For Quick Alerts
ALLOW NOTIFICATIONS  
For Daily Alerts
 

ಈ ಮೂವರು ಶ್ರೇಷ್ಠ ಕ್ರಿಕೆಟಿಗರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿ ಅನುಭವಿಸಿದ್ದು ಮಹಾ ಮುಖಭಂಗ!

These 3 great cricketers are failed badly as Delhi Capitals skipper

ಡೆಲ್ಲಿ ಕ್ಯಾಪಿಟಲ್ಸ್ ತಂಡ 2023ನೇ ಸಾಲಿನ ಐಪಿಎಲ್ ಟೂರ್ನಿಗೆ ಡೇವಿಡ್ ವಾರ್ನರ್ ಅವರನ್ನು ನಾಯಕನನ್ನಾಗಿ ನೇಮಿಸಿಸಿದೆ. ಖಾಯಂ ನಾಯಕ ರಿಷಭ್ ಪಂತ್ ಅಪಘಾತದಿಂದಗಾಯಗೊಂಡಿರುವ ಕಾರಣ ಈ ಆವೃತ್ತಿಯಿಂದ ಹೊರಗುಳಿಯುತ್ತಿದ್ದು ವಾರ್ನರ್‌ಗೆ ತಂಡವನ್ನು ಮುನ್ನಡೆಸುವ ಹೊಣೆಗಾರಿಗೆ ದೊರೆತಿದೆ. ಐಪಿಎಲ್‌ನಲ್ಲಿ ಅದ್ಭುತ ದಾಖಲೆ ಹೊಂದಿರುವ ಡೇವಿಡ್ ವಾರ್ನರ್‌ಗೆ ಡೆಲ್ಲಿ ತಂಡದ ನಾಯಕತ್ವ ಹೊಸ ಜವಾಬ್ಧಾರಿಯಾಗಿದ್ದರೂ ತಂಡವನ್ನು ಮುನ್ನಡೆಸುವ ಜವಾಬ್ಧಾರಿ ಹೊಸತಲ್ಲ.

ಡೇವಿಡ್ ವಾರ್ನರ್ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಬಹುಕಾಲ ಮುನ್ನಡೆಸಿದ ಅನುಭವ ಹೊಂದಿದ್ದು 2016ರಲ್ಲಿ ತಂಡವನ್ನು ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟಕ್ಕೂ ಏರಿಸಿದ್ದರು. ಅಲ್ಲದೆ ವೈಯಕ್ತಿಕವಾಗಿ ವಾರ್ನರ್ ಐಪಿಎಲ್‌ನಲ್ಲಿ ಶ್ರೇಷ್ಠ ದಾಖಲೆಗಳನ್ನು ಹೊಂದಿದ್ದಾರೆ ಎಂಬುದು ಗಮನಾರ್ಹ ಅಂಶ.

ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್‌ನಲ್ಲಿ ಈವರೆಗೆ ಒಂದು ಬಾರಿ ಕೂಡ ಚಾಂಪಿಯನ್ ಪಟ್ಟಕ್ಕೇರದ ತಂಡಗಳ ಪೈಕಿ ಒಂದಾಗಿದೆ. ಈ ಹಿಂದೆ ಡೆಲ್ಲಿ ಡೇರ್‌ಡೆವಿಲ್ಸ್ ಎಂದು ಹೆಸರು ಹೊಂದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅನೇಕ ದಿಗ್ಗಜ, ಸ್ಟಾರ್ ಆಟಗಾರರ ಪಡೆಯನ್ನು ಕಂಡಿದೆ. ಆದರೆ ಹೆಚ್ಚಿನ ಯಶಸ್ಸು ಅದರಿಂದ ಸಾಧ್ಯವಾಗಿಲ್ಲ. ಅದರಲ್ಲೂ ಕೆಲ ವಿಶ್ವ ಕ್ರಿಕೆಟ್‌ನ ಸ್ಟಾರ್ ಎನಿಸಿಕೊಂಡ ದಿಗ್ಗಜ ಆಟಗಾರರು ಡೆಲ್ಲಿ ತಂಡವನ್ನು ಮುನ್ನಡೆಸಿ ಕೈಸುಟ್ಟುಕೊಂಡಿದ್ದಾರೆ. ಶ್ರೇಷ್ಠ ಆಟಗಾರರಾಗಿದ್ದರೂ ಡೆಲ್ಲಿ ನಾಯಕರಾಗಿ ಮಹಾ ಮುಖಭಂಗ ಅನುಭವಿಸಿದ ಮೂವರು ಆಟಗಾರರ ಮಾಹಿತಿ ಇಲ್ಲಿದೆ.

ಕೆವಿನ್ ಪೀಟರ್ಸನ್: 11 ಪಂದ್ಯಗಳಲ್ಲಿ ಗೆದ್ದಿದ್ದು 1 ಮಾತ್ರ!

ಕೆವಿನ್ ಪೀಟರ್ಸನ್: 11 ಪಂದ್ಯಗಳಲ್ಲಿ ಗೆದ್ದಿದ್ದು 1 ಮಾತ್ರ!

ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ 2014ರಲ್ಲಿ ಡೆಲ್ಲಿ ಫ್ರಾಂಚೈಸಿಯ ನಾಯಕನಾಗಿ ಆಯ್ಕೆಯಾದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕನಾಗಿ ಸುದೀರ್ಘ ಅನುಭವ ಹೊಂದಿರುವ ಪೀಟರ್ಸನ್ ಡೆಲ್ಲಿ ತಂಡದ ನಾಯಕನಾಗಿ ಅಂಪೂರ್ಣ ವೈಫಲ್ಯತೆ ಅನುಭವಿಸಿದರು. 11 ಪಂದ್ಯಗಳಲ್ಲಿ ಡೆಲ್ಲಿ ತಂಡದ ನಾಯಕನಾಗಿ ಮುನ್ನಡೆಸಿದ ಪೀಟರ್ಸನ್ ನಾಯಕನಾಗಿ ಕೇವಲ ಒಂದು ಗೆಲುವು ಕಂಡಿದ್ದು 10 ಸೋಲು ಅನುಭವಿಸಿದ್ದಾರೆ.

Ind vs Aus: ತವರಿಗೆ ಮರಳಿದ ಆಸಿಸ್ ನಾಯಕ ಪ್ಯಾಟ್ ಕಮ್ಮಿನ್ಸ್‌ಗೆ ಬಿಸಿಸಿಐನಿಂದ ಸಂದೇಶ

ಜೇಮ್ಸ್ ಹೋಪ್ಸ್: ಗೆಲುವೇ ಕಾಣದ ನಾಯಕ

ಜೇಮ್ಸ್ ಹೋಪ್ಸ್: ಗೆಲುವೇ ಕಾಣದ ನಾಯಕ

ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಜೇಮ್ಸ್ ಜೋಪ್ಸ್ 2011ರ ಆವೃತ್ತಿಯ ಅಂತಿಮ ಹಂತದಲ್ಲಿ ತಂಡದ ನಾಯಕನಾಗಿ ನೇಮಕಗೊಂಡರು. ಮೊದಲ 11 ಪಂದ್ಯಗಳಲ್ಲಿ ಸೆಹ್ವಾಗ್ ನಾಯಕನಾಗಿ ತಂಡವನ್ನು ಮುನ್ನಡೆಸಿದ ಬಳಿಕ ಗಾಯಗೊಂಡು ಆವೃತ್ತಿಯಿಂದ ಹೊರಗುಳಿಯಬೇಕಾಯಿತು. ಹಾಗಾಗಿ ಆಸಿಸ್ ಆಲ್‌ರೌಂಡರ್‌ಗೆ ನಾಯಕತ್ವದ ಹೊಣೆಗಾರಿಕೆ ದೊರೆಯಿತು. ಆದರೆ ಟೂರ್ನಿಯ ಅಂತಿಮ ಮೂರು ಪಂದ್ಯದಲ್ಲಿ ಒಂದರಲ್ಲಿಯೂ ಡೆಲ್ಲಿ ತಂಡ ಗೆಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ಗೆಲುವೇ ಕಾಣದ ನಾಯಕನಾಗಿ ಉಳಿದುಕೊಂಡರು ಜೇಮ್ಸ್ ಹೋಪ್ಸ್.

Ind vs Aus: 3ನೇ ಟೆಸ್ಟ್ ಪಂದ್ಯಕ್ಕೆ ಸಂಪೂರ್ಣ ಫಿಟ್ ಎಂದು ಘೋಷಿಸಿದ ಆಸಿಸ್ ಆಟಗಾರ

ಮಹೇಲ ಜಯವರ್ದನೆ: 16 ಪಂದ್ಯಗಳಲ್ಲಿ 4 ಗೆಲುವು

ಮಹೇಲ ಜಯವರ್ದನೆ: 16 ಪಂದ್ಯಗಳಲ್ಲಿ 4 ಗೆಲುವು

ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗ ಮಹೇಲ ಜಯವರ್ದನೆ ಅತ್ಯುತ್ತಮ ನಾಯಕರಲ್ಲಿ ಒಬ್ಬರು ಎನಿಸಿಕೊಂಡಿರುವ ಕ್ರಿಕೆಟಿಗ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾಗಿ ಮಹೇಲ ಜಯವರ್ದನೆ ಕೂಡ ಭಾರೀ ಮುಖಭಂಗ ಅನುಭವಿಸಿದ್ದಾರೆ. 2012ರಲ್ಲಿ ಡೆಲ್ಲಿ ತಂಡದ ಉಪನಾಯಕನನ್ನಾಗಿ ಜಯವರ್ದನೆ ನೇಮಕಗೊಂಡದ್ದರು. ಆ ಆವೃತ್ತಿಯಲ್ಲಿ ಒಂದೆರಡು ಪಂದ್ಯಗಳಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸಿದ್ದ ಜಯವರ್ದನೆ 2013ರಲ್ಲಿ ಡೆಲ್ಲಿ ತಂಡದ ಪೂರ್ಣ ಪ್ರಮಾಣದ ನಾಯಕನಾಗಿ ನೇಮಕಗೊಂಡರು. ಈ ಎರಡು ಆವೃತ್ತಿಗಳಲ್ಲಿ ಜಯವರ್ದನೆ ಒಟ್ಟಿ 16 ಪಂದ್ಯಗಳಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸಿದ್ದು ಕೇವಲ ನಾಲ್ಕು ಗೆಲುವು ಮಾತ್ರವೇ ನಾಯಕನಾಗಿ ಕಂಡಿದ್ದಾರೆ.

Story first published: Saturday, February 25, 2023, 13:14 [IST]
Other articles published on Feb 25, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+