ಕೊಹ್ಲಿ, ರೋಹಿತ್ ಅಲ್ಲ ಈತನನ್ನು ಅನುಸರಿಸಿ; ಆಂಗ್ಲ ಕ್ರಿಕೆಟಿಗರಿಗೆ ಪೀಟರ್ಸನ್ ಸಲಹೆ!

ಭಾರತೀಯ ಕ್ರಿಕೆಟ್ ತಂಡ ಹಲವಾರು ಪ್ರತಿಭೆಗಳಿಂದ ತುಂಬಿದೆ. ಸ್ಫೋಟಕ ಬ್ಯಾಟ್ಸ್‌ಮನ್‌ಗಳು, ಉತ್ತಮ ಬೌಲರ್‌ಗಳು ಮಾತ್ರವಲ್ಲದೆ ವಿಶ್ವವೇ ತಿರುಗಿ ನೋಡುವಂತಹ ಆಲ್‌ರೌಂಡರ್ ಆಟಗಾರರು ಟೀಮ್ ಇಂಡಿಯಾದಲ್ಲಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯೆಂದರೆ ರವೀಂದ್ರ ಜಡೇಜಾ. ಹೌದು ರವೀಂದ್ರ ಜಡೇಜಾ ವಿಶ್ವ ಕ್ರಿಕೆಟ್ ಕಂಡ ಅತ್ಯುತ್ತಮ ಆಲ್‌ರೌಂಡರ್ ಆಟಗಾರರಲ್ಲೊಬ್ಬರು.

ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್; ಕೊಹ್ಲಿ ಬೇಡ ಎಂದಿದ್ದ ವಿಷಯವನ್ನೇ ಕೆದಕಿದ ಲಕ್ಷ್ಮಣ್

ಟೀಮ್ ಇಂಡಿಯಾ ಪರ ಉತ್ತಮ ಪ್ರದರ್ಶನಗಳನ್ನು ನೀಡುತ್ತಾ ಬಂದಿರುವ ರವೀಂದ್ರ ಜಡೇಜಾರನ್ನು ಇದೀಗ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಹೊಗಳಿದ್ದಾರೆ. ಐಪಿಎಲ್, ಅಂತಾರಾಷ್ಟ್ರೀಯ ಟಿ ಟ್ವೆಂಟಿ, ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ಹೀಗೆ ಯಾವುದೇ ಕ್ರಿಕೆಟ್ ಮಾದರಿ ಇರಲಿ, ರವೀಂದ್ರ ಜಡೇಜಾ ಮಾತ್ರ ವಿಫಲರಾಗುವುದೇ ಇಲ್ಲ. ಆಡಿರುವ ಬಹುತೇಕ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ರವೀಂದ್ರ ಜಡೇಜಾ ಟೀಮ್ ಇಂಡಿಯಾ ಖಾಯಂ ಸದಸ್ಯರಾಗಿ ಉಳಿದುಕೊಂಡಿದ್ದಾರೆ.

ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ರೀತಿ ಕೊಹ್ಲಿ ಪಡೆ ಮಿಂಚುವುದು ಅನುಮಾನ ಎಂದ ಭಾರತದ ಮಾಜಿ ಕ್ರಿಕೆಟಿಗ!

ರವೀಂದ್ರ ಜಡೇಜಾ ಕುರಿತು ಮಾತನಾಡಿರುವ ಕೆವಿನ್ ಪೀಟರ್ಸನ್ ಈ ಕೆಳಕಂಡ ರೀತಿ ಹಾಡಿ ಹೊಗಳಿದ್ದಾರೆ.

ಕ್ರಿಕೆಟರ್ ಆಗಬೇಕು ಎನ್ನುವವರು ಕಡ್ಡಾಯವಾಗಿ ರವೀಂದ್ರ ಜಡೇಜಾರನ್ನು ಪಾಲಿಸಿ

ಕ್ರಿಕೆಟರ್ ಆಗಬೇಕು ಎನ್ನುವವರು ಕಡ್ಡಾಯವಾಗಿ ರವೀಂದ್ರ ಜಡೇಜಾರನ್ನು ಪಾಲಿಸಿ

ರವೀಂದ್ರ ಜಡೇಜಾರನ್ನು ಹೊಗಳಿರುವ ಪೀಟರ್ಸನ್ 'ಜೀವನದಲ್ಲಿ ಕ್ರಿಕೆಟರ್ ಆಗಬೇಕು ಎಂದು ಗುರಿ ಇಟ್ಟುಕೊಂಡಿರುವ ಚಿಕ್ಕ ಮಕ್ಕಳು, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಡಲಿರುವ ಆಟಗಾರರು ಅಥವಾ ಕೌಂಟಿ ಕ್ರಿಕೆಟಿಗರು ಯಾರೇ ಆದರೂ ಸಹ ರವೀಂದ್ರ ಜಡೇಜಾರನ್ನು ಅನುಸರಿಸಿ. ಜಡೇಜಾ ಯಾವ ರೀತಿ ಆಡುತ್ತಾರೋ ಅದೇ ಶೈಲಿಯನ್ನು ಪಾಲಿಸಿ, ಯಾಕೆಂದರೆ ರವೀಂದ್ರ ಜಡೇಜಾ ನಿಜವಾದ ಒಬ್ಬ ಸೂಪರ್‌ಸ್ಟಾರ್' ಎಂದು ಹೇಳಿದ್ದಾರೆ.

ಜಡೇಜಾ ರೀತಿಯ ಆಟಗಾರ ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದಲ್ಲಿಯೇ ಸಿಕ್ಕಿಲ್ಲ

ಜಡೇಜಾ ರೀತಿಯ ಆಟಗಾರ ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದಲ್ಲಿಯೇ ಸಿಕ್ಕಿಲ್ಲ

ಇನ್ನೂ ಮುಂದುವರೆದು ಮಾತನಾಡಿರುವ ಪೀಟರ್ಸನ್ ರವೀಂದ್ರ ಜಡೇಜಾ ರೀತಿಯ ಎಡಗೈ ಆಲ್‌ರೌಂಡರ್ ಇಷ್ಟು ವರ್ಷದಲ್ಲಿ ಇಂಗ್ಲೆಂಡ್ ತಂಡಕ್ಕೇ ಸಿಕ್ಕಿಲ್ಲ ಎಂದು ಹೇಳಿದ್ದಾರೆ. 'ಇಷ್ಟು ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ರವೀಂದ್ರ ಜಡೇಜಾ ರೀತಿಯ ಎಡಗೈ ಆಲ್‌ರೌಂಡರ್ ಇಂಗ್ಲೆಂಡ್ ತಂಡಕ್ಕೆ ಸಿಕ್ಕಿಲ್ಲವಲ್ಲ ಎಂಬ ಕೊರಗು ನನ್ನಲ್ಲಿದೆ' ಎಂದು ಕೆವಿನ್ ಪೀಟರ್ಸನ್ ಹೇಳಿದ್ದಾರೆ.

ರವೀಂದ್ರ ತಂಡದಲ್ಲಿದ್ದರೆ ಇತರ ಆಲ್‌ರೌಂಡರ್ ಆಟಗಾರರಿಗೆ ಸ್ಥಾನ ಸಿಗುವುದೇ ಇಲ್ಲ!

ರವೀಂದ್ರ ತಂಡದಲ್ಲಿದ್ದರೆ ಇತರ ಆಲ್‌ರೌಂಡರ್ ಆಟಗಾರರಿಗೆ ಸ್ಥಾನ ಸಿಗುವುದೇ ಇಲ್ಲ!

ಪೀಟರ್ಸನ್ ಹೇಳಿರುವ ಮಾತು ನೂರಕ್ಕೆ ನೂರರಷ್ಟು ಸತ್ಯ. ಏಕೆಂದರೆ ರವೀಂದ್ರ ಜಡೇಜಾ ಆಡುವ ಆಟವೇ ಅಂಥದ್ದು, ರವೀಂದ್ರ ಜಡೇಜಾ ಇರಬೇಕಾದರೆ ಬೇರೆ ಆಯ್ಕೆಗೆ ಟೀಮ್ ಇಂಡಿಯಾ ತಂಡ ಕೈ ಹಾಕುವುದೇ ಇಲ್ಲ. ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಾಗ ಮಾತ್ರ ಬೇರೆ ಆಲ್‌ರೌಂಡರ್ ಆಟಗಾರರಿಗೆ ಟೀಮ್ ಇಂಡಿಯಾ ಪರ ಆಡುವ ಅವಕಾಶ ಲಭಿಸುತ್ತದೆ ಅಷ್ಟೆ. ಇಷ್ಟರಮಟ್ಟಿಗೆ ರವೀಂದ್ರ ಜಡೇಜಾ ಟೀಮ್ ಇಂಡಿಯಾದಲ್ಲಿ ತನ್ನ ಪ್ರಾಬಲ್ಯವನ್ನು ಸಾಧಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Sunday, June 6, 2021, 16:40 [IST]
Other articles published on Jun 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X