ಲಂಡನ್ , ಜೂ. 10: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪತ್ನಿ ಸಮೇತರಾಗಿ, ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಗೆಳತಿ ಸಮೇತರಾಗಿ ವಿಂಬಲ್ಡನ್ ಟೆನಿಸ್ ಸವಿಯುತ್ತಿದ್ದಾರೆ. ಪುರುಷರ ಸೆಮಿಫೈನಲ್ ಪಂದ್ಯವನ್ನು ಸಚಿನ್-ಅಂಜಲಿ, ವಿರಾಟ್-ಅನುಷ್ಕಾ ಜತೆಯಾಗಿ ವೀಕ್ಷಣೆ ಮಾಡಿದರು.
ವಿಂಬಲ್ಡನ್ ಟ್ವಿಟ್ಟರ್ ಖಾತೆ ಎಲ್ಲರೂ ಜತೆಯಾಗಿರುವ ಫೋಟೋ ವನ್ನು ಪ್ರಕಟ ಮಾಡಿದೆ. ಗಂಡ ಹೆಂಡತಿ ಮತ್ತು ಗೆಳೆಯ-ಗೆಳತಿ ಜತೆಯಾಗಿಯೇ ಕುಳಿತು ಪಂದ್ಯ ವೀಕ್ಷಣೆ ಮಾಡುತ್ತಿದ್ದಾರೆ.[ಬೆರಳಲ್ಲಿ ಬೆರಳಿಟ್ಟು ಹೆಜ್ಜೆ ಹಾಕಿದ ಮೀರಾ-ಮಾಧವ]

ನೋವಾನ್ ಜಾಕೋವಿಕ್ ಮತ್ತು ರಿಚರ್ಡ್ ಗಾಸ್ಕ್ವಟ್ ನಡುವೆ ನಡೆದ ಪುರುಚರ ಮೊದಲ ಸೆಮಿಫೈನಲ್ ಪಂದ್ಯವನ್ನು ಜೋಡಿ ವೀಕ್ಷಣೆ ಮಾಡಿದರು. ಸಚಿನ್ ರೋಜರ್ ಫೇಡರರ್ ಅಭಿಮಾನಿಯಾಗಿದ್ದು ಮೊದಲಿನಿಂದಲೂ ಟೆನಿಸ್ ಬೆಂಬಲಿಸಿಕೊಂಡೇ ಬಂದಿದ್ದಾರೆ.['ಧೋನಿಯೊಂದಿಗೆ ಹೋಲಿಸಬೇಡಿ, ಅನುಷ್ಕಾ ನನಗೆ ಪ್ರೇರಣೆ']
ಸಾನಿಯಾ ಜೋಡಿ ಫೈನಲ್ ಗೆ ಲಗ್ಗೆ
ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಸ್ವಿಸ್ ನ ಮಾರ್ಟಿನಾ ಹಿಂಗಿಸ್ ಜೋಡಿ ವಿಂಬಲ್ಡನ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಸಾನಿಯಾ ಮಿರ್ಜಾ-ಮಾರ್ಟಿನಾ ಹಿಂಗಿಸ್ ಸೆಮಿಫೈನಲ್‌ನಲ್ಲಿ ಅಮೆರಿಕದ 5ನೇ ಶ್ರೇಯಾಂಕದ ಜೋಡಿಯಾದ ರಾಕ್ವೆಲ್ ಕಾಪ್ಸ್ ಜೋನ್ಸ್-ಅಬಿಗೇಲ್ ಸ್ಪಿಯರ್ಅವರನ್ನು ಸೋಲಿಸಿ ಫೈನಲ್ ಪ್ರವೇಶ ಮಾಡಿದ್ದಾರೆ.