ಆಸೀಸ್, ಅಫ್ಘಾನ್ ವಿರುದ್ಧದ ತವರಿನ ವೈಟ್‌ಬಾಲ್ ಸರಣಿಗೆ ಭಾರತದ ವೇಳಾಪಟ್ಟಿ; ಬೆಂಗಳೂರಲ್ಲೂ 1 ಪಂದ್ಯ
2023-2024ರ ತವರಿನ ಋತುವಿನಲ್ಲಿ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳನ್ನು ಆಡುವುದಕ್ಕೂ ಮುನ್ನ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಭಾರತ ತಂಡವು ತಮ್ಮ 2023ರ ವಿಶ್ವಕಪ್ ಸಿದ್ಧತೆಗಳನ್ನು ಉತ್ತಮಗೊಳಿಸಲು ಯೋಜನೆ ಹಾಕಿಕೊಂಡಿದೆ.
ಅಲ್ಲದೆ, ವಿಶ್ವಕಪ್ ನಂತರ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ 5 ಪಂದ್ಯಗಳ ಟಿ20 ಸರಣಿ ಹಾಗೂ ಅಫ್ಘಾನಿಸ್ತಾನ ವಿರುದ್ಧ 3 ಪಂದ್ಯಗಳ ಟಿ20 ಸರಣಿಗೆ ಬಿಸಿಸಿಐ ಮಂಗಳವಾರ, ಜುಲೈ 25ರಂದು ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯ ಸೆಪ್ಟೆಂಬರ್ 22ರಂದು ಮೊಹಾಲಿಯಲ್ಲಿ ನಡೆಯಲಿದ್ದರೆ, ಸೆಪ್ಟೆಂಬರ್ 24ರಂದು ಇಂದೋರ್ ಮತ್ತು ಸೆಪ್ಟೆಂಬರ್ 27ರಂದು ರಾಜ್‌ಕೋಟ್ ಏಕದಿನ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದಂತೆ, ಮೊಹಾಲಿ, ನಾಗ್ಪುರ, ರಾಜ್‌ಕೋಟ್, ಇಂದೋರ್, ತಿರುವನಂತಪುರಂ ಸ್ಥಳಗಳು 2023ರ ಏಕದಿನ ವಿಶ್ವಕಪ್ ಪಂದ್ಯಗಳ ಆತಿಥ್ಯವನ್ನು ತಪ್ಪಿಸಿಕೊಂಡಿವೆ. ಹೀಗಾಗಿ ತವರು ಋತುವಿನ ಸರಣಿಯಲ್ಲಿ ಕನಿಷ್ಠ ತಲಾ ಎರಡು ಪಂದ್ಯಗಳನ್ನು ಆಯೋಜಿಸುವ ಮೂಲಕ ಪರಿಹಾರ ಒದಗಿಸಲಾಗಿದೆ.

ಬಿಸಿಸಿಐ ಈ ವಾರದ ಅವಧಿಯಲ್ಲೇ ಮಾಧ್ಯಮ ಹಕ್ಕುಗಳ ಟೆಂಡರ್ ಅನ್ನು ಘೋಷಿಸಲು ನಿರ್ಧರಿಸಿರುವುದರಿಂದ, ಭಾರತ ತಂಡದ ತವರಿನ ಸರಣಿಯ ವೇಳಾಪಟ್ಟಿಯನ್ನು ಘೋಷಿಸುವುದು ಅನಿವಾರ್ಯವಾಗಿತ್ತು. ಅಲ್ಲದೆ, ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲೇ ನಡೆಯುವ ವಿಶ್ವಕಪ್ ನಂತರ ಯಾವುದೇ ಏಕದಿನ ಪಂದ್ಯವನ್ನು ಆಡದಿರುವುದು ಗಮನಾರ್ಹ ಸಂಗತಿವಾಗಿದೆ.
ಮುಂದಿನ ವರ್ಷ ಭಾರತ ತಂಡ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ 2024ರ ಟಿ20 ವಿಶ್ವಕಪ್ ಆಡಲಿದೆ. ಹೀಗಾಗಿ ಏಕದಿನ ವಿಶ್ವಕಪ್ ಪಂದ್ಯಾವಳಿ ಮುಗಿದ ಒಂದು ವಾರದ ನಂತರ, ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡವು ಆಸ್ಟ್ರೇಲಿಯಾ ವಿರುದ್ಧ ಐದು ಟಿ20 ಪಂದ್ಯಗಳನ್ನು ಆಡಲಿದೆ.
ಬಳಿಕ 2024ರ ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಮೂರು ಟಿ20 ಪಂದ್ಯಗಳು ಸೇರಿದಂತೆ ಒಟ್ಟು ಟಿ20 ಪಂದ್ಯಗಳನ್ನು ತವರಿನಲ್ಲಿ ಆಡುವ ಮೂಲಕ 2024ರ ಟಿ20 ವಿಶ್ವಕಪ್‌ಗೆ ತಯಾರಿ ನಡೆಸಲಿದೆ.
ಅಫ್ಘಾನಿಸ್ತಾನ ತಂಡವು 2018ರಲ್ಲಿ ಭಾರತದಲ್ಲಿ ಟೆಸ್ಟ್ ಪಂದ್ಯವನ್ನು ಆಡಿತ್ತು. ಆದರೆ ವೈಟ್ ಬಾಲ್ ಸರಣಿಯನ್ನು ಭಾರತದಲ್ಲಿ ಮೊದಲ ಬಾರಿಗೆ ಆಡಲಿದೆ. ಜನವರಿ 17ರಂದು ಮೂರನೇ ಟಿ20 ಪಂದ್ಯವು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ವೇಳಾಪಟ್ಟಿ
ಸೆಪ್ಟಂಬರ್ 22 - ಮೊದಲ ಏಕದಿನ ಪಂದ್ಯ, ಮೊಹಾಲಿ
ಸೆಪ್ಟೆಂಬರ್ 24 - ಎರಡನೇ ಏಕದಿನ ಪಂದ್ಯ, ಇಂದೋರ್
ಸೆಪ್ಟೆಂಬರ್ 27 - ಮೂರನೇ ಏಕದಿನ ಪಂದ್ಯ, ರಾಜ್‌ಕೋಟ್
ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ವೇಳಾಪಟ್ಟಿ
ನವೆಂಬರ್ 23 - ಮೊದಲ ಟಿ20 ಪಂದ್ಯ, ವಿಶಾಖಪಟ್ಟಣಂ
ನವೆಂಬರ್ 26 - ಎರಡನೇ ಟಿ20 ಪಂದ್ಯ, ತಿರುವನಂತಪುರಂ
ನವೆಂಬರ್ 28 - ಮೂರನೇ ಟಿ20 ಪಂದ್ಯ, ಗುವಾಹಟಿ
ಡಿಸೆಂಬರ್ 1 - ನಾಲ್ಕನೇ ಟಿ20 ಪಂದ್ಯ, ನಾಗ್ಪುರ
ಡಿಸೆಂಬರ್ 3 - ಐದನೇ ಟಿ20 ಪಂದ್ಯ, ಹೈದರಾಬಾದ್
ಅಫ್ಘಾನಿಸ್ತಾನ ವಿರುದ್ಧ ಟಿ20 ಸರಣಿ ವೇಳಾಪಟ್ಟಿ
ಜನವರಿ 11 - ಮೊದಲ ಟಿ20 ಪಂದ್ಯ, ಮೊಹಾಲಿ
ಜನವರಿ 14 - ಎರಡನೇ ಟಿ20 ಪಂದ್ಯ, ಇಂದೋರ್
ಜನವರಿ 17 - ಮೂರನೇ ಟಿ20 ಪಂದ್ಯ, ಬೆಂಗಳೂರು
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ವೇಳಾಪಟ್ಟಿ
ಜನವರಿ 25-29 - ಮೊದಲ ಟೆಸ್ಟ್ ಪಂದ್ಯ - ಹೈದರಾಬಾದ್
ಫೆಬ್ರವರಿ 2-6 - ಎರಡನೇ ಟೆಸ್ಟ್ ಪಂದ್ಯ - ವಿಶಾಖಪಟ್ಟಣಂ
ಫೆಬ್ರವರಿ 15-19 - ಮೂರನೇ ಟೆಸ್ಟ್ ಪಂದ್ಯ - ರಾಜ್‌ಕೋಟ್
ಫೆಬ್ರವರಿ 23-27 - ನಾಲ್ಕನೇ ಟೆಸ್ಟ್ ಪಂದ್ಯ - ರಾಂಚಿ
ಮಾರ್ಚ್ 3-7 - ಐದನೇ ಟೆಸ್ಟ್ ಪಂದ್ಯ - ಧರ್ಮಶಾಲಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications