
1) ಟೀಂ ಇಂಡಿಯಾ ಪರ ಮೂರು ಫಾರ್ಮೆಟ್ ಕ್ಯಾಪ್ಟನ್ ಆಗಿದ್ದ ಕೊಹ್ಲಿ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಳೆದ ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ನಾಯಕರಾಗಿದ್ದರು. ಕೊಹ್ಲಿ ನೇತೃತ್ವದಲ್ಲಿಯೇ ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಅಂತರದಲ್ಲಿ ಮುನ್ನಡೆ ಪಡೆದುಕೊಂಡಿತ್ತು. ಆದ್ರೀಗ ಐದನೇ ಟೆಸ್ಟ್ ಪಂದ್ಯದ ವೇಳೆಗೆ ಕೊಹ್ಲಿ ಮೂರು ಫಾರ್ಮೆಟ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ.

2) ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕನಾಗಿದ್ದ ಜೋ ರೂಟ್
ಟೀಂ ಇಂಡಿಯಾದ ರೀತಿಯಲ್ಲಿಯೇ ಇಂಗ್ಲೆಂಡ್ ತಂಡದಲ್ಲೂ ಮೂರು ಮಾದರಿಯ ಕ್ರಿಕೆಟ್ ತಂಡದ ನಾಯಕ ಬದಲಾಗಿದ್ದಾರೆ. ಕೊಹ್ಲಿ ಟೀಂ ಇಂಡಿಯಾ ನಾಯಕನಾಗಿದ್ದ ಸರಣಿಯಲ್ಲಿ, ಜೋ ರೂಟ್ ಇಂಗ್ಲೆಂಡ್ ತಂಡದ ನಾಯಕನಾಗಿದ್ದರು. ಆದ್ರೀಗ ಇಬ್ಬರು ನಾಯಕರು ಒಂದೇ ಸರಣಿ ಮುಕ್ತಾಯಕ್ಕೂ ಮೊದಲೇ ನಾಯಕತ್ವದಿಂದ ಹಿಂದೆ ಸರಿದಿದ್ದಾರೆ.
IND vs ENG 5ನೇ ಟೆಸ್ಟ್: ಭಾರತ ವಿರುದ್ಧ ಆಕ್ರಮಣಕಾರಿ ಆಟ; ಎಚ್ಚರಿಸಿದ ಬೆನ್ ಸ್ಟೋಕ್ಸ್

3) ಉಮ್ರಾನ್ ಮಲ್ಲಿಕ್ ಭಾರತ ಪರ ಪದಾರ್ಪಣೆ ಮಾಡಿರಲಿಲ್ಲ
ಟೀಂ ಇಂಡಿಯಾ ಯುವ ವೇಗಿ ಉಮ್ರಾನ್ ಮಲ್ಲಿಕ್ ನಾಲ್ಕು ಮತ್ತು ಐದನೇ ಟೆಸ್ಟ್ ನಡುವಿನ ಸಮಯದಲ್ಲಿ ಟೀಂ ಇಂಡಿಯಾ ಪರ ಪದಾರ್ಪಣೆಯನ್ನೇ ಮಾಡಿರಲಿಲ್ಲ. ಐಪಿಎಲ್ 2022ರ ಸೀಸನ್‌ನಲ್ಲಿ ಶೈನ್ ಆದ ಬಳಿಕ ಉಮ್ರಾನ್ ಟೀಂ ಇಂಡಿಯಾ ಸ್ಕ್ವಾಡ್ ಸೇರಿಕೊಂಡರು. ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳಲ್ಲೂ ಅವಕಾಶ ಪಡೆಯದ ಉಮ್ರಾನ್ ಕಳೆದ ಐರ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಮೊದಲ ಬಾರಿಗೆ ಬ್ಲ್ಯೂ ಜೆರ್ಸಿ ತೊಟ್ಟು ಚೊಚ್ಚಲ ವಿಕೆಟ್ ಪಡೆದರು.

4) ಆಸ್ಟ್ರೇಲಿಯಾ ಒಂದು ಟಿ20 ವಿಶ್ವಕಪ್ ಗೆದ್ದಿರಲಿಲ್ಲ!
ವಿಶೇಷ ಅಂದ್ರೆ ಭಾರತದ ಒಂದು ಟೆಸ್ಟ್ ಸರಣಿ ಮುಕ್ತಾಯದ ವೇಳೆಯಲ್ಲಿ ಆಸ್ಟ್ರೇಲಿಯಾ ತಂಡವು ಚೊಚ್ಚಲ ಟಿ20 ವಿಶ್ವಕಪ್‌ಗೆ ಮುತ್ತಿಟ್ಟಿದೆ. ಆದ್ರೆ ಇಂಗ್ಲೆಂಡ್ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳನ್ನಾಡಿದ ಸಮಯದಲ್ಲಿ ಆಸ್ಟ್ರೇಲಿಯಾ ಒಂದೇ ಒಂದು ಟಿ20 ವಿಶ್ವಕಪ್ ಗೆದ್ದಿರಲಿಲ್ಲ. ಆದ್ರೆ 2021ರಲ್ಲಿ ನಡೆದ ಟೂರ್ನಮೆಂಟ್‌ನಲ್ಲಿ ಆರೋನ್ ಫಿಂಚ್ ನಾಯಕತ್ವದಲ್ಲಿ ಕಾಂಗರೂಗಳು ಕಪ್ ಗೆದ್ದು ಬೀಗಿದರು.
IND vs ENG: ಐದನೇ ಟೆಸ್ಟ್ ಪಂದ್ಯಕ್ಕೆ ಬಲಿಷ್ಠ ಆಡುವ ಬಳಗ ಘೋಷಿಸಿದ ಇಂಗ್ಲೆಂಡ್

5) ಗುಜರಾತ್ ಟೈಟನ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡವೇ ಇರಲಿಲ್ಲ!
ಐಪಿಎಲ್ ಇತಿಹಾಸದಲ್ಲಿ ಕಳೆದೊಂದು ವರ್ಷದಲ್ಲಿ ಗುಜರಾತ್ ಟೈಟನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಎಂಬ ತಂಡಗಳೇ ಸೃಷ್ಟಿಯಾಗಿರಲಿಲ್ಲ, ಆದ್ರೀಗ ಐಪಿಎಲ್‌ನಲ್ಲಿ ಒಟ್ಟು 10 ತಂಡಗಳು ಸ್ಪರ್ಧೆ ಮಾಡುತ್ತಿದ್ದು, ಚೊಚ್ಚಲ ಸೀಸನ್‌ನಲ್ಲೇ ಗುಜರಾತ್ ಟೈಟನ್ಸ್ ಚಾಂಪಿಯನ್ ಪಟ್ಟಕ್ಕೇರಿತು.

6) ಬಟ್ಲರ್ ಕೇವಲ ಒಂದು ಟಿ20 ಶತಕ ಬಾರಿಸಿದ್ದರು
ಜಾಸ್ ಬಟ್ಲರ್ ಕೇವಲ ಒಂದು ಟಿ20 ಶತಕ ದಾಖಲಿಸಿದ್ದರು. ಆದ್ರೆ ಐಪಿಎಲ್ 2022ರ ಸೀಸನ್‌ನಲ್ಲಿ ಬಟ್ಲರ್ ಒಟ್ಟಾರೆ 17 ಪಂದ್ಯಗಳಿಂದ ಬಟ್ಟರ್ 863 ರನ್ ಕಲೆಹಾಕುವ ಮೂಲಕ ಆರೆಂಜ್ ಕ್ಯಾಪ್ ಗೆದ್ದರು. ಬಟ್ಟರ್ ಇನ್ನಿಂಗ್ಸ್‌ನಲ್ಲಿ 4 ಶತಕ ಹಾಗೂ 4 ಅರ್ಧಶತಕ ದಾಖಲಿಸಿದ್ದರು. ವಿರಾಟ್ ಕೊಹ್ಲಿ ಬಳಿಕ ಐಪಿಎಲ್ ಸೀಸನ್‌ವೊಂದರಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಆಗಿ ಹೊರಹೊಮ್ಮಿದರು.
ಇಂಗ್ಲೆಂಡ್ ತಂಡದ ಲಿಮಿಟೆಡ್ ಓವರ್ ಫಾರ್ಮೆಟ್ ನಾಯಕನಾಗಿ ಜಾಸ್ ಬಟ್ಲರ್ ಆಯ್ಕೆ

7) ಇಯಾನ್ ಮಾರ್ಗನ್ ಇಂಗ್ಲೆಂಡ್ ವೈಟ್ ಬಾಲ್ ಕ್ಯಾಪ್ಟನ್ ಆಗಿದ್ರು!
ಹೌದು ಕಳೆದ ವರ್ಷ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿದ್ದಾಗ ಇಯಾನ್ ಮಾರ್ಗನ್ ವೈಟ್‌ಬಾಲ್ ಕ್ಯಾಪ್ಟನ್ ಆಗಿ ಮುನ್ನಡೆಸಿದ್ರು. ಆದ್ರೆ ಟೀಂ ಇಂಡಿಯಾ ಬಾಕಿ ಉಳಿದಿದ್ದ ಐದನೇ ಟೆಸ್ಟ್ ಪಂದ್ಯವನ್ನಾಡಲು ಇಂಗ್ಲೆಂಡ್ ಗೆ ಕಾಲಿಟ್ಟ ಬಳಿಕ ಇದೀಗ ಇಯಾನ್ ಮಾರ್ಗನ್ ಕ್ರಿಕೆಟ್ ಲೋಕಕ್ಕೆ ಗುಡ್‌ಬೈ ಹೇಳಿದ್ದಾರೆ. ಜಾಸ್ ಬಟ್ಲರ್ ನೂತನ ಲಿಮಿಟೆಡ್ ಓವರ್ ನಾಯಕತ್ವ ವಹಿಸಿದ್ದಾರೆ.

8) ಭಾರತ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಸೋತಿರಲಿಲ್ಲ!
ಭಾರತವು ಕಳೆದ ಟಿ20 ವಿಶ್ವಕಪ್‌ವರೆಗೂ ಪಾಕಿಸ್ತಾನ ವಿರುದ್ಧ ಯಾವುದೇ ವಿಶ್ವಕಪ್ ಪಂದ್ಯವನ್ನ ಸೋತಿರಲಿಲ್ಲ. ಆದ್ರೆ 2021ರಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವು ಭಾರತ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.

9) ಕಪಿಲ್ ದೇವ್ ಬಳಿಕ ಟೀಂ ಇಂಡಿಯಾ ನಾಯಕನಾದ ವೇಗಿ ಬುಮ್ರಾ
1987ರಲ್ಲಿ ಕಪಿಲ್ ದೇವ್ ಟೀಂ ಇಂಡಿಯಾ ಟೆಸ್ಟ್ ನಾಯಕತ್ವಕ್ಕೆ ವಿದಾಯ ಹೇಳಿದ್ದರು. ಆ ಬಳಿಕ ಟೆಸ್ಟ್ ತಂಡಕ್ಕೆ ಯಾವೊಬ್ಬ ವೇಗಿಯು ನಾಯಕರಾಗಿಲ್ಲ. ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ನಾಯಕನಾಗಿದ್ದರೂ ಸಹ ವೇಗದ ಬೌಲರ್ ಭಾರತದ ಚುಕ್ಕಾಣಿ ಹಿಡಿದಿರಲಿಲ್ಲ. ಆದ್ರೀಗ 35 ವರ್ಷಗಳ ಬಳಿಕ ವೇಗಿಗೆ ನಾಯಕತ್ವ ಸಿಕ್ಕಿದ್ದು, ಜಸ್ಪ್ರೀತ್ ಬುಮ್ರಾ ನಾಯಕರಾಗಿದ್ದಾರೆ.
ಜೊತೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಗೆ ನಾಯಕನಾಗಿದ್ದ ರಿಷಭ್ ಪಂತ್ ಉಪನಾಯಕರಾಗಿ ಆಯ್ಕೆಗೊಂಡಿದ್ದಾರೆ.

10) ಎಬಿ ಡಿವಿಲಿಯರ್ಸ್ ಆರ್‌ಸಿಬಿ ಪರ ಆಡುತ್ತಿದ್ದರು!
ಆರ್‌ಸಿಬಿ ಪರ ಸೂಪರ್‌ಸ್ಟಾರ್ ಎಬಿ ಡಿವಿಲಿಯರ್ಸ್ ಭಾರತದ ಕಳೆದ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಆರ್‌ಸಿಬಿ ಪರವೇ ಉಳಿದಿದ್ದರು. ಆದ್ರೆ ಐಪಿಎಲ್ 2022ರ ಸೀಸನ್ ವೇಳೆಗೆ ಎಬಿಡಿ ಐಪಿಎಲ್‌ನಿಂದ ದೂರ ಉಳಿದರು.


Click it and Unblock the Notifications
