ಟೆಸ್ಟ್‌ನಲ್ಲಿ ಭರ್ಜರಿ ಯಶಸ್ಸು ಸಾಧಿಸಿದ್ದ ಈ 3 ಕ್ರಿಕೆಟಿಗರು ಮತ್ತೆ ಭಾರತ ಟೆಸ್ಟ್ ತಂಡಕ್ಕೆ ಮರಳುವುದು ಅಸಾಧ್ಯ!

ಕ್ರಿಕೆಟ್ ಆಡುವ ಎಲ್ಲಾ ದೇಶಗಳಲ್ಲಿಯೂ ಕ್ರಿಕೆಟರ್‌ಗಳ ದೊಡ್ಡ ಕನಸು ತಮ್ಮ ರಾಷ್ಟ್ರದ ಪರವಾಗಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಆಡುಬೇಕು ಎನ್ನುವುದಾಗಿರುತ್ತದೆ. ಆಟಗಾರರಿಗೆ ನಿಜವಾದ ಅಗ್ನಿ ಪರೀಕ್ಷೆ ಎದುರಾಗುವುದು ಈ ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ. ಆದರೆ ಆ ಅವಕಾಶಗಳು ಕೆಲವರಿಗಷ್ಟೇ ದೊರೆಯುತ್ತದೆ.
ಹೀಗೆ ಕೆಲ ಕ್ರಿಕೆಟಿಗರು ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುವ ಅವಕಾಶ ದೊರೆತು ಆರಂಭದಲ್ಲಿ ಅದ್ಭುತ ಪ್ರದರ್ಶನ ನಿಡಿ ಮಿಂಚಿದ್ದಾರೆ. ಈ ಮೂಲಕ ಸಾಕಷ್ಟು ಭರವಸೆಯನ್ನು ಮೂಡಿಸುವಲ್ಲಿಯೂ ಯಶಸ್ವಿಯಾಗಿದ್ದರು. ಆದರೆ ನಂತರ ಆರಂಭದಲ್ಲಿ ನೀಡಿದ್ದ ಆ ಅದ್ಭುತ ಪ್ರದರ್ಶನ ಮುಂದುವರಿಸಿಕೊಂಡು ಹೋಗಲು ವಿಫಲವಾಗಿರುವ ಉದಾಹರಣೆಗಳು ಇದೆ. ಹೀಗಾಗಿ ಅಂಥಾ ಆಟಗಾರರು ಮತ್ತೆ ತಂಡಕ್ಕೆ ಮರಳುವುದು ಬಹಳ ಕಠಿಣ.
ಹೀಗೆ ಭಾರತೀಯ ಕ್ರಿಕೆಟ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಟೆಸ್ಟ್ ಮಾದರಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿರುವ ಕೆಲ ಆಟಗಾರರು ತಂಡದಿಂದ ಹೊರಬಿದ್ದಿದ್ದು ಮತ್ತೆ ಆ ಆಟಗಾರರು ತಂಡದಲ್ಲಿ ಸ್ಥಾನ ಪಡೆಯುವುದು ಅಸಾಧ್ಯ ಎಂಬಂಥಾ ಸ್ಥಿತಿಯಿದೆ. ಅಂಥಾ ಮೂವರು ಆಟಗಾರರ ಬಗೆಗಿನ ಮಾಹಿತಿ ಇಲ್ಲಿದೆ.

ಆರಂಭಿಕ ಆಟಗಾರ ಮುರಳಿ ವಿಜಯ್
ತಮಿಳುನಾಡು ಮೂಲದ ಮುರಳಿ ವಿಜಯ್ ಭಾರತ ಟೆಸ್ಟ್ ತಂಡದಲ್ಲಿ ಹಲವು ವರ್ಷಗಳ ಕಾಲ ಉತ್ತಮ ಪ್ರದರ್ಶನ ನಿಡುತ್ತಾ ತಂಡದ ಭಾಗವಾಗಿದ್ದರು. ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ ಬಳಿಕ 2018ರಲ್ಲಿ ಆಸ್ಟ್ರೇಲಿಯಾ ಪ್ರವಾಸ ತೆರಳುವವರೆಗೂ ಮುರಳಿ ವಿಜಯ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದರು. ಆದರೆ ಈ ಹಂತದಲ್ಲಿ ಮುರಳಿ ವಿಜಯ್ ಬ್ಯಾಟಿಂಗ್‌ನಲ್ಲಿ ಸತತವಾಗಿ ವೈಫಲ್ಯವನ್ನು ಅನುಭವಿಸತೊಡಗಿದ್ದರು. ಬಳಿಕ ತಂಡದಿಂದ ಹೊರಬಿದ್ದರು ಮುರಳಿ ವಿಜಯ್.

ನಿವೃತ್ತಿ ಘೋಷಿಸಿಲ್ಲ ಮುರಳಿ
61 ಟೆಸ್ಟ್ ಪಂದ್ಯಗಳನ್ನು ಆಡಿರುವ ಮುರಳಿ ವಿಜಯ್ 12 ಶತಕಗಳನ್ನು ಬಾರಿಸಿದ್ದಾರೆ. 4000ರದ ಸನಿಹ ರನ್‌ಗಳಿಸಿದ್ದಾರೆ ತಮಿಳುನಾಡಿದ ಈ ಆಟಗಾರ. ತಂಡದಿಂದ ಹೊರಬಿದ್ದ ಬಳಿಕ ಮುರಳಿ ವಿಜಯ್ ಸ್ಥಾನದಲ್ಲಿ ಇತರ ಯುವ ಆಟಗಾರರು ಸ್ಥಾನ ಪಡೆಯಲು ಆರಂಭಿಸಿದರು. ಅಲ್ಲಿಗೆ ಭಾರತ ತಂಡಕ್ಕೆ ಮರಳುವ ಅವಕಾಶ ಬಹುತೇಕ ಅಂತ್ಯವಾಯಿತು. 37ರ ಹರೆಯದ ಮುರಳಿ ವಿಜಯ್ ಇನ್ನೂ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿಲ್ಲ. ಆದರೆ ಅವರು ಮತ್ತೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿಲ್ಲ.

ಕನ್ನಡಿಗ ಕರುಣ್ ನಾಯರ್
ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದುಕೊಂಡ ಕರುಣ್ ನಾಯರ್ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ಸಿಡಿಸಿ ಮಿಂಚಿದ್ದರು. ಈ ಪ್ರದರ್ಶನದಿಂದಾಗಿ ಕರುಣ್ ನಾಯರ್ ಭಾರತ ಟೆಸ್ಟ್ ತಂಡದಲ್ಲಿ ಸುದೀರ್ಘ ಕಾಲ ಮುಂದುವರಿಯಬಹುದು ಎಂಬ ವಿಶ್ವಾಸ ಮೂಡಿಸಿತ್ತು. ಆದರೆ ಆ ನಿರೀಕ್ಷೆ ಸುಳ್ಳಾಯಿತು. ಕನ್ನಡಿಗ ಕರುಣ್ ನಾಯರ್ ಅವರ ಅಂತಾರಾಷ್ಟ್ರೀಯ ಟೆಸ್ಟ್ ವೃತ್ತಿ ಬದುಕು ಕೇವಲ ಟೆಸ್ಟ್ ಪಂದ್ಯಗಳಿಗೆ ಮಾತ್ರವೇ ಸೀಮಿತವಾಯಿತು. ಈ ಆರು ಪಂದ್ಯಗಳಲ್ಲಿ ಕರಿಣ್ ನಾಯರ್ ಒಟ್ಟು 374 ರನ್‌ಗಳಸಿದ್ದು ಇದರಲ್ಲಿ ಇಂಗ್ಲೆಂಡ್ ವಿರುದ್ಧ ಗಳಿಸಿದ 303 ರನ್ ಹೈಯೆಸ್ಟ್ ಸ್ಕೋರ್ ಎನಿಸಿದೆ. ಕರುಣ್ ನಾಯರ್‌ಗೆ ಈಗಿನ್ನೂ 30 ವರ್ಷವಾಗಿದ್ದರೂ ಮತ್ತೆ ಭಾರತೀಯ ತಂಡಕ್ಕೆ ಮರಳುವ ಅವಕಾಶ ಬಹುತೇಕ ಅಂತ್ಯವಾದಂತಿದೆ.

ಆರಂಭಿಕ ಆಟಗಾರ ಶಿಖರ್ ಧವನ್
ಶಿಖರ್ ಧವನ್ ಟೆಸ್ಟ್ ಕ್ರಿಕೆಟ್‌ಗೆ ಮೊದಲ ಪಂದ್ಯದಲ್ಲಿಯೇ ಭರ್ಜರಿ ಶತಕ ಸಿಡಿಸುವ ಮೂಲಕ ಪದಾರ್ಪಣೆ ಮಾಡಿದ್ದರು. ಕೆಲ ಕಾಲ ಭಾರತದ ಟೆಸ್ಟ್ ತಂಡದಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದು ಉತ್ತಮ ಪ್ರದರ್ಶನ ನೀಡಿದ್ದರು. ಆದರೆ 2018ರ ಇಂಗ್ಲೆಂಡ್ ಪ್ರವಾಸದಲ್ಲಿ ಶಿಖರ್ ಧವನ್ ಫಾರ್ಮ್ ವೈಫಲ್ಯ ಅನುಭವಿಸಿದರು. 34 ಟೆಸ್ಟ್ ಪಂದ್ಯಗಳನ್ನು ಆಡಿರುವ ಧವನ್ ಟೆಸ್ಟ್‌ನಲ್ಲಿ 7 ಶತಕಗಳನ್ನು ಸಿಡಿಸಿದ್ದು 2315 ರನ್‌ಗಳನ್ನು ಗಳಿಸಿದ್ದಾರೆ. ಧವನ್‌ಗೆ ಸದ್ಯ 36 ವರ್ಷ ವಯಸ್ಸಾಗಿದ್ದು ಪ್ರಸ್ತುತ ಏಕದಿನ ಮಾದರಿಯಲ್ಲಿ ಮಾತ್ರವೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಟೆಸ್ಟ್ ತಂಡದಲ್ಲಿ ಧವನ್‌ಗೆ ಮುಂದೆ ಸ್ಥಾನ ದೊರೆಎಯುವ ಸಾಧ್ಯತೆಯೂ ಇಲ್ಲ. ಯುವ ಆಟಗಾರರು ಸಾಕಷ್ಟು ಪ್ರಮಾಣದಲ್ಲಿದ್ದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಹೀಗಾಗಿ ಶಿಖರ್ ಧವನ್ ಭಾರತ ಟೆಸ್ಟ್ ತಂಡದಲ್ಲಿ ಮತ್ತೆ ಸ್ಥಾನ ಪಡೆದುಕೊಳ್ಳುವುದು ಅಸಾಧ್ಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications