹೋಟೆಲ್‌ನಲ್ಲಿ ದೀಪಾವಳಿ ಆಚರಿಸಿ ಸಂಭ್ರಮಿಸಿದರು. ಮಂಗಳವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (SCG) ಟೀಂ ಇಂಡಿಯಾ ಆಟಗಾರರು ಅಭ್ಯಾಸ ಆರಂಭಿಸಲಿದ್ದಾರೆ. ಅಕ್ಟೋಬರ್ 27 ರಂದು ಐಕಾನಿಕ್ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಭಾರತವು ನೆದರ್ಲ್ಯಾಂಡ್ಸ್ ವಿರುದ್ಧ ಆಡಲಿದೆ.
ಭಾನುವಾರದಂದು 90,000 ಪ್ರೇಕ್ಷಕರು ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಸಾರ್ವಕಾಲಿಕ ಶ್ರೇಷ್ಠ ಟಿ20 ಪಂದ್ಯಗಳಲ್ಲಿ ಒಂದಕ್ಕೆ ಸಾಕ್ಷಿಯಾದರು. ಭಾರತ ಕೊನೆಯ ಎಸೆತದಲ್ಲಿ ರೋಚಕ ಗೆಲುವು ಸಾಧಿಸಿ ಸಂಭ್ರಮಿಸಿತು. ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ ಅಜೇಯ 82 ರನ್ ಗಳಿಸುವ ಮೂಲಕ ಭಾರತಕ್ಕೆ ಅಭೂತಪೂರ್ವ ಗೆಲುವು ತಂದುಕೊಟ್ಟರು.

ಮಂಗಳವಾರ ರೋಹಿತ್ ಶರ್ಮಾ ಪಡೆ ಅಭ್ಯಾಸ
ರೋಹಿತ್ ಶರ್ಮಾ ಮತ್ತು ತಂಡ ಮಂಗಳವಾರ ಮೈದಾನದಲ್ಲಿ ತಮ್ಮ ಮೊದಲ ಅಭ್ಯಾಸದ ಸೆಷನ್‌ನಲ್ಲಿ ಭಾಗವಹಿಸಲಿದ್ದಾರೆ. ಸಿಡ್ನಿಯಲ್ಲಿನ ಪಿಚ್ ಪಾಕಿಸ್ತಾನದ ಪಂದ್ಯದ ಸಮಯದಲ್ಲಿ ಆಡಿದ ಪಿಚ್‌ಗಿಂತ ಭಿನ್ನವಾಗಿದೆ ಮತ್ತು ಭಾರತವು ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳಲು ಅಭ್ಯಾಸ ಮಾಡಲಿದೆ.
ನೆದರ್ಲ್ಯಾಂಡ್ಸ್ ಹೆಚ್ಚು ಅಪಾಯವನ್ನುಂಟು ಮಾಡುವ ನಿರೀಕ್ಷೆಯಿಲ್ಲದಿದ್ದರೂ, ಬಾಂಗ್ಲಾದೇಶದ ವಿರುದ್ಧ ಅವರು ಯಾವ ರೀತಿ ಆಡಿದರು ಎನ್ನುವುದನ್ನು ಗಮನಿಸಿದೆ. ಯಾವುದೇ ತಂಡವನ್ನು ಹಗುರವಾಗಿ ಪರಿಣಿಸಲು ಸಾಧ್ಯವಿಲ್ಲದ ಕಾರಣ, ಭಾರತವು ಇನ್ನೂ ಜಾಗರೂಕತೆಯಿಂದ ಕೂಡಿರುತ್ತದೆ. ಸೆಮಿಫೈನಲ್‌ಗೆ ಪೈಪೋಟಿ ಬಿಗಿಯಾಗಿರುವುದರಿಂದ, ನೆದರ್ಲ್ಯಾಂಡ್ಸ್ ವಿರುದ್ಧ ಹೆಚ್ಚಿನ ಅಂತರದಲ್ಲಿ ಗೆಲ್ಲುವ ಮೂಲಕ ರನ್‌ರೇಟ್ ಉತ್ತಮಪಡಿಸಿಕೊಳ್ಳಲು ಭಾರತ ತಂಡ ಪ್ರಯತ್ನಿಸುತ್ತದೆ.
ಮಳೆಯೇ ನಮ್ಮ ದೊಡ್ಡ ಎದುರಾಳಿ: ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಹೀಗೆ ಹೇಳಿದ್ದೇಕೆ?

ಅಗ್ರ ಕ್ರಮಾಂಕ ಉತ್ತಮ ಪ್ರದರ್ಶನ ನೀಡಬೇಕು
ಪಾಕಿಸ್ತಾನದ ವಿರುದ್ಧ ಗೆಲುವಿನ ಹೊರತಾಗಿಯೂ ಟೀಂ ಇಂಡಿಯಾ ತನ್ನ ಅಗ್ರಕ್ರಮಾಂಕದ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಿದೆ. ಪಾಕಿಸ್ತಾನದ ವಿರುದ್ಧ ಕೆಎಲ್ ರಾಹುಲ್, ರೋಹಿತ್ ಶರ್ಮಾ ರನ್ ಗಳಿಸಲು ವಿಫಲರಾದರು. ಉತ್ತಮ ಫಾರ್ಮ್‌ನಲ್ಲಿರುವ ಸೂರ್ಯಕುಮಾರ್ ಯಾದವ್ ಕೂಡ ಬೇಗನೆ ಔಟಾದರು. ಇನ್ನು ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅಕ್ಷರ್ ಪಟೇಲ್ ನಿರಾಸೆ ಮೂಡಿಸಿದ್ದಾರೆ. ಒಂದೇ ಓವರ್ ನಲ್ಲಿ 21 ರನ್ ಬಿಟ್ಟುಕೊಟ್ಟು ಭಾರಿ ದುಬಾರಿ ಬೌಲರ್ ಎನಿಸಿಕೊಂಡರು.
ಯುಜ್ವೇಂದ್ರ ಚಹಾಲ್, ರಿಷಬ್ ಪಂತ್ ಮತ್ತು ದೀಪಕ್ ಹೂಡಾ ಅವಕಾಶಕ್ಕಾಗಿ ಕಾಯುತ್ತಿರುವಾಗ ಅಕ್ಷರ್ ಪಟೇಲ್ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಅತ್ಯುತ್ತಮ ಪ್ರದರ್ಶನ ನೀಡಲೇಬೇಕಾದ ಒತ್ತಡದಲ್ಲಿದ್ದಾರೆ.

ಎರಡೂ ತಂಡಗಳ ಸಂಭಾವ್ಯ ಪ್ಲೇಯಿಂಗ್ 11
ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್
ನೆದರ್ಲ್ಯಾಂಡ್ಸ್: ಮ್ಯಾಕ್ಸ್ ಓಡೌಡ್, ವಿಕ್ರಮಜಿತ್ ಸಿಂಗ್, ಬಾಸ್ ಡಿ ಲೀಡೆ, ಕಾಲಿನ್ ಅಕರ್ಮನ್, ಟಾಮ್ ಕೂಪರ್, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಟಿಮ್ ಪ್ರಿಂಗಲ್, ಲೋಗನ್ ವ್ಯಾನ್ ಬೀಕ್, ಶರೀಜ್ ಅಹ್ಮದ್, ಫ್ರೆಡ್ ಕ್ಲಾಸೆನ್, ಪಾಲ್ ವ್ಯಾನ್ ಮೀಕೆರೆನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications