Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯನ್ ಗೇಮ್ಸ್‌ನಲ್ಲಿ ಟೀಮ್ ಇಂಡಿಯಾ ನಾಯಕತ್ವ ವಹಿಸಲು ಅರ್ಹ ಮೂವರು ಕ್ರಿಕೆಟಿಗರು

ಈ ಬಾರಿ ಚೀನಾದ ಹ್ಯಾಂಗ್‌ಜೂನಲ್ಲಿ ಏಷನ್ ಗೇಮ್ಸ್ ಕ್ರೀಡಾಕೂಟ ನಡೆಯಲಿದ್ದು ಈ ಟೂರ್ನಿಯಲ್ಲಿ ಕ್ರಿಕೆಟ್ ಕೂಡ ಟೂರ್ನಿಯಲ್ಲಿರುವ ಸ್ಪರ್ಧೆಗಳಲ್ಲಿ ಒಂದಾಗಿದೆ. ಹೀಗಾಗಿ ಬಿಸಿಸಿಐ ಭಾರತದ ಮಹಿಳಾ ಹಾಗೂ ಪುರುಷರ ತಂಡವನ್ನು ಈ ಕ್ರೀಡಾಕೂಡದಲ್ಲಿ ಆಡಿಸಲು ಒಪ್ಪಿಕೊಂಡಿದೆ. ಆದರೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪುರುಷರ ಎರಡನೇ ದರ್ಜೆಯ ತಂಡವನ್ನು ಕಳುಹಿಸುವ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಂಡಿದ್ದು ಮಹಿಳಾ ವಿಭಾಗದಲ್ಲಿ ಪೂರ್ಣಪ್ರಮಾಣದ ತಂಡವನ್ನು ಕಳುಹಿಸಲಿದೆ.

ಏಷ್ಯನ್ ಗೇಮ್ಸ್‌ನಲ್ಲಿ ಟಿ20 ಮಾದರಿಯಲ್ಲಿ ಕ್ರಿಕೆಟ್ ಆಡುತ್ತಿರುವ ಕಾರಣದಿಂದಾಗಿ ಏಕದಿನ ವಿಶ್ವಕಪ್ ನಡೆಯುತ್ತಿರುವ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ತಂಡವನ್ನು ಈ ಟೂರ್ನಿಗೆ ಕಳುಹಿಸದಿರಲು ನಿರ್ಧರಿಸಿದೆ ಎನ್ನಲಾಗುತ್ತಿದೆ. ಹೀಗಾಗಿ ದ್ವಿತೀಯ ದರ್ಜೆಯ ಭಾರತ ತಂಡ ಏಷ್ಯನ್‌ಗೇಮ್ಸ್‌ನಲ್ಲಿ ಕಣಕ್ಕಿಳಿಯುವುದು ಸ್ಪಷ್ಟ.

These 3 cricketers are best option for lead Indian Team in Asian Games 2023

ಆದರೆ ಈ ತಂಡದಲ್ಲಿ ಯಾವೆಲ್ಲಾ ಆಟಗಾರರಿಗೆ ಅವಕಾಶ ದೊರೆಯಲಿದೆ ಎಂಬುದರಿಂದ ಹಿಡಿದು ಯಾರಿಗೆ ನಾಯಕತ್ವ ದೊರೆಯಲಿದೆ ಎಂಬುದು ಕೂಡ ದೊಡ್ಡ ಪ್ರಶ್ನೆಯಾಗಿದೆ. ಹಾಗಾದರೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಬಹುದಾದ ಸಂಭವನೀಯ ಮೂವರು ನಾಯಕರ ಬಗ್ಗೆ ಇಲ್ಲಿದೆ ಮಾಹಿತಿ.

ಶಿಖರ್ ಧವನ್

ಅನುಭವಿ ಕ್ರಿಕೆಟಿಗ ಶಿಖರ್ ಧವನ್ ಭಾರತ ತಂಡವನ್ನು ಏಷ್ಯಾ ಕಪ್‌ನಲ್ಲಿ ಮುನ್ನಡೆಸುವುದು ಬಹುತೇಕ ಖಚಿತವಾಗಿದೆ. ಸದ್ಯ ಟೀಮ್ ಇಂಡಿಯಾ ಪ್ರಾಥಮಿಕ ತಂಡದಿಂದ ಹೊರಬಿದ್ದಿರುವ ಶಿಖರ್ ಧವನ್ ಏಷ್ಯನ್ ಗೇಮ್ಸ್‌ನಲ್ಲಿ ಮುನ್ನಡೆಸಲು ಅತ್ಯುತ್ತಮ ಆಯ್ಕೆಗೂ ಹೌದು. ಉತ್ತಮ ಫಾರ್ಮ್‌ನಲ್ಲಿದ್ದೂ ಧವನ್‌ಗೆ ಟೀಮ್ ಇಂಡಿಯಾದಲ್ಲಿ ಅವಕಾಶ ದೊರೆಯದಿರುವ ಸಂದರ್ಭದಲ್ಲಿ ಏಷ್ಯನ್ ಗೇಮ್ಸ್‌ನಂಥಾ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ಧಾರಿ ದೊರೆತರೆ ಅದು ಪರಿಣಾಮಕಾರಿಯೆನಿಸಲಿದೆ ಎಂಬುದು ಅಭಿಪ್ರಾಯ.

ಆರ್ ಅಶ್ವಿನ್

2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ನಾಯಕತ್ವ ವಹಿಸುವ ಅರ್ಹತೆ ಹೊಂದಿರುವ ಆಟಗಾರರಲ್ಲಿ ಆರ್ ಅಶ್ವಿನ್ ಕೂಡ ಒಬ್ಬರು. ಅಶ್ವಿನ್ ಏಕದಿನ ತಂಡದ ಭಾಗವಲ್ಲದ ಕಾರಣ ವಿಶ್ವಕಪ್‌ನ ಸಿದ್ದತೆಯಲ್ಲಿಲ್ಲ. ಹಾಗಾಗಿ ಟೀಮ್ ಇಂಡಿಯಾ ಮುನ್ನಡೆಸುವ ಸಂಭಾವ್ಯ ಅಭ್ಯರ್ಥಿಯಾಗುವ ಅವಕಾಶವಿದೆ. ಅನುಭವಿ ಸ್ಪಿನ್ನರ್ ಆಗಿರುವ ಅಶ್ವಿನ್ ಅದ್ಭುತವಾದ ಕ್ರಿಕೆಟಿಂಗ್ ಬ್ರೈನ್ ಹೊಂದಿರುವ ಆಟಗಾರ ಎಂದು ಪರಿಗಣಿಸಲಾಗಿದೆ. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಯಕತ್ವದ ಜವಾಬ್ಧಾರಿ ದೊರೆತದರೆ ಅದನ್ನು ಯಶಸ್ವಿಯಾಗಿ ನಿರ್ವಹಿಸುವ ಚಾಕಚಕ್ಯತೆ ಅಶ್ವಿನ್‌ಗೆ ಖಂಡಿಯಾ ಇದೆ.

ಸಂಜು ಸ್ಯಾಮ್ಸನ್

ಸಂಜು ಸ್ಯಾಮ್ಸನ್ ಐಪಿಎಲ್‌ನಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿರುವ ಉತ್ತಮ ಅನುಭವ ಹೊಂದಿದ್ದಾರೆ. ವಿಶ್ವಕಪ್‌ನ ಯೋಜನೆಯ ಭಾಗವಾಗಿಲ್ಲದಿದ್ದರೆ ಸಂಜು ಸ್ಯಾಮ್ಸನ್‌ಗೆ ಈ ಏಷ್ಯನ್ ಗೇಮ್ಸ್‌ನಲ್ಲಿ ತಂಡವನ್ನು ಮುನ್ನಡೆಸುವ ಉತ್ತಮ ಆಯ್ಕೆಯಲ್ಲಿ ಒಬ್ಬರಾಗಬಹುದು. ಈ ಸಂದರ್ಭದಲ್ಲಿ ಸಂಜು ಅವರಂತಾ ಆಟಗಾರ ಒತ್ತಡದ ಸಂದರ್ಭದಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಅರಿತುಕೊಳ್ಳಲು ಕೂಡ ಅವಕಾಶ ದೊರೆತಂತಾಗಿದೆ.

Story first published: Sunday, July 2, 2023, 12:31 [IST]
Other articles published on Jul 2, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+