ಕೊಹ್ಲಿ ರನ್‌ಗಳಿಸುತ್ತಿಲ್ಲವೆಂದು ತಂಡದಿಂದ ನೇರವಾಗಿ ಹೊರ ಹಾಕಲು ಸಾಧ್ಯವಿಲ್ಲ: ಆಶಿಶ್ ನೆಹ್ರಾ

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈ ಬಿಡಲು ಸಾಧ್ಯವಿಲ್ಲ ಎಂದು ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ಹೇಳಿದ್ದಾರೆ. ಆತ ಸತತವಾಗಿ ರನ್ ಕಲೆಹಾಕಲು ವಿಫಲರಾದ ಮಾತ್ರಕ್ಕೆ ಆತನನ್ನು ಹೊರಹಾಕುವುದು ಸರಿಯಲ್ಲ ಏಕೆಂದರೆ ಆತ ಹಲವು ವರ್ಷಗಳ ಕಾಲ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ ಎಂದು ನೆಹ್ರಾ ಹೇಳಿದ್ದಾರೆ.
ಕೋವಿಡ್-19 ಶುರುವಾದಾಗಿನಿಂದಲೂ ಕೊಹ್ಲಿ ಫಾರ್ಮ್ ಕೂಡ ಕಳಪೆ ಆಗಿ ಹೋಗಿದೆ. 2019 ನವೆಂಬರ್ ಈಚೆಗೆ ಒಂದೇ ಒಂದು ಶತಕ ಸಿಡಿದಿಲ್ಲ. ಹೀಗಾಗಿ ತುಂಬಾ ಕೆಟ್ಟ ಸಮಯವನ್ನ ವಿರಾಟ್ ಎದುರಿಸುತ್ತಿದ್ದಾರೆ.

ಫಾರ್ಮ್ ಇಲ್ಲದ ಆಟಗಾರನಿಗೆ ವಿಶ್ರಾಂತಿ ನೀಡುತ್ತಿರುವುದು ಮೊದಲೇನಲ್ಲ!
"ಫಾರ್ಮ್‌ನಿಂದ ಹೊರಗಿರುವ ಆಟಗಾರನಿಗೆ ವಿಶ್ರಾಂತಿ ನೀಡಿರುವುದು ಇದೇ ಮೊದಲಲ್ಲ. ಒಬ್ಬ ಆಟಗಾರನು ದೀರ್ಘಕಾಲದವರೆಗೆ ಸ್ಥಿರವಾಗಿಲ್ಲದಿದ್ದರೆ, ಅವನು ತಂಡದಿಂದ ಹೊರಹೋಗುವ ಸಮಯ ಎದುರಿಸುತ್ತಾನೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಉದಾಹರಣೆಗೆ ವಿರಾಟ್ ಕೊಹ್ಲಿ. ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ ಮತ್ತು ದೇಶಕ್ಕಾಗಿ ತುಂಬಾ ಮಾಡಿದ್ದಾರೆ'' ಹೀಗಾಗಿ ಅವರಿಗೆ ವಿಶ್ರಾಂತಿ ಅಗತ್ಯವಿದೆ ಎಂದು ನೆಹ್ರಾ ಹೇಳಿದ್ದಾರೆ.
ಉಮ್ರಾನ್ ಮಲಿಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಇನ್ನೂ ಸಿದ್ಧವಾಗಿಲ್ಲ ಎಂದ ಆಕಾಶ್ ಚೋಪ್ರ

ಕೊಹ್ಲಿಯನ್ನ ತಕ್ಷಣವೇ ತಂಡದಿಂದ ಡ್ರಾಪ್ ಮಾಡಲು ಸಾಧ್ಯವಿಲ್ಲ
ವಿರಾಟ್ ಕೊಹ್ಲಿ ರನ್‌ಗಳಿಸುತ್ತಿಲ್ಲ ಎಂದ ಮಾತ್ರಕ್ಕೆ ಆತನನ್ನ ತಕ್ಷಣವೇ ತಂಡದಿಂದ ಕೈ ಬಿಡಲು ಸಾಧ್ಯವಿಲ್ಲ ಎಂದು ನೆಹ್ರಾಜಿ ಕೊಹ್ಲಿಯನ್ನ ಬೆಂಬಲಿಸಿದ್ದಾರೆ.
"ಆತ ರನ್‌ಗಳ ಕೊರತೆ ಎದುರಿಸುತ್ತಿದ್ದಾನೆ ಎಂದ ಮಾತ್ರಕ್ಕೆ ನೀವು ಅವನನ್ನು ತಕ್ಷಣವೇ ಡ್ರಾಪ್ ಮಾಡಲು ಸಾಧ್ಯವಿಲ್ಲ. ಹೌದು, ಅವರು ಸ್ಥಿರವಾಗಿಲ್ಲ ಮತ್ತು ಅವರು ತಮ್ಮ ಕ್ಯಾಲಿಬರ್‌ಗೆ ತಕ್ಕಂತೆ ಕಾರ್ಯನಿರ್ವಹಿಸಿಲ್ಲ ಎಂದು ಸ್ವತಃ ತಿಳಿದಿರುತ್ತಾರೆ. ಆದರೆ ಒಬ್ಬ ವ್ಯಕ್ತಿಯನ್ನು ಕೈಬಿಡುವುದು ಯಾವಾಗಲೂ ಪರಿಹಾರವಲ್ಲ "ಎಂದು ನೆಹ್ರಾ ನ್ಯೂಸ್ 18 ಕ್ರಿಕೆಟ್ ನೆಕ್ಸ್ಟ್‌ಗೆ ತಿಳಿಸಿದರು.
Ind vs Eng 2nd ODI: ಪಂದ್ಯದ ಪ್ರೆಡಿಕ್ಷನ್, ಡ್ರೀಂ ಟೀಮ್, ಪ್ಲೇಯಿಂಗ್ 11, ಫ್ಯಾಂಟೆಸಿ ಕ್ರಿಕೆಟ್ ಟಿಪ್ಸ್

ರೋಹಿತ್ ಶರ್ಮಾ ಕೂಡ ರನ್‌ಗಳಿಸಿಲ್ಲ !
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಟಾಪ್ ಆರ್ಡರ್‌ನಲ್ಲಿ ಮಿಂಚುವಲ್ಲಿ ಸಾಧ್ಯವಾಗುತ್ತಿಲ್ಲ. ಆದ್ರೂ ಅವರನ್ನೇಕೆ ತಂಡದಲ್ಲಿ ಮುಂದುವರಿಸಲಾಗಿದೆ ಎಂಬುದನ್ನ ಅರ್ಥಮಾಡಿಕೊಳ್ಳಬೇಕು.
"ಒಂದರ ಹಿಂದೆ ಮತ್ತೊಂದು ಕ್ರಿಕೆಟ್ ಸರಣಿಗಳು ನಡೆಯುತ್ತಿದೆ. ವಿರಾಟ್ ಟಿ20ಗಳಲ್ಲಿ ರನ್ ಗಳಿಸಲಿಲ್ಲ ಸರಿ, ರೋಹಿತ್ ಕೂಡ ಮಾಡಲಿಲ್ಲ. ಅವರಿಬ್ಬರೂ ಉತ್ತಮ ಐಪಿಎಲ್ ಋತುವನ್ನು ಹೊಂದಿಲ್ಲ. ಆದರೆ ಈಗ ನಂತರದ ಏಕದಿನಗಳಲ್ಲಿ ಅರ್ಧಶತಕವನ್ನು ಗಳಿಸಿದ್ದಾರೆ. ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, "ಎಂದು ಅವರು ಹೇಳಿದರು.
ಈ ಇಬ್ಬರು ಆಟಗಾರರು ಒಮ್ಮೆ ಫಾರ್ಮ್‌ಗೆ ಮರಳಿದರೆ ದೊಡ್ಡ ಇನ್ನಿಂಗ್ಸ್ ಆಡುತ್ತಾರೆ ಎಂದು ನೆಹ್ರಾ ಕೊಹ್ಲಿ ಹಾಗೂ ರೋಹಿತ್‌ನನ್ನ ಬೆಂಬಲಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications