T20 World Cup 2022: ಸೂಪರ್ 12 ಸುತ್ತಿಗೆ ಅರ್ಹತೆ ಪಡೆಯಬಹುದಾದ 4 ತಂಡಗಳಿವು
ಟಿ20 ವಿಶ್ವಕಪ್ 2022ರ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಪ್ರತಿಷ್ಠಿತ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸುತ್ತಿವೆ. ಅಗ್ರ ಎಂಟು ತಂಡಗಳು ನೇರವಾಗಿ ಸೂಪರ್ 12 ಹಂತಕ್ಕೆ ಪ್ರವೇಶ ಪಡೆದಿವೆ.
ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಅಫ್ಘಾನಿಸ್ತಾನ (ಗುಂಪು 1 ರಲ್ಲಿ), ಬಾಂಗ್ಲಾದೇಶ, ಭಾರತ, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ (ಗುಂಪು 2 ರಲ್ಲಿ) ಸೂಪರ್ 12 ಹಂತಕ್ಕೆ ನೇರ ಟಿಕೆಟ್ ಪಡೆದ ಎಂಟು ರಾಷ್ಟ್ರಗಳು.
ಉಳಿದ ಎಂಟು ತಂಡಗಳಲ್ಲಿ 4 ತಂಡಗಳು ಮಾತ್ರ ಸೂಪರ್ 12 ಹಂತಕ್ಕೆ ಪ್ರವೇಶಿಸಲು ಅವಕಾಶ ಇರುತ್ತದೆ. ಆ ನಾಲ್ಕು ಸ್ಥಾನಗಳಿಗಾಗಿ, ಎಂಟು ತಂಡಗಳಾದ ಶ್ರೀಲಂಕಾ, ನಮೀಬಿಯಾ, ಯುಎಇ, ನೆದರ್ಲ್ಯಾಂಡ್ಸ್, ಐರ್ಲೆಂಡ್, ಸ್ಕಾಟ್ಲೆಂಡ್, ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ಪರಸ್ಪರ ಅಕ್ಟೋಬರ್ 16 ರಿಂದ 21 ರವರೆಗೆ ಸೆಣಸಾಡಲಿವೆ.
ಆಯೋಜಕರು ಎಂಟು ತಂಡಗಳನ್ನು ತಲಾ ನಾಲ್ಕು ಗುಂಪುಗಳಾಗಿ ವಿಂಗಡಿಸಿದ್ದಾರೆ. ಇಲ್ಲಿ ಎರಡು ಗುಂಪುಗಳಿವೆ, ಎ ಗುಂಪಿನಲ್ಲಿ ಶ್ರೀಲಂಕಾ, ನಮೀಬಿಯಾ, ಯುಎಇ ಮತ್ತು ನೆದರ್ಲ್ಯಾಂಡ್ಸ್ ತಂಡಗಳಿವೆ. ಬಿ ಗುಂಪಿನಲ್ಲಿ ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ಜಿಂಬಾಬ್ವೆ ಮತ್ತು ಐರ್ಲೆಂಡ್ ತಂಡಗಳು ಸೆಣೆಸಲಿವೆ.
ಎ ಗುಂಪಿನಲ್ಲಿ ಮೊದಲನೇ ಸ್ಥಾನ ಪಡೆಯುವ ತಂಡ ಮತ್ತು ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡಗಳು ಸೂಪರ್ 12 ಸುತ್ತಿನ 1ನೇ ಗುಂಪಿನಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನವನ್ನು ಸೇರಿಕೊಳ್ಳುತ್ತದೆ.
ಎ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡ ಮತ್ತು ಬಿ ಗುಂಪಿನಲ್ಲಿ ಮೊದಲನೇ ಸ್ಥಾನ ಪಡೆಯುವ ತಂಡಗಳು ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾವನ್ನು ಒಳಗೊಂಡ 2ನೇ ಗುಂಪಿನಲ್ಲಿ ಸ್ಥಾನ ಪಡೆಯಲಿವೆ. ಟಿ20 ವಿಶ್ವಕಪ್ 2022 ರ ಆರಂಭಿಕ ಸುತ್ತು ಪ್ರಾರಂಭವಾಗುವ ಮೊದಲು, ಸೂಪರ್ 12 ರ ಸುತ್ತಿಗೆ ಪ್ರವೇಶಿಸಬಹುದಾದ ನಾಲ್ಕು ತಂಡಗಳು ಇವು.

ಸುಲಭವಾಗಿ ಪ್ರವೇಶ ಪಡೆಯಲಿದೆ ಶ್ರೀಲಂಕಾ
ಶ್ರೀಲಂಕಾ T20 ವಿಶ್ವಕಪ್ 2022 ರಲ್ಲಿ ಎ ಗುಂಪಿನ ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಸಾಧ್ಯತೆಯಿದೆ. ಯುಎಇಯಲ್ಲಿ ನಡೆದ ಏಷ್ಯಾ ಕಪ್‌ನಲ್ಲಿ ಚಾಂಪಿಯನ್ ಆಗಿರುವ ಶ್ರೀಲಂಕಾ ತಂಡ ಸಾಕಷ್ಟು ಬಲಿಷ್ಠವಾಗಿದೆ.
ಇತ್ತೀಚೆಗೆ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಂತಹ ತಂಡಗಳ ವಿರುದ್ಧ ಜಯಗಳಿಸಿದ ಶ್ರೀಲಂಕಾ, ನಮೀಬಿಯಾ, ಯುಎಇ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧ ಗೆಲ್ಲುವ ನೆಚ್ಚಿನ ತಂಡವಾಗಲಿದೆ. ಶ್ರೀಲಂಕಾ ತಂಡ ಸೂಪರ್ 12 ಸುತ್ತಿನ ಗುಂಪು 1ಕ್ಕೆ ಮುನ್ನಡೆಯುವ ಸಾಧ್ಯತೆಯಿದೆ.
ಭಾರತಕ್ಕೆ ಮತ್ತೆ ಪಾಕ್‌ನ ಆ ವೇಗಿಯ ಆತಂಕ: ಗಂಭೀರ್ ನೀಡಿದ್ರು ಉಪಯುಕ್ತ ಸಲಹೆ

ಬಲಿಷ್ಠವಾಗಿದೆ ನಮೀಬಿಯಾ ತಂಡ
ಕಳೆದ ವರ್ಷ ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 12 ಸುತ್ತಿಗೆ ಅರ್ಹತೆ ಪಡೆಯುವ ಮೂಲಕ ನಮೀಬಿಯಾ ಕ್ರಿಕೆಟ್ ಜಗತ್ತನ್ನೇ ಅಚ್ಚರಿಗೊಳಿಸಿತ್ತು. ನಮೀಬಿಯಾ ಸೂಪರ್ 12 ಹಂತದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಗೆಲುವು ದಾಖಲಿಸಿತ್ತು.
ಡೇವಿಡ್ ವೈಸ್, ಜೆರಾಲ್ಡ್ ಎರಾಸ್ಮಸ್, ರುಬೆನ್ ಟ್ರಂಪೆಲ್‌ಮನ್ ಮತ್ತು ಜಾನ್ ಫ್ರಿಲಿಂಕ್ ಅವರಂತಹ ಆಟಗಾರರು ನಮೀಬಿಯಾ ತಂಡದಲ್ಲಿ ಉಪಸ್ಥಿತರಿದ್ದಾರೆ. ನಮೀಬಿಯಾ ಎ ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದು ಭಾರತ ತಂಡ ಇರುವ ಸೂಪರ್ 12 ಗುಂಪಿಗೆ ಮತ್ತೆ ಪ್ರವೇಶಿಸುವ ಸಾಧ್ಯತೆಯಿದೆ.

ಬಲಿಷ್ಠ ವೆಸ್ಟ್ ಇಂಡೀಸ್ ತಂಡ
ಎರಡು ಬಾರಿ ಚಾಂಪಿಯನ್ ಆಗಿರುವ ವೆಸ್ಟ್ ಇಂಡೀಸ್ ಈ ವರ್ಷ ಸೂಪರ್ 12 ಸುತ್ತಿಗೆ ನೇರ ಪ್ರವೇಶವನ್ನು ಕಳೆದುಕೊಂಡು ಆಘಾತ ಅನುಭವಿಸಿದೆ. ನಿಕೋಲಸ್ ಪೂರನ್ ನೇತೃತ್ವದ ವೆಸ್ಟ್ ಇಂಡೀಸ್, ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಜೊತೆಗೆ ಬಿ ಗುಂಪಿನಲ್ಲಿದೆ.
ಇತರ ಮೂರು ತಂಡಗಳು ಯೋಗ್ಯ ತಂಡವನ್ನು ಹೊಂದಿದ್ದರೂ, ಅವರು ಆಸ್ಟ್ರೇಲಿಯಾದ ಪರಿಸ್ಥಿತಿಗಳಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಸವಾಲಾಗುವ ಸಾಧ್ಯತೆ ಕಡಿಮೆ ಇದೆ. ವೆಸ್ಟ್ ಇಂಡೀಸ್ ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಸೂಪರ್ 12 ರಲ್ಲಿ ಭಾರತದ ಗುಂಪಿಗೆ ಪ್ರವೇಶಿಸುವ ಸಾಧ್ಯತೆ ಹೆಚ್ಚಾಗಿದೆ.

ಸೂಪರ್ 12 ಹಂತಕ್ಕೆ ಜಿಂಬಾಬ್ವೆ ಪ್ರವೇಶ
ಜಿಂಬಾಬ್ವೆ ಮತ್ತು ಐರ್ಲೆಂಡ್ ಈ ವರ್ಷ ಟಿ20 ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಎರಡು ತಂಡಗಳಾಗಿವೆ. ಬಿ ಗುಂಪಿನಲ್ಲಿರುವ ಜಿಂಬಾಬ್ವೆ ಮತ್ತೊಂದು ಬಲಿಷ್ಠ ತಂಡವಾಗಿದೆ. ಜಿಂಬಾಬ್ವೆ ತನ್ನ ಕೊನೆಯ ಎಂಟು ಟಿ20 ಪಂದ್ಯಗಳಲ್ಲಿ ಏಳು ಗೆಲುವು ದಾಖಲಿಸಿದೆ.
ಅವರು ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದರು. ಆವೇಗ ಮತ್ತು ಆತ್ಮವಿಶ್ವಾಸದೊಂದಿಗೆ ಜಿಂಬಾಬ್ವೆ ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ಸೂಪರ್ 12ರಲ್ಲಿ ಸ್ಥಾನ ಖಚಿತಪಡಿಸಿಕೊಳ್ಳುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications