ಹರ್ಲೀನ್ ಡಿಯೋಲ್ ಅದ್ಭುತ ಕ್ಯಾಚ್ ಮೆಚ್ಚಿ ಸಚಿನ್ ತೆಂಡೂಲ್ಕರ್ ಟ್ವೀಟ್: ವಿಡಿಯೋ

ನಾರ್ಥಾಂಪ್ಟನ್: ಭಾರತದ ಬ್ಯಾಟಿಂಗ್ ಆಲ್ ರೌಂಡರ್ ಹರ್ಲೀನ್ ಡಿಯೋಲ್ ಅದ್ಭುತ ಕ್ಯಾಚ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಭಾರತದ ದಂತಕತೆ ಸಚಿನ್ ತೆಂಡೂಲ್ಕರ್ ಕೂಡ ಡಿಯೋಲ್ ಕ್ಯಾಚ್ ಮೆಚ್ಚಿ ಟ್ವೀಟ್ ಮಾಡಿದ್ದಾರೆ. ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಮೊದಲನೇ ಟಿ20ಐ ಪಂದ್ಯದಲ್ಲಿ ಡಿಯೋಲ್ ಈ ಕ್ಯಾಚ್ ಪಡೆದಿದ್ದರು.
ನಾರ್ಥಾಂಪ್ಟನ್‌ನ ಕೌಂಟಿ ಗ್ರೌಂಡ್‌ನಲ್ಲಿ ನಡೆದ ಭಾರತ-ಇಂಗ್ಲೆಂಡ್ ಮಹಿಳಾ ಟಿ20 ಪಂದ್ಯದಲ್ಲಿ ಹರ್ಲೀನ್ ಡಿಯೋಲ್ 18.5ನೇ ಓವರ್‌ನಲ್ಲಿ ಶಿಖಾ ಪಾಂಡೆ ಎಸೆತಕ್ಕೆ ಆಮಿ ಎಲ್ಲೆನ್ ಜೋನ್ಸ್ ಅವರ ಕ್ಯಾಚ್ ಪಡೆದು ಜೋನ್ಸ್ ಅವರನ್ನು 43 ರನ್‌ಗೆ ಪೆವಿಲಿಯನ್ ಕಡೆಗೆ ನಡೆಯುವಂತೆ ಮಾಡಿದರು.
ಡಿಯೋಲ್ ಕ್ಯಾಚ್‌ನ ವಿಡಿಯೋವನ್ನು ಸಚಿನ್ ತೆಂಡೂಲ್ಕರ್ ತನ್ನ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. 'ಅದು ಅದ್ಭುತ ಕ್ಯಾಚ್ ಹರ್ಲೀನ್ ಡಿಯೋಲ್, ಖಂಡಿತವಾಗಿಯೂ ಇದು ನನ್ನ ಪಾಲಿಗೆ ವರ್ಷದ ಕ್ಯಾಚ್ ಆಗಿದೆ' ಎಂದು ಸಚಿನ್ ಟ್ವೀಟ್ ಜೊತೆ ಬರೆದುಕೊಂಡಿದ್ದಾರೆ.
ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ 20 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 177 ರನ್ ಗಳಿಸಿತ್ತು. ಭಾರತದ ಇನ್ನಿಂಗ್ಸ್ ವೇಳೆ ಮಳೆ ಸುರಿದಿದ್ದರಿಂದ ಭಾರತಕ್ಕೆ 8.4 ಓವರ್‌ಗೆ 73 ರನ್ ಗುರಿ ನೀಡಲಾಗಿತ್ತು. ಆದರೆ ಭಾರತ 8.4 ಓವರ್‌ಗೆ 3 ವಿಕೆಟ್ ಕಳೆದು 54 ರನ್ ಬಾರಿಸಿ 18 ರನ್‌ನಿಂದ ಪಂದ್ಯ ಸೋತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications