Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asia Cup T20: ಪಾಕಿಸ್ತಾನ ತಂಡಕ್ಕೆ ಭಯ ಹುಟ್ಟಿಸಿದ ನಾಲ್ವರು ಆಟಗಾರರು

ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ ಗೆಲುವಿನ ಆರಂಭವನ್ನು ಮಾಡಿದೆ. ಟೀಮ್ ಇಂಡಿಯಾ, ಯುಎಇ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಟೀಮ್ ಇಂಡಿಯಾ ಏಷ್ಯಾ ಕಪ್‌ ಇತಿಹಾಸದಲ್ಲೇ ದೊಡ್ಡ ಗೆಲುವು ದಾಖಲಿಸಿದೆ. ಯುಎಇ ವಿರುದ್ಧ ಪಂದ್ಯದಲ್ಲಿ ಟೀಮ್ ಇಂಡಿಯಾ ಪೂರ್ಣ 2 ಅಂಕ ಕಲೆ ಹಾಕಿದಲ್ಲಿ ನಾಲ್ವರು ಆಟಗಾರರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.

ಟೀಮ್ ಇಂಡಿಯಾದ ಪರ ಸ್ಪಿನ್ ಬೌಲರ್‌ ಕುಲ್‌ದೀಪ್‌ ಯಾದವ್ ಅಮೋಘ ದಾಳಿಯನ್ನು ನಡೆಸಿದರು. ಇವರು 7 ರನ್‌ ನೀಡಿ 4 ವಿಕೆಟ್‌ ಪಡೆದರು. ಈ ಮೂಲಕ ಯುಎಇ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಪೆಟ್ಟು ನೀಡಿದರು. ಅಲ್ಲದೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಕುಲ್‌ದೀಪ್‌ ಯಾದವ್ ನಾಲ್ಕನೇ ಬಾರಿಗೆ 4 ವಿಕೆಟ್‌ ಪಡೆದು ಬೀಗಿದ್ದಾರೆ. ಇವರ ಬಿಗುವಿನ ದಾಳಿಯ ನೆರವಿನಿಂದ ಯುಎಇ 10 ರನ್‌ ಸೇರಿಸುಷ್ಟರಲ್ಲಿ 8 ವಿಕೆಟ್‌ ಕಳೆದುಕೊಂಡಿತು. ಕುಲ್‌ದೀಪ್‌ ಅವರ ಬಿಗುವಿನ ದಾಳಿಗೆ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು.

Team India s Historic Asia Cup Win Key Players Shine and Ignite Pakistan Rivalry

ಟೀಮ್ ಇಂಡಿಯಾದ ಆಲ್‌ರೌಂಡರ್‌ ಶಿವಂ ದುಬೆ ಅಬ್ಬರಿಸಿದರು. ಆರು ವರ್ಷದ ಬಳಿಕ ಶಿವಂ ದುಬೆ 3ಕ್ಕೂ ಹೆಚ್ಚು ವಿಕೆಟ್‌ ಪಡೆದು ಬೀಗಿದರು. ಶಿವಂ ದುಬೆ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4 ರನ್‌ಗೆ 3 ವಿಕೆಟ್‌ ಕಬಳಿಸಿದ್ದು, ದೊಡ್ಡ ಸಾಧನೆ ಆಗದೆ. ಇವರ ಸ್ಥಿರ ಪ್ರದರ್ಶನ ಪಾಕ್‌ ಆಟಗಾರರಿಗೆ ಭಯ ಆರಂಭವಾಗಿದೆ.

ಆರಂಭಿಕ ಬ್ಯಾಟರ್‌ಗಳ ಅಬ್ಬರ

ಟೀಮ್ ಇಂಡಿಯಾ 58 ರನ್‌ಗಳ ಗುರಿಯನ್ನು ಬೆನ್ನಟಿದಾಗ ಆರಂಭಿಕರಾದ ಸ್ನೇಹಿತರಾದ ಶುಭಮನ್‌ ಗಿಲ್ ಹಾಗೂ ಅಭಿಷೇಕ್‌ ಶರ್ಮಾ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 23 ಎಸೆತಗಳಲ್ಲಿ 48 ರನ್‌ಗಳ ಜೊತೆಯಾಟವನ್ನು ನೀಡಿತು. ಆರಂಭಿಕ ಅಭಿಷೇಕ್ ಶರ್ಮಾ 2 ಬೌಂಡರಿ, 3 ಸಿಕ್ಸರ್ ಸಹಾಯದಿಂದ 30 ರನ್‌ ಬಾರಿಸಿ ಔಟ್ ಆದರು. ಶುಭಮನ್‌ ಗಿಲ್ ಅಜೇಯ 20 ರನ್‌ ಬಾರಿಸಿದರೆ, ಸೂರ್ಯಕುಮಾರ್ ಯಾದವ್ ಅಜೇಯ 7 ರನ್‌ ಸಿಡಿಸಿ ತಂಡದ ಗೆಲುವಿನಲ್ಲಿ ಮಿಂಚಿದರು. ಟೀಮ್ ಇಂಡಿಯಾ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ನಲ್ಲಿ 27 ಎಸೆತಗಳಲ್ಲಿ 58 ರನ್‌ ಸಿಡಿಸಿ ಮಿಂಚಿತು.

ಯುಎಇ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಟೀಮ್ ಇಂಡಿಯಾದ ಪ್ರದರ್ಶನ ಪಾಕಿಸ್ತಾನ ತಂಡಕ್ಕೆ ಭಯವನ್ನು ಹುಟ್ಟಿಸಿದೆ. ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್‌ ಪಂದ್ಯ ಸೆ.14 ರಂದು ನಡೆಯಲಿದೆ. ಈ ಪಂದ್ಯದ ಮೇಲೆ ಇಡೀ ವಿಶ್ವದ ಚಿತ್ತ ನೆಟ್ಟಿದೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನತೆಯ ಬಳಿಕ ಉಭಯ ದೇಶಗಳು ಇದೇ ಮೊದಲ ಬಾರಿಗೆ ಅಂಗಳಕ್ಕೆ ಇಳಿಯುತ್ತಿರುವುದು ಎಲ್ಲರ ಕುತೂಹಲ ಕೆರಳಿಸಿದೆ.

Story first published: Thursday, September 11, 2025, 8:10 [IST]
Other articles published on Sep 11, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+