ದಕ್ಷಿಣ ಆಫ್ರಿಕಾ ವಿರುದ್ಧ 5ನೇ ಟಿ20 ಪಂದ್ಯ ಗೆಲ್ಲಲು, ಭಾರತ ಈ 2 ತಪ್ಪನ್ನು ಸರಿಪಡಿಸಿಕೊಳ್ಳಬೇಕು: ಆಕಾಶ್ ಚೋಪ್ರಾ

ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿಯ ಐದನೇ ಪಂದ್ಯ ಇಂದು(ಭಾನುವಾರ) ನಡೆಯಲಿದೆ. ಮೊದಲೆರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಗೆದ್ದರೆ ಕೊನೆಯ ಎರಡರಲ್ಲಿ ಭಾರತ ಗೆದ್ದಿತ್ತು. ಹೀಗಾಗಿ ಬೆಂಗಳೂರಿನಲ್ಲಿ ನಡೆಯಲಿರುವ ಐದನೇ ಪಂದ್ಯದಲ್ಲಿ ವಿಜೇತರು ಯಾರು ಎಂಬುದು ನಿರ್ಧಾರವಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಭಾರತದ್ದೇ ಮೇಲುಗೈ.
ಟೀಂ ಇಂಡಿಯಾಗೆ ಬೆಂಗಳೂರು ಅತ್ಯಂತ ಪರಿಚಿತ ಪಿಚ್ ಆಗಿರುವುದು ಕೂಡ ತಂಡವನ್ನು ಬಲಪಡಿಸುತ್ತದೆ. ಅತ್ತ ಗಾಯಗಳು ದಕ್ಷಿಣ ಆಫ್ರಿಕಾವನ್ನು ಕಾಡುತ್ತಿವೆ, ಆದ್ರೆ ಈ ವಿಚಾರದಲ್ಲಿ ಟೀಂ ಇಂಡಿಯಾ ಪರವಾಗಿಲ್ಲ. ಹೀಗಿದ್ದರೂ ಸಹ ಭಾರತದ ಮಾಜಿ ಆರಂಭಿಕ ಮತ್ತು ನಿರೂಪಕ ಆಕಾಶ್ ಚೋಪ್ರಾ ಟೀಂ ಇಂಡಿಯಾ ಮುಂದಿರುವ ಎರಡು ಪ್ರಮುಖ ಸವಾಲುಗಳನ್ನು ತಿಳಿಸಿದ್ದಾರೆ.
ಟೀಂ ಇಂಡಿಯಾ ಐದನೇ ಟಿ20 ಪಂದ್ಯ ಗೆಲ್ಲಬೇಕಾದ್ರೆ ಈ ಎರಡು ಸವಾಲುಗಳನ್ನ ಮೆಟ್ಟಿ ನಿಲ್ಲಬೇಕಿದೆ.

ರಿಷಭ್ ಪಂತ್ ಫಾರ್ಮ್‌ಗೆ ಮರಳಬೇಕು
ಭಾರತದ ಮೊದಲ ಸಮಸ್ಯೆ ರಿಷಬ್ ಪಂತ್ ಅವರ ಫಾರ್ಮ್. ಭಾರತ ಈಗ ಒಂದಕ್ಕಿಂತ ಹೆಚ್ಚು ವಿಕೆಟ್ ಕೀಪರ್‌ಗಳನ್ನು ಹೊಂದಿದೆ ಎಂಬುದನ್ನು ರಿಷಭ್ ನೆನಪಿಟ್ಟುಕೊಳ್ಳಬೇಕು. ಇಶಾನ್ ಕಿಶನ್ ಉತ್ತಮವಾಗಿ ಆಡುತ್ತಿದ್ದಾರೆ. ಕೆ.ಎಲ್ ರಾಹುಲ್ ವಾಪಸ್ಸಾದ್ರೂ ಕೂಡ ಇಶಾನ್ ಕಿಶನ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡುವುದು ಖಚಿತ. ಇದ್ರ ಜೊತೆಗೆ ಕೆ.ಎಲ್ ರಾಹುಲ್ ಕೂಡ ವಿಕೆಟ್ ಕೀಪರ್ ಆಗಿದ್ದಾರೆ. ಆತ ತಂಡಕ್ಕೆ ಹೆಚ್ಚಿನ ಸಮತೋಲನವನ್ನು ನೀಡುತ್ತಾರೆ. ದಿನೇಶ್ ಕಾರ್ತಿಕ್ ಈಗ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೆ ಈಗ ಅವರನ್ನು ಕೇವಲ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲಾಗಿದೆ. ರಿಷಭ್ ಪಂತ್ ಪ್ರಸ್ತುತವಷ್ಟೇ ತಂಡದ ನಾಯಕ ಮತ್ತು ವಿಕೆಟ್ ಕೀಪರ್ ಆಗಿದ್ದಾರೆ.
ಭಾರತದ ಪ್ರಸ್ತುತ ಟಿ20 ಆಟಗಾರರಲ್ಲಿ ಹೆಚ್ಚಿನವರು ವಿಕೆಟ್ ಕೀಪರ್‌ಗಳಾಗಿದ್ದಾರೆ. ಇದು ಬಹಳ ಆಸಕ್ತಿದಾಯಕ ವಿಷಯವಾಗಿದೆ. ರಿಷಭ್‌ಗೆ ತಂಡದ ಯೋಜನೆಗಳ ಬಗ್ಗೆ ಸ್ಪಷ್ಟ ಕಲ್ಪನೆ ಇರಬೇಕು. ಅವರು ನಿರಂತರವಾಗಿ ಆಫ್‌ಸೈಡ್‌ನಲ್ಲಿ ಬರುವ ಎಸೆತಗಳಲ್ಲಿ ಔಟ್ ಆಗುತ್ತಾರೆ. ರಿಷಬ್ ತನ್ನ ಸಮಸ್ಯೆಯನ್ನು ಪರಿಹರಿಸಬೇಕು. ಅವರು ಫಾರ್ಮ್‌ಗೆ ಮರಳುವುದು ತಂಡಕ್ಕೆ ಬಹಳ ಮುಖ್ಯವಾಗಿದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
IND vs SA: 5ನೇ ಟಿ20ಯಲ್ಲಿ ಕಣಕ್ಕಿಳಿಯಲಿರುವ ಭಾರತ ತಂಡ; ಈ ಆಟಗಾರರು ಬೆಂಚ್ ಕಾಯುವುದು ಖಚಿತ!

ಶ್ರೇಯಸ್ ಅಯ್ಯರ್ ವೇಗವಾಗಿ ಸ್ಕೋರ್ ಮಾಡಬೇಕು
ಎರಡನೇ ಸಮಸ್ಯೆ ಶ್ರೇಯಸ್ ಅಯ್ಯರ್ ಅವರ ನಿಧಾನಗತಿ ಬ್ಯಾಟಿಂಗ್. 'ಅಯ್ಯರ್, ನನ್ನ ಸ್ನೇಹಿತ, ದಯವಿಟ್ಟು ಸ್ವಲ್ಪ ವೇಗವಾಗಿ ಸ್ಕೋರ್ ಮಾಡಿ' ಎಂದು ಆಕಾಶ್ ಚೋಪ್ರಾ ಹೇಳಿದರು. ಸರಣಿಯುದ್ದಕ್ಕೂ ಶ್ರೇಯಸ್ ಉತ್ತಮ ಸ್ಕೋರ್‌ಗಳನ್ನು ಪಡೆಯುತ್ತಿದ್ದಾರೆ ಆದರೆ ಸ್ಟ್ರೈಕ್‌ರೇಟ್ ಕಳಪೆಯಾಗಿದೆ.
ಮೂರನೇ ಕ್ರಮಾಂಕದಲ್ಲಿರುವ ಶ್ರೇಯಸ್ ತ್ವರಿತವಾಗಿ ಸ್ಕೋರ್ ಹೆಚ್ಚಿಸಿದರೆ ಮಾತ್ರ ಯಾವುದೇ ಮಿಡ್ ಫೀಲ್ಡ್ ಒತ್ತಡವಿಲ್ಲದೆ ಸ್ಕೋರ್ ಹೆಚ್ಚಿಸಬಹುದು. ಅಗ್ರ ಕ್ರಮಾಂಕದ ನಿಧಾನಗತಿಯು ರನ್ ರೇಟ್ ಮೇಲೆ ಪರಿಣಾಮ ಬೀರಿದರೆ, ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್ ಮೇಲೆ ಒತ್ತಡ ಹೇರುತ್ತದೆ ಮತ್ತು ಅವರ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ.
IND vs SA ಅಂತಿಮ ಟಿ20: ಈ ಮೈಲಿಗಲ್ಲುಗಳ ಮೇಲೆ ಪಾಂಡ್ಯ, ಇಶಾನ್ ಕಿಶನ್ ಮತ್ತು ದಿನೇಶ್ ಕಾರ್ತಿಕ್ ಕಣ್ಣು

ಬೆಂಗಳೂರಿನ ಪಿಚ್ ಬ್ಯಾಟಿಂಗ್‌ಗೆ ಹೆಚ್ಚು ಅನುಕೂಲ
ಬೆಂಗಳೂರಿನ ಪಿಚ್ ಬ್ಯಾಟಿಂಗ್‌ಗೆ ಅನುಕೂಲಕರವಾಗಿದೆ. ಸಮತಟ್ಟಾದ ಪಿಚ್ ಆಗಿರುವುದರಿಂದ ಉಭಯ ತಂಡಗಳ ಬ್ಯಾಟಿಂಗ್ ಬಲ ಪರೀಕ್ಷೆ ನಡೆಯಲಿದೆ. ಈ ಪಿಚ್‌ನಲ್ಲಿ ಭಾರತ ಐದು ಪಂದ್ಯಗಳನ್ನು ಆಡಿದ್ದರೆ, ಇಲ್ಲಿ ಕೇವಲ ಎರಡು ಪಂದ್ಯಗಳನ್ನು ಗೆದ್ದಿದೆ. ಟಾಸ್ ನಿರ್ಣಾಯಕವಾಗಲಿದೆ. ಅದೇನೇ ಇರಲಿ, ಬೆಂಗಳೂರಿನಲ್ಲಿ ಅಭಿಮಾನಿಗಳು ಭರ್ಜರಿ ಬ್ಯಾಟಿಂಗ್ ಹಬ್ಬವನ್ನು ನಿರೀಕ್ಷಿಸಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications