Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs ENG: ಇಂಗ್ಲೆಂಡ್-ಭಾರತ ಟ್ರೋಫಿಗೆ ಇಟ್ಟಿರುವ ಹೆಸರು ಬಹಿರಂಗ: ಉಭಯ ದೇಶದ ದಿಗ್ಗಜರಿಗೆ ಗೌರವ

ಭಾರತ ಈಗ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಲಿದೆ. ಈ ವೇಳೆ ಭಾರತ, ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಟೆಸ್ಟ್‌ ಸರಣಿ ಆಯೋಜಿಸಲಾಗಿದೆ. ಈ ಟೆಸ್ಟ್‌ ಸರಣಿಗೆ ಈಗ ಹೆಸರು ಈಡಲಾಗಿದ್ದು, ಉಭಯ ದೇಶದ ಇಬ್ಬರು ದಂತಕತೆ ಆಟಗಾರರಿಗೆ ಗೌರವ ನೀಡಲಾಗಿದೆ. ಹಾಗಿದ್ರೆ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಸರಣಿಗೆ ಇಟ್ಟ ಹೆಸರು ಏನು ಎಂಬ ಬಗ್ಗೆ ಕಂಪ್ಲೀಟ್ ರಿಪೋರ್ಟ್‌ ಇಲ್ಲಿದೆ.

ಇಂಗ್ಲೆಂಡ್ ಪ್ರವಾಸದಲ್ಲಿ ಈಗಾಗಲೇ ಭಾರತ ತನ್ನ ಅದೃಷ್ಟ ಪರೀಕ್ಷೆಯನ್ನು ಆರಂಭಿಸಿದೆ. ಈ ವೇಳೆ ಭಾರತ ಎ ತಂಡ ಇಂಗ್ಲೆಂಡ್ ಲಯನ್ಸ್ ತಂಡದ ವಿರುದ್ಧ 2 ಅನಧಿಕೃತ ಟೆಸ್ಟ್ ಪಂದ್ಯಗಳನ್ನು ಆಡುತ್ತಿದೆ. ಈ ಟೂರ್ನಿ ಮುಗಿದ ಬಳಿಕ ಭಾರತ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್‌ ಸರಣಿ ಆರಂಭವಾಗಲಿದೆ. ಈ ಟೆಸ್ಟ್‌ ಸರಣಿಗೆ ಭಾರತದ ದಿಗ್ಗಜ ಆಟಗಾರ ಸಚಿನ್‌ ತೆಂಡೂಲ್ಕರ್‌ ಹಾಗೂ ಇಂಗ್ಲೆಂಡ್‌ನ ವೇಗಿ ಜೇಮ್ಸ್‌ ಆಂಡರ್ಸನ್‌ ಹೆಸರನ್ನು ಇಡಲಾಗಿದೆ. ಇವರಿಬ್ಬರ ಹೆಸರಿನಲ್ಲಿ ನಡೆಯುವ ಟ್ರೋಫಿಯನ್ನು ಜೂನ್‌ 20ರಂದು ರಿವೀಲ್‌ ಮಾಡಲಾಗುತ್ತದೆ.

Tendulkar-Anderson Trophy India-England Test Series Renamed in Honor of Legends

ಸಚಿನ್‌ ತೆಂಡೂಲ್ಕರ್‌ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ. ಇವರು ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ಆಟಗಾರ. ಸಚಿನ್ 1989 ರಿಂದ 2013ರ ವರೆಗೆ 200 ಟೆಸ್ಟ್‌ ಪಂದ್ಯವನ್ನು ಆಡಿದ್ದಾರೆ. ಇನ್ನು ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್‌ ಆಂಡರ್ಸನ್‌. ಇವರು ಇಂಗ್ಲೆಂಡ್ ಪರ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್. ಇವರು ಟೆಸ್ಟ್ ಕ್ರಿಕೆಟ್‌ನಲ್ಲಿ 704 ವಿಕೆಟ್‌ ಪಡೆದ ಸಾಧಕ. ಇವರು ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಅಲ್ಲದೆ ಈಗ ಇವರು ಇಂಗ್ಲೆಂಡ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಆದರೆ ಇವರು ಇನ್ನು ಕೌಂಟಿ ಕ್ರಿಕೆಟ್‌ ಆಡುತ್ತಿರುವುದನ್ನು ಕಾಣಬಹುದಾಗಿದೆ.

ದಿಗ್ಗಜರಿಗೆ ಗೌರವ

ಸಚಿನ್‌ ತೆಂಡೂಲ್ಕರ್ ಹಾಗೂ ಜೇಮ್ಸ್ ಆಂಡರ್ಸನ್‌ ಸತತ 14 ವರ್ಷ ಎದುರಾಳಿಗಳಾಗಿ ಆಡಿದ್ದಾರೆ. ಇನ್ನು ಟೆಸ್ಟ್‌ನಲ್ಲಿ ಯಾವೊಬ್ಬ ಬೌಲರ್‌ ತೆಂಡೂಲ್ಕರ್‌ ಅವರನ್ನು ಔಟ್ ಮಾಡಿದಷ್ಟು ಬಾರಿ ಜೇಮ್ಸ್ ಔಟ್ ಮಾಡಿದ್ದಾರೆ.

Tendulkar-Anderson Trophy India-England Test Series Renamed in Honor of Legends

ಈ ರೀತಿಯಾಗಿ ಮಾಜಿ ಆಟಗಾರರ ಹೆಸರನ್ನು ಇಟ್ಟು ಟ್ರೋಫಿಗೆ ಗೌರವಿಸು ಕಾರ್ಯ ಕಳೆದ ವರ್ಷದಿಂದ ಆರಂಭವಾಯಿತು. ಕಳೆದ ವರ್ಷ ಇಂಗ್ಲೆಂಡ್, ನ್ಯೂಜಿಲೆಂಡ್ ಪ್ರವಾಸ ಬೆಳೆಸಿದ್ದಾಗ ಕ್ರೋವ್-ಥಾರ್ಪ್ ಎಂಬ ಹೆಸರಿನಲ್ಲಿ ಟ್ರೋಫಿಯನ್ನು ಆಡಿಸಲಾಯಿತು. ನ್ಯೂಜಿಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್‌ ಮಾರ್ಟಿನ್ ಕ್ರೋವ್ ಮತ್ತು ಇಂಗ್ಲೆಂಡ್‌ನ ಗ್ರಹಾಂ ಥೋರ್ಪ್ ಅವರಿಗೆ ಈ ಮೂಲಕ ಗೌರವ ಸೂಚಿಸಲಾಗಿತ್ತು. ಇಂಗ್ಲೆಂಡ್ ಮತ್ತು ಭಾರತ ನಡುವಿನ ಟೆಸ್ಟ್ ಸರಣಿಯನ್ನು ಈ ಹಿಂದೆ ಪಟೌಡಿ ಟ್ರೋಫಿ ಎಂದು ಕರೆಯಲಾಗಿತ್ತು. ಕಳೆದ ವರ್ಷ ನಡೆದಿದ್ದ ಸರಣಿಯನ್ನು ಇಂಗ್ಲೆಂಡ್ ಗೆದ್ದು ಬೀಗಿತ್ತು. ಕಳೆದ ಬಾರಿ ಅಂದರೆ ಕೋವಿಡ್‌ ಸಮಯದಲ್ಲಿ ನಡೆದಿದ್ದ ಸರಣಿ ಡ್ರಾ ಆಗಿತ್ತು.

Story first published: Friday, June 6, 2025, 14:24 [IST]
Other articles published on Jun 6, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+