ಟಿ20 ವಿಶ್ವಕಪ್‌ಗೂ ಮುನ್ನ ಭಾರತದ ಪ್ರದರ್ಶನ ಕುಗ್ಗಿದೆ: ಟೀಂ ಇಂಡಿಯಾಗೆ ವಾರ್ನಿಂಗ್ ಕೊಟ್ಟ RP ಸಿಂಗ್

ಮೊಹಾಲಿಯಲ್ಲಿ ನಡೆದ ಮೊದಲ ಟಿ20ಯಲ್ಲಿ ಭಾರತ 209 ರನ್ ಗಳ ಬೃಹತ್ ಗುರಿ ನೀಡಿದ್ದರೂ ಸೋತಿದ್ದು ಗೊತ್ತೇ ಇದೆ. ಬೃಹತ್ ಗುರಿ ನೀಡಿದ್ದರೂ ಆಸ್ಟ್ರೇಲಿಯಾ ಬಹಳ ಸುಲಭವಾಗಿ ಗುರಿ ಮುಟ್ಟಿ ಪಂದ್ಯ ಗೆದ್ದುಕೊಂಡಿತು.
ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ (0/52), ಹರ್ಷಲ್ ಪಟೇಲ್ (0/49) ಮತ್ತು ಯುಜುವೇಂದ್ರ ಚಹಾಲ್ (1/42) ಸೇರಿದಂತೆ ಭಾರತದ ಬೌಲರ್‌ಗಳು ಭಾರೀ ರನ್ ಬಿಟ್ಟುಕೊಟ್ಟ ರನ್ ನೀಡಿದ ನಂತರ ಬೃಹತ್ ಗುರಿಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಆಸ್ಟ್ರೇಲಿಯ ಬೃಹತ್ ಮೊತ್ತವನ್ನು ಸುಲಭವಾಗಿ ಮುಟ್ಟಿತು.
ಆದರೆ ಭಾರತದ ಬೌಲರ್‌ಗಳಲ್ಲಿ ಅಕ್ಷರ್ ಪಟೇಲ್ ಮಾತ್ರ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಮಿಂಚಿದರು. ಉಮೇಶ್ ಯಾದವ್ ಎರಡು ಓವರ್ ಬೌಲ್ ಮಾಡಿ 27 ರನ್ ಗಳಿಸಿದರು. ಈ ಪಂದ್ಯದಲ್ಲಿ ಭಾರತದ ಬೌಲರ್‌ಗಳು ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಭಾರತದ ಮಾಜಿ ವೇಗಿ ಆರ್‌ಪಿ ಸಿಂಗ್ ಹೇಳಿದ್ದಾರೆ.

ಟಿ20 ವಿಶ್ವಕಪ್ ದೃಷ್ಟಿಯಿಂದ ಇದು ಉತ್ತಮವಲ್ಲ!
''ಟಿ20 ವಿಶ್ವಕಪ್‌ಗೆ ಮುನ್ನ ಇದು ಉತ್ತಮ ಲಕ್ಷಣವಲ್ಲ, ನಿಜಕ್ಕೂ ದುರಾದೃಷ್ಟವನ್ನು ಸೂಚಿಸುತ್ತದೆ. ಏಷ್ಯಾಕಪ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡದಿದ್ದಾಗ, ಹರ್ಷಲ್ ಪಟೇಲ್ ಮತ್ತು ಜಸ್ಪ್ರೀತ್ ಬುಮ್ರಾ ಇಲ್ಲದ ಕಾರಣ ವೇಗದ ವಿಭಾಗವು ನೀರಸವಾಗಿದೆ ಎಂದು ನಾವು ಭಾವಿಸಿದ್ದೇವೆ. ಹರ್ಷಲ್ ಪಟೇಲ್ ಈ ಆಟಕ್ಕೆ ಹಾಜರಾಗಿದ್ದಾರೆ. ಆದರೆ ಅವನು ಮಾಡಿದ್ದನ್ನು ನಾವು ನೋಡಿದ್ದೇವೆ. ಈಗ ಬುಮ್ರಾ ಇಲ್ಲ ಎಂದು ಹೇಳುತ್ತಿದ್ದಾರೆ. ಆದ್ರೆ ಜಸ್ಪ್ರೀತ್ ಬುಮ್ರಾ ಬಂದಾಗ, ಅವರ ಬೌಲಿಂಗ್ ಅಷ್ಟು ಪರಿಣಾಮಕಾರಿಯಾಗಿರುವುದಿಲ್ಲ'' ಎಂದು ಆರ್ ಪಿ ಸಿಂಗ್ ಕ್ರಿಕ್ ಬಝ್ ನಲ್ಲಿ ಹೇಳಿದ್ದಾರೆ.

ಸ್ಟಾರ್ ಆಟಗಾರರು ವಾಪಸ್ಸಾತಿಯಿಂದ ಪಂದ್ಯ ಗೆಲ್ಲುವುದನ್ನ ನಿರೀಕ್ಷಿಸಬಾರದು!
''ಆದ್ದರಿಂದ ನಮ್ಮ ಸ್ಟಾರ್ ಆಟಗಾರರು ಗಾಯದಿಂದ ಹಿಂತಿರುಗಿದಾಗ ಪಂದ್ಯಗಳನ್ನು ಗೆಲ್ಲುತ್ತಾರೆ ಎಂದು ನಾವು ನಿರೀಕ್ಷಿಸಬಾರದು. ಏಕೆಂದರೆ ಈ ರೀತಿಯಲ್ಲಿ ನಿರೀಕ್ಷಿಸಿದಾಗಲೆಲ್ಲಾ ನಾವು ಪಂದ್ಯಗಳನ್ನು ಕಳೆದುಕೊಳ್ಳುತ್ತೇವೆ. ತಂಡದ ಆಡಳಿತವು ಲಭ್ಯವಿರುವ ಆಟಗಾರರನ್ನು ಸರಿಯಾಗಿ ಬಳಸಿಕೊಳ್ಳಬೇಕು. ಟಿ20 ವಿಶ್ವಕಪ್ ಸಮೀಪಿಸುತ್ತಿದ್ದಂತೆ ತಂಡದ ಪ್ರದರ್ಶನ ಕಡಿಮೆಯಾಗುತ್ತಿದೆ. ಭಾರತದ ಬೌಲರ್‌ಗಳಿಗೆ ಪಂದ್ಯವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ'' ಎಂದು ಆರ್ ಪಿ ಸಿಂಗ್ ಹೇಳಿದ್ದಾರೆ.

ರೋಹಿತ್ ಯೋಜನೆಗಳಲ್ಲಿ ಎಡವಟ್ಟು ಹೆಚ್ಚು
''ಆಸ್ಟ್ರೇಲಿಯಾ ರನ್ ಚೇಸ್ ಮಾಡುವಾಗ ಟೀಂ ಇಂಡಿಯಾ ನಿಜವಾಗಿಯೂ ಪ್ರಾಬಲ್ಯ ತೋರಲಿಲ್ಲ. ಯಾವುದೇ ಸಂದರ್ಭದಲ್ಲೂ ಪಂದ್ಯ ನಮ್ಮ ಕಡೆ ಇದ್ದಂತೆ ಕಾಣಲಿಲ್ಲ. ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ನಿಯಮಿತವಾಗಿ ಬೌಂಡರಿಗಳನ್ನು ಬಾರಿಸುತ್ತಲೇ ಇದ್ದರು. ಅದೇ ಸಮಯದಲ್ಲಿ, ಅವರು ಸತತವಾಗಿ ಸಿಂಗಲ್ಸ್ ತೆಗೆದುಕೊಂಡು ಸ್ಟ್ರೈಕ್ ಅನ್ನು ತಿರುಗಿಸಿದರು. ಉಮೇಶ್ ಯಾದವ್ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಪಡೆದರು, ಆಸೀಸ್ ಬೇಟೆ ನಿಲ್ಲಲಿಲ್ಲ. ಇದರಿಂದಾಗಿ ಭಾರತದ ಬೌಲರ್‌ಗಳು ತಮ್ಮ ಯೋಜನೆಯನ್ನು ಸರಿಯಾಗಿ ಕಾರ್ಯಗತಗೊಳಿಸಲು ಸಾಧ್ಯವಾಗದೇ ಇರಬಹುದು'' ಎಂದು ಆರ್‌ಪಿ ಸಿಂಗ್ ಬಹಿರಂಗಪಡಿಸಿದರು.

ಭಾರತದ ಬೌಲಿಂಗ್‌ನಲ್ಲಿ ಬದಲಾವಣೆ ಬೇಕಿದೆ ಎಂದ ಆರ್‌ಪಿ ಸಿಂಗ್
ಭಾರತೀಯ ಬೌಲಿಂಗ್ ಘಟಕ ಮತ್ತೊಮ್ಮೆ ತೀವ್ರ ಟೀಕೆಗೆ ಗುರಿಯಾಗಿರುವುದರಿಂದ ಮುಂಬರುವ ಪಂದ್ಯಗಳಲ್ಲಿ ಮಿಂಚಲು ತಂಡದಲ್ಲಿ ಕೆಲವು ಬದಲಾವಣೆಗಳನ್ನು ಆಡಳಿತ ಮಂಡಳಿ ಮಾಡಬೇಕಿದೆ ಎಂದು ಆರ್.ಪಿ ಸಿಂಗ್ ಹೇಳಿದ್ದಾರೆ. ಬೌಲರ್‌ಗಳು ವೈಡ್ ಯಾರ್ಕರ್‌ಗಳನ್ನು ಬೌಲಿಂಗ್ ಮಾಡುವಾಗ.. ನೀವು ಥರ್ಡ್ ಮ್ಯಾನ್ ಅನ್ನು ಪಾಯಿಂಟ್ ಅಥವಾ ಸರ್ಕಲ್ ಒಳಗೆ ಹಾಕಬೇಡಿ, ಆ ಯೋಜನೆಯು ನಿಜಕ್ಕೂ ಸರಿಯಾಗಿಲ್ಲ ಎಂದು ಮಾಜಿ ಬೌಲರ್ ತಿಳಿಸಿದ್ದಾರೆ.
''ಜೊತೆಗೆ ಫೀಲ್ಡಿಂಗ್ ನಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಬೇಕಿದೆ. ಇಲ್ಲದಿದ್ದರೆ ಪಂದ್ಯದಲ್ಲಿ ಭಾರತ ಆಟವೇ ಇರುವುದಿಲ್ಲ'' ಎಂದು ಹೇಳಿದರು. ಆಸ್ಟ್ರೇಲಿಯಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಎರಡನೇ ಟಿ20 ಪಂದ್ಯವು ಸೆಪ್ಟೆಂಬರ್ 23 ರಂದು ನಾಗ್ಪುರದ ವಿಸಿಎ ಸ್ಟೇಡಿಯಂನಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications