Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರೋಹಿತ್ ಶರ್ಮಾ ಮುಂದಿದೆ ಕಠಿಣ ಸವಾಲು, ವರ್ಷವಿಡೀ ಕ್ರಿಕೆಟ್ ಆಡಬಲ್ಲರೇ? ಎಂದು ಪ್ರಶ್ನಿಸಿದ ದಿನೇಶ್ ಕಾರ್ತಿಕ್

Rohit sharma

ಇತ್ತೀಚೆಗಷ್ಟೇ ಟೀಂ ಇಂಡಿಯಾಗೆ ಎಲ್ಲಾ ಮಾದರಿಯ ನಾಯಕರಾಗಿ ಆಯ್ಕೆಯಾಗಿರುವ ರೋಹಿತ್ ಶರ್ಮಾ ಬಗ್ಗೆ ಅನುಭವಿ ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್ ಆಶ್ಚರ್ಯಕಾರಿ ಹೇಳಿಕೆಯೊಂದನ್ನ ನೀಡಿದ್ದಾರೆ. ರೋಹಿತ್ ಶರ್ಮಾ ತಮ್ಮ ಅತ್ಯುತ್ತಮ ತಂತ್ರಗಾರಿಕೆಯಿಂದ ತಂಡವನ್ನು ಮುನ್ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದ ಅವರು, ಮುಂದಿನ ದಿನಗಳಲ್ಲಿ ನಾಯಕನಾಗಿ ಕಠಿಣ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರಬೇಕು ಎಂದು ಎಚ್ಚರಿಸಿದರು.

ರೋಹಿತ್ ಶರ್ಮಾ ಎಲ್ಲಾ ಮೂರು ಮಾದರಿಗಳಿಗೆ ನಾಯಕರಾಗಿ ಆಯ್ಕೆಯಾಗಿದ್ದಾರೆ. ಆದರೆ, ರೋಹಿತ್ ನಾಯಕನಾಗಿ ವರ್ಷವಿಡೀ ಸಾಕಷ್ಟು ಕ್ರಿಕೆಟ್ ಆಡಬೇಕಾಗಿದ್ದು, ಇದು ಅವರಿಗೆ ದೊಡ್ಡ ಸವಾಲಾಗಿದೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ. ರೋಹಿತ್ ಅವರು ತುಂಬಾ ಬುದ್ಧಿವಂತರು ಮತ್ತು ಅವರು ಅತ್ಯುತ್ತಮ ನಾಯಕ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು. ಅವರು ತಮ್ಮ ತಂತ್ರಗಾರಿಕೆ ಮೂಲಕ ಎಲ್ಲಾ ಮೂರು ಸ್ವರೂಪಗಳಲ್ಲಿ ಮಿಂಚುತ್ತಾರೆ.

ರೋಹಿತ್ ಶರ್ಮಾ ಮೈದಾನದಲ್ಲಿ ತಮ್ಮ ತಂತ್ರಗಾರಿಕೆಯಿಂದ ಪಂದ್ಯದ ಫಲಿತಾಂಶವನ್ನೇ ಬದಲಿಸಬಲ್ಲರು ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧ ಮುಕ್ತಾಯಗೊಂಡ ಮೂರನೇ ಟಿ20 ಪಂದ್ಯವೇ ಇದಕ್ಕೆ ನಿದರ್ಶನವಾಗಿದೆ ಎಂದರು. ಆ ಪಂದ್ಯದಲ್ಲಿ ನಾಯಕನಾಗಿ ರೋಹಿತ್ ಮಾಡಿದ್ದನ್ನು ನಾವು ನೋಡಿದ್ದೇವೆ ಎಂದರು.

ಬೌಲರ್‌ಗಳ ಆಯ್ಕೆಯು ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಬೆದರಿಕೆಯನ್ನುಂಟುಮಾಡಿತು ಮತ್ತು ವಿಂಡೀಸ್ ಗುರಿಯನ್ನು ಮುಟ್ಟಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಟೀಂ ಇಂಡಿಯಾ 17 ರನ್‌ಗಳ ಜಯ ಸಾಧಿಸಿತ್ತು. ಆದರೆ, ರೋಹಿತ್ ಶರ್ಮಾ ಅವರಿಗೆ ಈಗಾಗಲೇ 34 ವರ್ಷ ವಯಸ್ಸಾಗಿದೆ ಎಂದು ದಿನೇಶ್ ಕಾರ್ತಿಕ್ ನೆನಪಿಸಿದರು. ಅವರು ಇನ್ನೂ ಎಷ್ಟು ದಿನ ಕ್ರಿಕೆಟ್ ಆಡುತ್ತಾರೆ ಎಂಬ ಪ್ರಶ್ನೆ ಉಳಿದಿದೆ ಎಂದು ಹಿರಿಯ ವಿಕೆಟ್ ಕೀಪರ್ ಪ್ರಶ್ನಿಸಿದ್ದಾರೆ. ಒಂದು ರೀತಿಯಲ್ಲಿ ಪರೋಕ್ಷವಾಗಿ ರೋಹಿತ್ ಶರ್ಮಾ ಅವರನ್ನು ಎಲ್ಲಾ ಫಾರ್ಮ್ಯಾಟ್‌ಗಳಿಗೆ ನಾಯಕರನ್ನಾಗಿ ನೇಮಿಸುವುದನ್ನು ದಿನೇಶ್ ಕಾರ್ತಿಕ್ ವಿರೋಧಿಸಿದ್ದಾರೆ.

ಪ್ರಸ್ತುತ, ರೋಹಿತ್ ಅವರ ವಯಸ್ಸು ಅವರು ದೀರ್ಘಕಾಲದವರೆಗೆ ಕ್ರಿಕೆಟ್ ಆಡಲ್ಲ ಎಂದು ಸೂಚಿಸುತ್ತದೆ. ಮತ್ತೆ ಸ್ವಲ್ಪ ಸಮಯದಲ್ಲಿ ನಾಯಕನನ್ನು ಹುಡುಕಬೇಕಾಗಿದೆ ಎಂದು ಅವರು ಹೇಳುತ್ತಾರೆ. ಆದರೆ, ಬಿಸಿಸಿಐಗೆ ಯಾವುದೇ ಆಯ್ಕೆ ಇಲ್ಲ. ನಾಯಕನಾಗಿ ಕೆ.ಎಲ್ ರಾಹುಲ್ ಇನ್ನೂ ಕಲಿಯುವುದು ಬಹಳಷ್ಟಿದೆ. ರಿಷಬ್ ಪಂತ್ ಅವರಿಗೆ ಇನ್ನೂ ಅನುಭವವಿಲ್ಲ. ಉಳಿದವರ ಸ್ಥಿತಿಯೂ ಇದೇ ಆಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲ ರೀತಿಯಲ್ಲೂ ಅನುಕೂಲಕರವಾಗಿರುವ ರೋಹಿತ್ ಶರ್ಮಾಗೆ ಬಿಸಿಸಿಐ ನಾಯಕತ್ವವನ್ನು ಹಸ್ತಾಂತರಿಸಿದೆ.

Story first published: Tuesday, February 22, 2022, 22:47 [IST]
Other articles published on Feb 22, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+