Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬುಮ್ರಾ ವಿಶ್ವದ ಬೆಸ್ಟ್ ಬೌಲರ್ ಅನ್ನೋದ್ರಲ್ಲಿ ಅನುಮಾನವಿಲ್ಲ, ಆತನಿಗೆ ಚಾಲೆಂಜ್ ಮಾಡಲಿದ್ದೇವೆ ಎಂದ ಜಾಸ್ ಬಟ್ಲರ್

bumrah vs buttler

ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಬ್ಯಾಟರ್‌ಗಳನ್ನ ಇನ್ನಿಲ್ಲದಂತೆ ಕಾಡಿದ ಜಸ್ಪ್ರೀತ್ ಬುಮ್ರಾ, ಆಂಗ್ಲರ ಪಾಲಿಗೆ ಸಿಂಹಸ್ವಪ್ನವಾಗಿರೋದ್ರಲ್ಲಿ ಅನುಮಾನವಿಲ್ಲ. ಏಕದಿನ ಕ್ರಿಕೆಟ್‌ನಲ್ಲಿ ವೃತ್ತಿಜೀವನದ ಬೆಸ್ಟ್ ಬೌಲಿಂಗ್ ಮಾಡಿದ ಬುಮ್ರಾ, ಆರು ವಿಕೆಟ್‌ಗಳನ್ನ ಉರುಳಿಸಿ ಅಬ್ಬರಿಸಿದ್ರು. ಹೀಗಾಗಿಯೇ ಇವರಿಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಕುಡ ಒಲಿದುಬಂದಿತು.

ಮೊದಲ ಪಂದ್ಯದಲ್ಲಿ ಬುಮ್ರಾ ಆಟಕ್ಕೆ ನಲುಗಿದ ಇಂಗ್ಲೆಂಡ್ ಗುರುವಾರ ಲಾರ್ಡ್ಸ್‌ ಮೈದಾನದಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಜಸ್ಪ್ರೀತ್‌ಗೆ ಸವಾಲೆಸೆಯಲು ಸಜ್ಜಾಗಿದೆ ಎಂದು ತಂಡದ ನಾಯಕ ಜಾಸ್ ಬಟ್ಲರ್ ಹೇಳಿದ್ದಾರೆ.

38 ಡಾಟ್ ಬಾಲ್ 6 ವಿಕೆಟ್ ಉರುಳಿಸಿದ ಬುಮ್ರಾ

38 ಡಾಟ್ ಬಾಲ್ 6 ವಿಕೆಟ್ ಉರುಳಿಸಿದ ಬುಮ್ರಾ

ಜಸ್ಪ್ರೀತ್ ಬುಮ್ರಾ ಬೌಲಿಂಗ್ ದಾಳಿಗೆ ಹೇಗಿತ್ತು ಎಂಬುದಕ್ಕೆ ಆತ ಬೌಲಿಂಗ್ ಮಾಡಿದ ಡಾಟ್ ಬಾಲ್‌ಗಳೇ ಸಾಕ್ಷಿಯಾಗಿತ್ತು. ಮಾಡಿದ 7.2 ಓವರ್‌ಗಳಲ್ಲಿ ಅಂದ್ರೆ 44 ಎಸೆತಗಳಲ್ಲಿ 38 ಡಾಟ್ ಬಾಲ್ ಆಗಿತ್ತು. ಇನ್ನು ವೈಡ್ ಸೇರಿದಂತೆ ಉಳಿದ ನಾಲ್ಕು ಎಸೆತಗಳಲ್ಲಿ 19 ರನ್ ನೀಡಿದ 6 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ಭಾರತದ ವಿರುದ್ಧ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಸ್ಕೋರ್ 110ರನ್‌ಗಳಿಸಿ ಆಲೌಟ್ ಆಯಿತು. ಭಾರತ ಒಂದು ವಿಕೆಟ್ ಕಳೆದುಕೊಳ್ಳದೆ ಗುರಿಯನ್ನ ತಲುಪಿತು.

ಕೊಹ್ಲಿ ರನ್‌ಗಳಿಸುತ್ತಿಲ್ಲವೆಂದು ತಂಡದಿಂದ ನೇರವಾಗಿ ಹೊರ ಹಾಕಲು ಸಾಧ್ಯವಿಲ್ಲ: ಆಶಿಶ್ ನೆಹ್ರಾ

ಆತ ಅದ್ಭುತ ಬೌಲರ್ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದ ಬಟ್ಲರ್

ಆತ ಅದ್ಭುತ ಬೌಲರ್ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದ ಬಟ್ಲರ್

ಕಾಮೆಂಟೇಟರ್ ಹಾಗೂ ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ ಹೇಳಿದ ಮಾತಿಗೆ ಪ್ರತಿಕ್ರಿಯಿಸಿರುವ ಇಂಗ್ಲೆಂಡ್ ನಾಯಕ ಜಾಸ್ ಬಟ್ಲರ್ ಬುಮ್ರಾ ಅದ್ಭುತ ಬೌಲರ್ ಅನ್ನೋದ್ರಲ್ಲಿ ಅನುಮಾನವಿಲ್ಲ ಎಂದಿದ್ದಾರೆ. ಮೂರು ಫಾರ್ಮೆಟ್‌ನಲ್ಲಿ ಬುಮ್ರಾಗಿಂತ ಬೆಸ್ಟ್ ಬೌಲರ್ ಯಾರಾದರೂ ಇದ್ದಾರೆಯೇ ಎಂದು ನಾಸಿರ್ ಹುಸೇನ್ ಪ್ರಶ್ನಿಸಿದ್ದರು.

"ಅವರು ಅದ್ಭುತ ಬೌಲರ್ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಹಲವಾರು ವರ್ಷಗಳಿಂದ ವಿಶ್ವದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಆತ ತನ್ನ ಶಕ್ತಿಯನ್ನು ಬಲವಾಗಿ ಪರಿವರ್ತಿಸಿ ತೋರಿಸುತ್ತಿದ್ದಾನೆ. ಈ ಮೂಲಕ ಭಾರತದ ವಿರುದ್ಧ ಆಡುವುದು ದೊಡ್ಡ ಸವಾಲಾಗಿದ್ದು, ಈ ಅದ್ಭುತ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳನ್ನು ಎದುರಿಸಬೇಕಾಗಿದೆ'' ಎಂದು ಬಟ್ಲರ್ ಹೇಳಿದ್ದಾರೆ.

IND vs ENG ದ್ವಿತೀಯ ಏಕದಿನ ಪಂದ್ಯ: ಈ ಮೈಲಿಗಲ್ಲುಗಳ ಮೇಲೆ ರೋಹಿತ್, ಪಾಂಡ್ಯ ಮತ್ತು ರೂಟ್ ಕಣ್ಣು

ಲಂಕಾದಲ್ಲಿ ನಡಿಬೇಕಾಗಿದ್ದ ಪಂದ್ಯಕ್ಕೆ ಕತ್ತರಿ !! | *Cricket | Oneindia Kannada
ಬೆಸ್ಟ್ ಬೌಲರ್‌ಗಳಲ್ಲಿ ಬುಮ್ರಾ ಒಬ್ಬಾತ ಎಂದ ಬಟ್ಲರ್‌ಗೆ ಮರು ಪ್ರಶ್ನೆ ಹಾಕಿದ ಪತ್ರಕರ್ತ

ಬೆಸ್ಟ್ ಬೌಲರ್‌ಗಳಲ್ಲಿ ಬುಮ್ರಾ ಒಬ್ಬಾತ ಎಂದ ಬಟ್ಲರ್‌ಗೆ ಮರು ಪ್ರಶ್ನೆ ಹಾಕಿದ ಪತ್ರಕರ್ತ

ಟೀಂ ಇಂಡಿಯಾದಂತಹ ತಂಡವನ್ನ ಎದುರಿಸುವ ಸಲುವಾಗಿಯೇ ಅಂತರಾಷ್ಟ್ರೀಯ ಕ್ರಿಕೆಟ್ ಆಡಬೇಕು ಎಂದು ಹೇಳಿರುವ ಜಾಸ್ ಬಟ್ಲರ್‌, ಬುಮ್ರಾ ಬೆಸ್ಟ್ ಬೌಲರ್‌ಗಳಲ್ಲಿ ಒಬ್ಬಾತ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಗುರುವಾರ ನಡೆಯಲಿರುವ ಪಂದ್ಯದಲ್ಲಿ ಬುಮ್ರಾಗೆ ಸವಾಲೆಸೆಯಲಿದ್ದೇವೆ ಎಂದು ಜಾಸ್ ಬಟ್ಲರ್ ಹೇಳಿದ್ದಾರೆ.

ಆದ್ರೆ ಬಟ್ಲರ್ ನೀಡಿದ ಉತ್ತರದಿಂದ ತೃಪ್ತಿಗೊಳ್ಳದ ಪತ್ರಕರ್ತನು ಮರು ಪ್ರಶ್ನೆ ಹಾಕಿದ್ದಾರೆ. ನೀವು ನನ್ನ ಪ್ರಶ್ನೆಗೆ ಸರಿಯಾದ ಉತ್ತರ ನೀಡಲಿಲ್ಲ. ಬುಮ್ರಾ ಬೆಸ್ಟ್ ಬೌಲರ್ ಆಗಿದ್ದಾನೆಯೇ ಅಥವಾ ಬೆಸ್ಟ್ ಬೌಲರ್‌ಗಳಲ್ಲಿ ಒಬ್ಬಾತನ? ಎಂದು ಮತ್ತೆ ಪ್ರಶ್ನೆ ಕೇಳಿದರು. ಇದಕ್ಕೆ ಬಟ್ಲರ್ ಎರಡು ಪದಗಳ ಉತ್ತರ ನೀಡಿದ್ದು, 'ನೀವೆ ನಿರ್ಧರಿಸಿ' ಎಂದು ಹೇಳುವ ಮೂಲಕ ಮುಂದಿನ ಪ್ರಶ್ನೆಗೆ ಹೋಗಿದ್ದಾರೆ.

Story first published: Thursday, July 14, 2022, 9:39 [IST]
Other articles published on Jul 14, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+