ಟೆಸ್ಟ್ vs ಟಿ20: ಟೆಸ್ಟ್ ಕ್ರಿಕೆಟ್ ಅಲ್ಟಿಮೇಟ್ ಕ್ರಿಕೆಟ್ ಎಂದ ವೀರೇಂದ್ರ ಸೆಹ್ವಾಗ್

ಹಲವು ವರ್ಷಗಳಿಂದ ನಡೆಯುತ್ತಿರುವ ಬಹುದೊಡ್ಡ ಚರ್ಚೆ ಅಂದ್ರೆ ಟೆಸ್ಟ್ ಕ್ರಿಕೆಟ್ ವರ್ಸಸ್ ಟಿ20 ಕ್ರಿಕೆಟ್. ಈ ಎರಡೂ ಫಾರ್ಮೆಟ್‌ಗಳು ತನ್ನದೇ ಆದ ಸ್ವಾಭಾವಿಕ ಕ್ರಿಕೆಟ್ ಅಭಿಮಾನಿಗಳನ್ನ ಹೊಂದಿವೆ. ಕಳೆದ ಒಂದೂವರೆ ದಶಕದಲ್ಲಿ ಟಿ20 ಸ್ವರೂಪಕ್ಕೆ ಅಭಿಮಾನಿಗಳು ಮಾರು ಹೋಗಿದ್ದರೂ ಸಹ, ಟೆಸ್ಟ್ ಕ್ರಿಕೆಟ್‌ನ ಸೊಬಗು ಮಾತ್ರ ತಗ್ಗಿಲ್ಲ.
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡ ಟೆಸ್ಟ್ ಕ್ರಿಕೆಟ್‌ನ ಬಹುದೊಡ್ಡ ಅಭಿಮಾನಿಯಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನದೇ ಸ್ಟ್ರೈಲ್‌ನಲ್ಲಿ ಬ್ಯಾಟ್ ಬೀಸುತ್ತಿದ್ದ ವೀರೂ 2001 ರಿಂದ 2013ರವರೆಗಿನ ಕ್ರಿಕೆಟ್ ಕೆರಿಯರ್‌ನಲ್ಲಿ 8,586 ರನ್ ಕಲೆಹಾಕಿದ್ದಾರೆ. 180 ಇನ್ನಿಂಗ್ಸ್‌ನಲ್ಲಿ ಸೆಹ್ವಾಗ್ 49.34ರ ಬ್ಯಾಟಿಂಗ್ ಸರಾಸರಿಯಲ್ಲಿ 23 ಶತಕ ಮತ್ತು 32 ಅರ್ಧಶತಕಗಳನ್ನ ದಾಖಲಿಸಿದ್ದಾರೆ.
ಸ್ಪೋರ್ಟ್ಸ್ 18 ರಲ್ಲಿ ಮಾತನಾಡುತ್ತಾ ವೀರೇಂದ್ರ ಸೆಹ್ವಾಗ್ ತಮ್ಮ ವಿನಮ್ರ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್ ಅಂತಿಮ ಕ್ರಿಕೆಟ್ ಎಂದು ಹೊಗಳಿದ್ದಾರೆ.

ಟೆಸ್ಟ್ ಕ್ರಿಕೆಟ್ ಅಲ್ಟಿಮೇಟ್ ಕ್ರಿಕೆಟ್ ಎಂದ ಸೆಹ್ವಾಗ್
'' ನನ್ನ ವಿನಮ್ರ ಅಭಿಪ್ರಾಯವೇನೆಂದರೆ, ಟೆಸ್ಟ್ ಕ್ರಿಕೆಟ್ ಅಲ್ಟಿಮೇಟ್ ಆಗಿದೆ'' ಎಂದು ಸ್ಪೋರ್ಟ್ಸ್ 18ಗೆ ತಿಳಿಸಿದ್ದಾರೆ.
'' ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಆಡುವುದಕ್ಕೆ ಅಷ್ಟೊಂದು ಪ್ರಾಮುಖ್ಯತೆ ಏಕೆ ಕೊಡುತ್ತಾರೆ? 100 ರಿಂದ 150 ಅಥವಾ 200 ಟೆಸ್ಟ್ ಪಂದ್ಯಗಳನ್ನಾಡಿದ್ರೆ , ಅವರು ದಾಖಲೆ ಪುಸ್ತಕದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತೇನೆ ಎಂದು ಅವರಿಗೆ ತಿಳಿದಿದೆ'' ಎಂದು ಸೆಹ್ವಾಗ್ ಹೇಳಿದ್ದಾರೆ.
ಅತಿ ಹೆಚ್ಚು ರನ್‌ಗಳಿಸಿದರೂ ರಾಹುಲ್ ಎಡವಿದ್ದೆಲ್ಲಿ?: ಮನೀಶ್ ಇನ್ನಿಂಗ್ಸ್ ಉಲ್ಲೇಖಿಸಿದ ದೊಡ್ಡ ಗಣೇಶ್

ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಲು ಎಂದಿಗೂ ಯೋಚಿಸಿರಲಿಲ್ಲ!
ಬಹುತೇಕ ಪಂದ್ಯಗಳಲ್ಲಿ ಮೊದಲ ಎಸೆತದಲ್ಲಿಯೇ ಚೆಂಡನ್ನು ಬೌಂಡರಿಯತ್ತ ಬಾರಿಸುತ್ತ ವೀರೇಂದ್ರ ಸೆಹ್ವಾಗ್ ಬೌಂಡರಿ ಬಾರಿಸುವ ರೀತಿಯನ್ನ ಎಷ್ಟು ಹೊಗಳಿದರು ಸಾಲದು. ಈ ಕುರಿತು ಮಾತನಾಡಿರುವ ಸೆಹ್ವಾಗ್ , ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕರು ಹೇಳಿದ್ದಾರೆ, ನಾನು ಮೊದಲ ಎಸೆತದಲ್ಲಿ ಬೌಂಡರಿ ಸಿಡಿಸಲು ಯೋಜಿಸಿರುತ್ತೇನೆ ಎಂದು. ಆದ್ರೆ ನಾನು ಆ ರೀತಿಯಾಗಿ ಎಂದು ಯೋಜಿಸಿಲ್ಲ ಎಂದು ಸೆಹ್ವಾಗ್ ಸ್ಪಷ್ಟಪಡಿಸಿದ್ದಾರೆ.
ಏತನ್ಮಧ್ಯೆ, ಸೆಹ್ವಾಗ್ 1999 ರಿಂದ 2013 ರ ನಡುವೆ ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕಾಗಿ 251 ಏಕದಿನ ಅಂತಾರಾಷ್ಟ್ರೀಯ (ODI) ಪಂದ್ಯಗಳನ್ನು ಆಡಿದ್ದಾರೆ ಮತ್ತು 35ರ ಉತ್ತಮ ಬ್ಯಾಟಿಂಗ್ ಸರಾಸರಿ ಮತ್ತು 104.3 ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 8,273 ರನ್‌ಗಳನ್ನು ಸಿಡಿಸಿದ್ದಾರೆ. ಅಲ್ಲದೆ, ಅವರು 15 ಶತಕಗಳು ಮತ್ತು 38 ಅರ್ಧ ಶತಕಗಳನ್ನು ಸಿಡಿಸಿದ್ದಾರೆ.
RCB vs RR: ಈ ತಂಡ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದು ಫೈನಲ್ ತಲುಪಲಿದೆ ಎಂದ ಸಂಜಯ್ ಮಂಜ್ರೇಕರ್

ವಿರಾಟ್ ಕೊಹ್ಲಿಗೂ ಟೆಸ್ಟ್ ಕ್ರಿಕೆಟ್ ಅಂದ್ರೆ ಎಲ್ಲಿಲ್ಲದ ಪ್ರೀತಿ
ವೀರೇಂದ್ರ ಸೆಹ್ವಾಗ್‌ಗೆ ಟೆಸ್ಟ್ ಕ್ರಿಕೆಟ್ ಎಷ್ಟು ಇಷ್ಟ ಪಡುತ್ತಾರೋ, ಅಷ್ಟೆಯೇ ವಿರಾಟ್ ಕೊಹ್ಲಿ ಕೂಡ ಟೆಸ್ಟ್ ಕ್ರಿಕೆಟ್ ಕುರಿತು ಎಲ್ಲಿಲ್ಲದ ಪ್ರೀತಿ ಹೊಂದಿದ್ದಾರೆ. 101 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 171 ಇನ್ನಿಂಗ್ಸ್‌ನಲ್ಲಿ 8043 ರನ್ ಕಲೆಹಾಕಿದ್ದಾರೆ. 49.96 ಬ್ಯಾಟಿಂಗ್ ಸರಾಸರಿ ಜೊತೆಗೆ 27 ಶತಕ ಮತ್ತು 7 ದ್ವಿಶಕದ ಸಾಧನೆ ಮಾಡಿದ್ದಾರೆ.
ಇನ್ನು ಟೆಸ್ಟ್ ನಾಯಕತ್ವದಲ್ಲಿ ಕೊಹ್ಲಿ ಟೀಂ ಇಂಡಿಯಾದ ಬೆಸ್ಟ್ ಕ್ಯಾಪ್ಟನ್ ಆಗಿ ಗುರುತಿಸಿಕೊಂಡಿದ್ದಾರೆ. 68 ಪಂದ್ಯಗಳಲ್ಲಿ 40 ಗೆಲುವು ಮತ್ತು 17 ಸೋಲುಗಳನ್ನ ಕಂಡಿರುವ ವಿರಾಟ್ ಕೊಹ್ಲಿ 58.82 ಗೆಲುವಿನ ಸರಾಸರಿ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications