ಏಕದಿನ ಕ್ರಿಕೆಟ್‌ನಲ್ಲಿ 400+ ರನ್ ದಾಖಲೆ: ಕುತೂಹಲಕಾರಿ ಅಂಕಿ-ಅಂಶಗಳು!

ನವದೆಹಲಿ, ಮಾರ್ಚ್ 1: ಕೇವಲ 50 ಓವರ್‌ಗಳಲ್ಲಿ 400ಕ್ಕೂ ಹೆಚ್ಚು ರನ್ ಗಳಿಸೋದು ಸುಲಭವಲ್ಲ. ಆದರೆ ಏಕದಿನ ಕ್ರಿಕೆಟ್‌ನಲ್ಲಿ 400ಕ್ಕೂ ಹೆಚ್ಚು ರನ್ ಬಾರಿಸಿದ ಖ್ಯಾತಿಗೆ ಅನೇಕ ದೇಶಗಳು ಗುರುತಿಸಿಕೊಂಡಿವೆ. ಅತೀ ಹೆಚ್ಚುಸಾರಿ 400+ ರನ್ ಗಳಿಸಿದ ದೇಶಗಳ ಸಾಲಿನಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ.
ಬುಧವಾರ (ಫೆಬ್ರವರಿ 27) ವೆಸ್ಟ್ ಇಂಡೀಸ್‌ನ ಗ್ರೆನಡಾದ ಸೇಟ್ ಜಾರ್ಜ್ಸ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪ್ರವಾಸಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಣ 4ನೇ ಏಕದಿನ ಪಂದ್ಯದಲ್ಲಿ 400+ ರನ್ ಸಿಡಿಸಿದ್ದ ಇಂಗ್ಲೆಂಡ್ ಮತ್ತೊಮ್ಮೆ 400+ ರನ್‌ನತ್ತ ಗಮನ ಹರಿಯುವಂತೆ ಮಾಡಿತು.
ಏಕದಿನ ಕ್ರಿಕೆಟ್‌ನಲ್ಲಿ 400+ ರನ್ ದಾಖಲೆಗಳ ಕುತೂಹಲಕಾರಿ ಅಂಕಿ-ಅಂಶಗಳನ್ನು ಆರಿಸಿ ಇಲ್ಲಿ ನಿಮ್ಮೆದುರು ತಂದಿದ್ದೇವೆ.

3ನೇ ಸ್ಥಾನದಲ್ಲಿ ಇಂಗ್ಲೆಂಡ್
ಗ್ರೆನಡಾದಲ್ಲಿ ಫೆಬ್ರವರಿ 27ರಂದು ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್, ನಾಯಕ ಇಯಾನ್ ಮಾರ್ಗನ್ (103) ಮತ್ತು ಜಾಸ್ ಬಟ್ಲರ್ (150) ಶತಕದೊಂದಿಗೆ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದು 418 ರನ್ ಬಾರಿಸಿತು. ಕ್ರಿಸ್ ಗೇಲ್ ಅಬ್ಬರದ ಶತಕ (162 ರನ್) ಹೊರತಾಗಿಯೂ ವಿಂಡೀಸ್ 48 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದು 389 ರನ್ ಬಾರಿಸಿ 29 ರನ್ ಗಳಿಂದ ಇಂಗ್ಲೆಂಡ್‌ಗೆ ಶರಣಾಯಿತು. ಈ ಗೆಲುವಿನೊಂದಿಗೆ ಒಟ್ಟು ನಾಲ್ಕು ಸಾರಿ 400+ ರನ್ ಗಳಿಸಿರುವ ಇಂಗ್ಲೆಂಡ್ ಈ ಯಾದಿಯಲ್ಲಿ 3ನೇ ಸ್ಥಾನದಲ್ಲಿದೆ.

ದಕ್ಷಿಣ ಆಫ್ರಿಕಾ ತಂಡ ಮುಂದು
ಏಕದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚುಸಾರಿ 400+ ರನ್ ಗಳಿಸಿದ ತಂಡಗಳಲ್ಲಿ ದಕ್ಷಿಣ ಆಫ್ರಿಕಾ ತಂಡ ಅಗ್ರ ಸ್ಥಾನದಲ್ಲಿದೆ. ಆಫ್ರಿಕಾ ಒಟ್ಟು 6 ಸಾರಿ 400+ ರನ್ ಬಾರಿಸಿದೆ. ಒಟ್ಟು 5 ಸಾರಿ 400+ ರನ್ ಗಳಿಸಿದ ಭಾರತ 2ನೇ ಸ್ಥಾನದಲ್ಲಿ, ಇಂಗ್ಲೆಂಡ್ (4 ಸಾರಿ) 3ನೇ ಸ್ಥಾನದಲ್ಲಿವೆ. ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ನ್ಯೂಜಿಲ್ಯಾಂಡ್ ತಲಾ ಒಂದುಸಾರಿ 400+ ರನ್ ಬಾರಿಸಿದ ದಾಖಲೆ ಹೊಂದಿವೆ.

ಚೊಚ್ಚಲ 400+ ರನ್ ಬಾರಿಸಿದ್ದು ಆಸ್ಟ್ರೇಲಿಯಾ
ಏಕದಿನದಲ್ಲಿ ಚೊಚ್ಚಲ 400+ ರನ್ ಬಾರಿಸಿದ್ದು ಆಸ್ಟ್ರೇಲಿಯಾ. 2006 ಮಾರ್ಷ್ ನಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 434 ರನ್ ಪೇರಿಸಿತ್ತು. ಅಲ್ಲಿಂದ ಇಲ್ಲೀವರೆಗೆ ಒಟ್ಟು 20 ಸಾರಿ 400+ ರನ್ ಸಾಧನೆಗಳಾಗಿವೆ. ಇದರಲ್ಲಿ 18 ಸಾರಿ ಮೊದಲ ಇನ್ನಿಂಗ್ಸ್‌ನಲ್ಲಿ ಮತ್ತು 2 ಸಾರಿ ದ್ವಿತೀಯ ಇನ್ನಿಂಗ್ಸ್‌ನಲ್ಲಿ 400+ ರನ್ ಗಳಾಗಿದ್ದವು.

ರೋಹಿತ್ ವೈಯಕ್ತಿಕ ಅತ್ಯಧಿಕ ರನ್!
400+ ರನ್ ದಾಖಲೆಗೆ ಹೊಂದಿರುವ ಭಾರತ ಪರ ಉಪನಾಯಕ ರೋಹಿತ್ ಶರ್ಮಾ ಏಕದಿನದಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಹೊಂದಿದ್ದಾರೆ. 2014ರ ನವೆಂಬರ್‌ನಲ್ಲಿ ಕೋಲ್ಕತ್ತಾದಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ 264 ರನ್ ಸಿಡಿಸಿದ್ದರು. ಈ ಪಂದ್ಯದಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ 404 ರನ್ ಗಳಿಸಿತ್ತು.

ಹೆಚ್ಚು 4, 6 ದಾಖಲೆ
2006 ಜುಲೈನಲ್ಲಿ ಅಮ್ಸ್ವೆಲ್ವಿನ್‌ನಲ್ಲಿ ನಡೆದಿದ್ದ ಶ್ರೀಲಂಕಾ vs ನೆದರ್ಲ್ಯಾಂಡ್ಸ್ ಪಂದ್ಯದಲ್ಲಿ ಲಂಕಾ ತಂಡ 56 ಫೋರ್‌ಗಳನ್ನು ಬಾರಿಸಿತ್ತು. 2019 ಫೆಬ್ರವರಿ 27ರಂದು ಸೇಂಟ್ ಜಾರ್ಜ್ಸ್ ಸ್ಟೇಡಿಯಂನಲ್ಲಿ ನಡೆದಿದ್ದ ಇಂಗ್ಲೆಂಡ್ ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್ 24 ಸಿಕ್ಸ್‌ಗಳನ್ನು ಸಿಡಿಸಿತ್ತು. ಇವು ಏಕದಿನದಲ್ಲಿ ತಂಡ 400+ ರನ್ ಗಳಿಸಿದ ಪಂದ್ಯಗಳಲ್ಲಿ ದಾಖಲಾದ ಅತ್ಯಧಿಕ ಫೋರ್, ಸಿಕ್ಸ್‌ಗಳು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications