
ಎರಡೂ ತಂಡಗಳ ಕಾದಾಟ ನೋಡಲು ಸಾಕಷ್ಟು ಕಾತುರನಾಗಿದ್ದೇನೆ: ಅಲನ್ ಡೊನಾಲ್ಡ್
ವಿಶ್ವ ಕ್ರಿಕೆಟ್ ಕಂಡಂತಹ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾದ ಅಲನ್ ಡೊನಾಲ್ಡ್, ಭಾರತ ತಂಡವು ಅತ್ಯಂತ ಗುಣಮಟ್ಟದ ಆಟಗಾರರನ್ನ ಹೊಂದಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಮುಖಾಮುಖಿಯನ್ನ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.
"ಇದು ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಜಿದ್ದಾಜಿದ್ದಿನ ಸರಣಿಗಳಲ್ಲಿ ಒಂದಾಗಿದೆ ಎಂಬುದರಲ್ಲಿ ಸಂದೇಹವಿಲ್ಲ ಮತ್ತು ಈ ಸಮ್ಮರ್‌ನಲ್ಲಿ ನಾವು ನಂಬಲಾಗದ ಕಾದಾಟವನ್ನ ಎದುರುನೋಡಬಹುದು" ಎಂದು ಕ್ರಿಕೆಟ್.ಕೋ.ಝಾ.ಗೆ ಡೊನಾಲ್ಡ್ ತಿಳಿಸಿದ್ದಾರೆ.
"ಭಾರತಕ್ಕಿರುವ ಸವಾಲು ಅದೊಂದೆ": ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಬಗ್ಗೆ ಜಾಫರ್ ಹೇಳಿದ್ದಿಷ್ಟು!

ವಿದೇಶದಲ್ಲಿ ಗೆಲ್ಲುವ ತಂಡವೇ ಶ್ರೇಷ್ಠ ಎಂದಿದ್ರಂತೆ ಕೊಹ್ಲಿ
ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಸರಣಿಯಲ್ಲಿ(2018) ಸೋತ ನಂತರ ಕೊಹ್ಲಿ, ತವರಿನ ಹೊರಗೆ ಸರಣಿ ಗೆಲ್ಲುವ ತಂಡವೇ ಶ್ರೇಷ್ಠ ಎಂದು ಹೇಳಿದ್ದರು. ಕೊಹ್ಲಿಯ ಈ ಹೇಳಿಕೆ ನಂತರ ಭಾರತವು ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕೂಡ ತಲುಪಿತು. ಭಾರತವು ಅತ್ಯಂತ ಗುಣಮಟ್ಟದ ತಂಡವಾಗಿ ಪರಿಣಮಿಸಿದೆ ಎಂದು ಡೊನಾಲ್ಡ್ ಹೇಳಿದ್ದಾರೆ.
"ಕೆಲವು ವರ್ಷಗಳ ಹಿಂದೆ ಕೊಹ್ಲಿಯೇ ಹೇಳಿದ್ದರು. ವಿದೇಶದಲ್ಲಿ ಗೆಲ್ಲದಿದ್ದರೆ ನಮ್ಮನ್ನ ಎಂದಿಗೂ ಶ್ರೇಷ್ಠ ತಂಡವೆಂದು ವರ್ಗೀಕರಿಸಲಾಗುವುದಿಲ್ಲ ಮತ್ತು ಅವರು ನಿಜವಾಗಿಯೂ ಆ ಕೆಲಸ ಮಾಡಿ ತೋರಿಸಿದ್ದಾರೆ. ಅವರು ಆಸ್ಟ್ರೇಲಿಯಾದಲ್ಲಿ ಗೆದ್ದಿರುವುದನ್ನು ನೀವು ನೋಡಿದ್ದೀರಿ ಮತ್ತು WTC (ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್) ಫೈನಲ್‌ಗೆ ತಲುಪಿದ್ದಾರೆ. ಹೀಗಾಗಿ ಗುಣಮಟ್ಟದ ಭಾರತೀಯ ತಂಡ ಇದಾಗಿದೆ ಮತ್ತು ಮುಂದಿನ ದಿನಗಳಲ್ಲಿ ಅದನ್ನು ಎದುರು ನೋಡುತ್ತಿದ್ದೇನೆ'' ಡೊನಾಲ್ಡ್ ಹೇಳಿದ್ದಾರೆ.
IPL 2022: SRH ಕೋಚ್ ಆಗಿ ಆಯ್ಕೆಗೊಂಡ ಬ್ರಿಯಾನ್ ಲಾರಾ, ಡೇಲ್ ಸ್ಟೇನ್

ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಬಳಿಕ ಎಲ್ಲವೂ ಬದಲಾಯಿತು!
ಇತ್ತೀಚೆಗೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮೊದಲು ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ '' ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಸೋಲು ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಿತು. ಆ ಸರಣಿಯಲ್ಲಿ ಮಾಡಿದ ತಪ್ಪುಗಳಿಂದ ಪಾಠ ಕಲಿತ ತಂಡವು, ವಿದೇಶಿ ಪರಿಸ್ಥಿತಿಗಳಲ್ಲಿ ಉತ್ತಮ ಕ್ರಿಕೆಟ್ ಆಡಲು ಮಾನದಂಡಗಳನ್ನು ಸ್ಥಾಪಿಸಿತು. ಆ ಬಳಿಕವಷ್ಟೇ ಭಾರತವು ವಿದೇಶದಲ್ಲಿ ಗೆಲ್ಲುವ ಭರವಸೆ ಹೊಂದಿತು'' ಎಂದು ವಿರಾಟ್ ಹೇಳಿದ್ದಾರೆ.
ಡಿಸೆಂಬರ್ 26ರಿಂದ ಭಾರತ-ದಕ್ಷಿಣ ಆಫ್ರಿಕಾ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿದ್ದು ಈ ಕೆಳಗಿನಂತಿದೆ.

ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ವೇಳಾಪಟ್ಟಿ ಹೀಗಿದೆ
ಮೊದಲ ಟೆಸ್ಟ್: ಡಿಸೆಂಬರ್ 26-30, ಸೂಪರ್‌ಸ್ಪೋರ್ಟ್ಸ್ ಪಾರ್ಕ್, ಸೆಂಚುರಿಯನ್
ಎರಡನೇ ಟೆಸ್ಟ್: ಜನವರಿ 3-7, ವಾಂಡರರ್ಸ್ ಕ್ರೀಡಾಂಗಣ, ಜೋಹಾನ್ಸ್‌ಬರ್ಗ್
ಮೂರನೇ ಟೆಸ್ಟ್: ಜನವರಿ 11-15, ನ್ಯೂಲ್ಯಾಂಡ್ಸ್, ಕೇಪ್ ಟೌನ್
ಟೀಂ ಇಂಡಿಯಾ ಟೆಸ್ಟ್ ಸ್ಕ್ವಾಡ್
ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಪ್ರಿಯಾಂಕ್ ಪಾಂಚಾಲ್, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್ ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊ. ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್.
ಸ್ಟ್ಯಾಂಡ್ ಬೈ ಆಟಗಾರರು: ನವದೀಪ್ ಸೈನಿ, ಸೌರಭ್ ಕುಮಾರ್, ದೀಪಕ್ ಚಾಹರ್, ಅರ್ಜಾನ್ ನಾಗ್ವಾಸ್ವಾಲ್ಲಾ


Click it and Unblock the Notifications
