IPL 2022: ಐಪಿಎಲ್ ಇತಿಹಾಸದಲ್ಲಿ ಈ ತಂಡಗಳ ಆಟಗಾರರು ಯಾರೂ ಸಹ ಆರೆಂಜ್ ಕ್ಯಾಪ್ ಗೆದ್ದೇ ಇಲ್ಲ!

ಕಳೆದ ಭಾನುವಾರ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟನ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ತಂಡಗಳ ನಡುವಿನ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಅಧಿಕೃತವಾಗಿ ತೆರೆ ಬಿತ್ತು.
ಇನ್ನು ಈ ಬಾರಿಯ ಟೂರ್ನಿಯಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ರಾಜಸ್ಥಾನ್ ರಾಯಲ್ಸ್ ತಂಡದ ಪರ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಆಟಗಾರ ಜೋಸ್ ಬಟ್ಲರ್ ಆರೆಂಜ್ ಕ್ಯಾಪ್ ವಿಜೇತರಾಗಿ ಹೊರಹೊಮ್ಮಿದರು. ಟೂರ್ನಿಯಲ್ಲಿ ಒಟ್ಟು 17 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಜೋಸ್ ಬಟ್ಲರ್ 4 ಶತಕಗಳ ಸಹಿತ 863 ರನ್ ಕಲೆಹಾಕಿ ಆರೆಂಜ್ ಕ್ಯಾಪ್ ವಿಜೇತನಾದರೆ, ಇದೇ ತಂಡದ ಯುಜುವೇಂದ್ರ ಚಾಹಲ್ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಕಾರಣಕ್ಕಾಗಿ ಪರ್ಪಲ್ ಕ್ಯಾಪ್ ವಿಜೇತರಾಗಿ ಹೊರಹೊಮ್ಮಿದರು.
ಇನ್ನು ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ನೀಡಲಾಗುವ ಈ ಆರೆಂಜ್ ಕ್ಯಾಪ್ ಅನ್ನು ಬಹುತೇಕ ಎಲ್ಲಾ ತಂಡದ ಆಟಗಾರರು ಸಹ ಮುಡಿಗೇರಿಸಿಕೊಂಡಿದ್ದರೆ, ಈ ಕೆಳಕಂಡ 3 ತಂಡಗಳ ಆಟಗಾರರು ಮಾತ್ರ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಆ 3 ತಂಡಗಳ ವಿವರ ಮತ್ತು ಇಲ್ಲಿಯವರೆಗೂ ಆರೆಂಜ್ ಕ್ಯಾಪ್ ಗೆದ್ದಿರುವ ಆಟಗಾರರ ವಿವರ ಮುಂದೆ ಇದೆ ಓದಿ.

ಈ 3 ತಂಡಗಳ ಆಟಗಾರರು ಆರೆಂಜ್ ಕ್ಯಾಪ್ ಗೆದ್ದಿಲ್ಲ
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪದಾರ್ಪಣೆ ಮಾಡಿದ ಗುಜರಾತ್ ಟೈಟನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರರು ಆರೆಂಜ್ ಕ್ಯಾಪ್ ಗೆಲ್ಲುವಲ್ಲಿ ವಿಫಲರಾದರು. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನ ಯಾವುದೇ ಆವೃತ್ತಿಯಲ್ಲಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯಾವುದೇ ಆಟಗಾರರೂ ಆರೆಂಜ್ ಕ್ಯಾಪ್ ಗೆಲ್ಲುವಲ್ಲಿ ಸಫಲರಾಗಿಲ್ಲ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರರು ಇನ್ನೂ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಳ್ಳುವುದು ಬಾಕಿಯಿದೆ. ಇನ್ನು ಈ ವರ್ಷ ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ ಆರೆಂಜ್ ಕ್ಯಾಪ್ ಗೆಲ್ಲದೇ ಇದ್ದಿದ್ದರೆ ಈ ತಂಡವೂ ಸಹ ಈ ಪಟ್ಟಿಯಲ್ಲಿರುತ್ತಿತ್ತು.

ಇಲ್ಲಿಯವರೆಗೂ ಆರೆಂಜ್ ಕ್ಯಾಪ್ ಗೆದ್ದಿರುವ ಆಟಗಾರರ ಪಟ್ಟಿ
2008 - ಶಾನ್ ಮಾರ್ಷ್ - ಕಿಂಗ್ಸ್ ಇಲೆವೆನ್ ಪಂಜಾಬ್
2009 - ಮ್ಯಾಥ್ಯೂ ಹೇಡನ್ - ಚೆನ್ನೈ ಸೂಪರ್ ಕಿಂಗ್ಸ್
2010 - ಸಚಿನ್ ತೆಂಡೂಲ್ಕರ್ - ಮುಂಬೈ ಇಂಡಿಯನ್ಸ್
2011 - ಕ್ರಿಸ್ ಗೇಲ್ - ರಾಯಲ್ ಚಾಲೆಂಜರ್ಸ್ ಬೆಂಗಳೂರು
2012 - ಕ್ರಿಸ್ ಗೇಲ್ - ರಾಯಲ್ ಚಾಲೆಂಜರ್ಸ್ ಬೆಂಗಳೂರು
2013 - ಮೈಕೆಲ್ ಹಸ್ಸಿ - ಚೆನ್ನೈ ಸೂಪರ್ ಕಿಂಗ್ಸ್
2014 - ರಾಬಿನ್ ಉತ್ತಪ್ಪ - ಕೋಲ್ಕತ್ತ ನೈಟ್ ರೈಡರ್ಸ್
2015 - ಡೇವಿಡ್ ವಾರ್ನರ್ - ಸನ್ ರೈಸರ್ಸ್ ಹೈದರಾಬಾದ್
2016 - ವಿರಾಟ್ ಕೊಹ್ಲಿ - ರಾಯಲ್ ಚಾಲೆಂಜರ್ಸ್ ಬೆಂಗಳೂರು
2017 - ಡೇವಿಡ್ ವಾರ್ನರ್ - ಸನ್ ರೈಸರ್ಸ್ ಹೈದರಾಬಾದ್
2018 - ಕೇನ್ ವಿಲಿಯಮ್ಸನ್ - ಸನ್ ರೈಸರ್ಸ್ ಹೈದರಾಬಾದ್
2019 - ಡೇವಿಡ್ ವಾರ್ನರ್ - ಸನ್ ರೈಸರ್ಸ್ ಹೈದರಾಬಾದ್
2020 - ಕೆಎಲ್ ರಾಹುಲ್ - ಪಂಜಾಬ್ ಕಿಂಗ್ಸ್
2021 - ರುತುರಾಜ್ ಗಾಯಕ್ವಾಡ್ - ಚೆನ್ನೈ ಸೂಪರ್ ಕಿಂಗ್ಸ್
2022 - ಜೋಸ್ ಬಟ್ಲರ್ ರಾಜಸ್ಥಾನ್ ರಾಯಲ್ಸ್

ಆರೆಂಜ್ ಕ್ಯಾಪ್ ಆಟಗಾರರಲ್ಲಿ ಕೊಹ್ಲಿಯೇ ಟಾಪ್!
ಇಲ್ಲಿಯವರೆಗೂ ನಡೆದಿರುವ ಐಪಿಎಲ್ ಆವೃತ್ತಿಗಳಲ್ಲಿ ಹಲವಾರು ಆರೆಂಜ್ ಕ್ಯಾಪ್ ವಿಜೇತರು ಹೊರಹೊಮ್ಮಿರಬಹುದು. ಆದರೆ ಈ ಎಲ್ಲಾ ಆಟಗಾರರಿಗಿಂತಲೂ ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡ ಕೀರ್ತಿ ವಿರಾಟ್ ಕೊಹ್ಲಿಗೆ ಸಲ್ಲಿದೆ. 2016ರ ಐಪಿಎಲ್ ಆವೃತ್ತಿಯಲ್ಲಿ 16 ಪಂದ್ಯಗಳನ್ನಾಡಿ 973 ರನ್ ಕಲೆ ಹಾಕಿದ್ದ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ವಿಜೇತರಾಗಿದ್ದರು. ವಿರಾಟ್ ಕೊಹ್ಲಿ ಕಲೆಹಾಕಿದ ಈ ಮೊತ್ತದಷ್ಟು ಇತರೆ ತಂಡದ ಯಾವುದೇ ಆಟಗಾರ ಕೂಡ ರನ್ ಕಲೆ ಹಾಕಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications