Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಚಿನ್, ವಿರಾಟ್ ಇರುವ ಸ್ಥಾನಕ್ಕೆ ಇತರೆ ಭಾರತೀಯರ ಹೆಸರನ್ನು ಸೇರಿಸುವುದು ತಪ್ಪು: ಭಾರತದ ಮಾಜಿ ಕ್ರಿಕೆಟಿಗ

Tendulkar Virat Are All Time Greats in My Book R Ashwin Not Quite There says Sanjay Manjrekar

ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದು ಜೂನ್ 18ರಿಂದ 22ರತವರೆಗೆ ನಡೆಯಲಿರುವ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಸೆಣಸಾಡಲಿದೆ. ಈ ಪಂದ್ಯ ಮುಗಿದ ಬಳಿಕ ಇಂಗ್ಲೆಂಡ್‌ನಲ್ಲಿಯೇ ಉಳಿದುಕೊಳ್ಳಲಿರುವ ಟೀಮ್ ಇಂಡಿಯಾ ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ.

ರವಿಚಂದ್ರನ್ ಅಶ್ವಿನ್ ಮಹಾನ್ ಬೌಲರ್ ಏನಲ್ಲ, ಆತನಿಗೆ ಸಮಸ್ಯೆಯಿದೆ: ಮಾಜಿ ಭಾರತೀಯ ಕ್ರಿಕೆಟಿಗ

ಈ ಇಂಗ್ಲೆಂಡ್ ಪ್ರವಾಸಕ್ಕೆ ಭಾರತದ ಆಟಗಾರ ರವಿಚಂದ್ರನ್ ಅಶ್ವಿನ್ ಕೂಡ ತೆರಳಿದ್ದು ಸದ್ಯ ಕ್ವಾರಂಟೈನ್ ನಿಯಮವನ್ನು ಅನುಸರಿಸುತ್ತಿದ್ದಾರೆ. ಹೀಗೆ ಇಂಗ್ಲೆಂಡ್ ತಲುಪಿರುವ ರವಿಚಂದ್ರನ್ ಅಶ್ವಿನ್ ಕುರಿತು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಮಾತನಾಡಿದ್ದು ರವಿಚಂದ್ರನ್ ಅಶ್ವಿನ್ ಸಾರ್ವಕಾಲಿಕ ಶ್ರೇಷ್ಠ ಆಟಗಾರನಲ್ಲ ಎಂದಿದ್ದಾರೆ. ಹೌದು ಇತ್ತೀಚಿಗಷ್ಟೆ ರವಿಚಂದ್ರನ್ ಅಶ್ವಿನ್ ಶ್ರೇಷ್ಠ ಬೌಲರ್ ಅಲ್ಲ, ಆತ ಕೆಲ ವಿದೇಶಿ ನೆಲಗಳಲ್ಲಿ ಹೆಚ್ಚಿನ ವಿಕೆಟ್ ಪಡೆಯುವಲ್ಲಿ ವಿಫಲನಾಗಿದ್ದಾನೆ, ಅಂತಹ ಬೌಲರ್ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಆಗಲು ಹೇಗೆ ಸಾಧ್ಯ? ಎಂದು ಮಂಜ್ರೇಕರ್ ಅಶ್ವಿನ್ ವಿರುದ್ಧ ಮಾತನಾಡಿದ್ದರು.

ಕೊಹ್ಲಿ, ರೋಹಿತ್ ಅಲ್ಲ ಈತನನ್ನು ಅನುಸರಿಸಿ; ಆಂಗ್ಲ ಕ್ರಿಕೆಟಿಗರಿಗೆ ಪೀಟರ್ಸನ್ ಸಲಹೆ!

ಸಂಜಯ್ ಮಂಜ್ರೇಕರ್ ಹೇಳಿದ್ದ ಈ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ವಿರೋಧ ವ್ಯಕ್ತವಾದ ಬಳಿಕ ಇದೀಗ ಸಂಜಯ್ ಮಂಜ್ರೇಕರ್ ತಮ್ಮ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡಿದ್ದಾರೆ. 'ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎನ್ನುವುದು ಕ್ರಿಕೆಟಿಗನಿಗೆ ನೀಡುವ ಅತ್ಯುನ್ನತ ಪ್ರಶಂಸೆಯಾಗಿದೆ. ಕ್ರಿಕೆಟಿಗರಾದ ಡಾನ್ ಬ್ರಾಡ್ಮನ್, ಸೋಬರ್ಸ್, ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಈ ಆಟಗಾರರು ನನ್ನ ಪ್ರಕಾರ ಸಾರ್ವಕಾಲಿಕ ಶ್ರೇಷ್ಠ ಆಟಗಾರರು. ಆದರೆ ರವಿಚಂದ್ರನ್ ಅಶ್ವಿನ್‌ ಇನ್ನೂ ಸಾರ್ವಕಾಲಿಕ ಶ್ರೇಷ್ಠ ಆಟಗಾರನಾಗಿಲ್ಲ' ಎಂದು ಸಂಜಯ್ ಮಂಜ್ರೇಕರ್ ತಿಳಿಸಿದ್ದಾರೆ.

Story first published: Monday, June 7, 2021, 7:44 [IST]
Other articles published on Jun 7, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+