
ಜಸ್ಟಿನ್ ಲ್ಯಾಂಗರ್
ಆಸ್ಟ್ರೇಲಿಯದ ಮಾಜಿ ಆಟಗಾರ ಹಾಗೂ ಪ್ರಸ್ತುತ ಮಾಜಿ ಕೋಚ್ ಜಸ್ಟಿನ್ ಲ್ಯಾಂಗರ್ ಈ ಪಟ್ಟಿಯಲ್ಲಿರುವ ದುರದೃಷ್ಟಕರ ಆಟಗಾರ. ಜಸ್ಟಿನ್ ಲ್ಯಾಂಗರ್ ಅವರು ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಅತ್ಯಂತ ನಿಷ್ಠೆಯ ಆಟಗಾರನಾಗಿದ್ದಾರೆ. . ಕ್ಲಾಸಿಕ್ ಇನ್ನಿಂಗ್ಸ್ ಆಡಿದ ಲ್ಯಾಂಗರ್ ಎಂಟು ಏಕದಿನ ಪಂದ್ಯಗಳಲ್ಲಿ 160 ರನ್ ಗಳಿಸಿದ್ದರು. ಆದ್ರೆ ಅವರು 105 ಟೆಸ್ಟ್‌ಗಳಿಂದ 45.3 ರ ಬ್ಯಾಟಿಂಗ್ ಸರಾಸರಿಯಲ್ಲಿ 7696 ರನ್ ಗಳಿಸಿದ್ದಾರೆ. ಇದರಲ್ಲಿ 23 ಶತಕಗಳು, ಮೂರು ದ್ವಿಶತಕಗಳು ಮತ್ತು 30 ಅರ್ಧ ಶತಕಗಳು ಸೇರಿವೆ.
ಇಷ್ಟು ದೊಡ್ಡ ದಾಖಲೆ ಹೊಂದಿದ್ದರೂ, ಏಕದಿನದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು , ಏಕದಿನ ವಿಶ್ವಕಪ್‌ನ ತಂಡದ ಭಾಗವಾಗಲು ಜಸ್ಟಿನ್ ಲ್ಯಾಂಗರ್‌ಗೆ ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಆಸ್ಟ್ರೇಲಿಯನ್ ತಂಡದಲ್ಲಿ ಪ್ರತಿಭೆಗಳ ರಾಶಿಯೇ ಇದ್ದ ಕಾರಣ ಲ್ಯಾಂಗರ್‌ಗೆ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಅವಕಾಶ ಸಿಗಲಿಲ್ಲ.

ವಿವಿಎಸ್ ಲಕ್ಷ್ಮಣ್
ವೆರಿ ವೆರಿ ಸ್ಪೆಷಲ್ ಬ್ಯಾಟ್ಸ್‌ಮನ್ ಖ್ಯಾತಿಯ ವಿವಿಎಸ್ ಲಕ್ಷ್ಮಣ್ ಭಾರತ ಕ್ರಿಕೆಟ್ ಕಂಡಂತಹ ಅತ್ಯಂತ ಕಲಾತ್ಮಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ತಮ್ಮ ಶಾಟ್‌ಗಳ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಲಕ್ಷ್ಮಣ್‌ಗೆ ಏಕದಿನ ವಿಶ್ವಕಪ್‌ನಲ್ಲಿ ಆಡುವ ಭಾಗ್ಯ ಸಿಕ್ಕಿಲ್ಲ. ಅವರು 134 ಟೆಸ್ಟ್‌ಗಳಲ್ಲಿ 45.5 ಸರಾಸರಿಯಲ್ಲಿ 8781 ರನ್ ಗಳಿಸಿದ್ದಾರೆ. ಇದರಲ್ಲಿ 17 ಶತಕಗಳು, ಎರಡು ಅರ್ಧ ಶತಕಗಳು ಮತ್ತು 56 ಅರ್ಧ ಶತಕಗಳು ಸೇರಿವೆ. ಅವರು 86 ಏಕದಿನ ಪಂದ್ಯಗಳಲ್ಲಿ 30.76ರ ಬ್ಯಾಟಿಂಗ್ ಸರಾಸರಿಯಲ್ಲಿ 2338 ರನ್ ಗಳಿಸಿದ್ದಾರೆ. ಇದರಲ್ಲಿ ಆರು ಶತಕಗಳು ಮತ್ತು 10 ಅರ್ಧ ಶತಕಗಳು ಸೇರಿವೆ. ಆದರೆ ಒಮ್ಮೆಯೂ ವಿಶ್ವಕಪ್‌ನಲ್ಲಿ ಆಡುವ ಭಾಗ್ಯ ಅವರಿಗಿರಲಿಲ್ಲ.

ಅಲೆಸ್ಟೈರ್ ಕುಕ್
ಇಂಗ್ಲೆಂಡ್ ಪರ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿರುವ ಆಟಗಾರರಲ್ಲಿ ಒಬ್ಬರಾದ ಅಲೆಸ್ಟೈರ್ ಕುಕ್ ಟೆಸ್ಟ್ ಕ್ರಿಕೆಟ್‌ನ ದಂತಕಥೆ. ಅವರು ಇಂಗ್ಲೆಂಡ್ ಪರ 161 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 45.35 ಸರಾಸರಿಯಲ್ಲಿ 12472 ರನ್ ಗಳಿಸಿದ್ದಾರೆ. ಕುಕ್ ಐದು ದ್ವಿಶತಕ ಮತ್ತು 57 ಅರ್ಧ ಶತಕ ಸೇರಿದಂತೆ 33 ಶತಕಗಳ ದಾಖಲೆ ಹೊಂದಿದ್ದಾರೆ.
ಸುದೀರ್ಘ ಕಾಲ ಟೆಸ್ಟ್ ನಾಯಕನಾಗಿ ಮಿಂಚಿದ ಕುಕ್ 92 ಏಕದಿನ ಪಂದ್ಯಗಳಲ್ಲಿ 36.41 ಬ್ಯಾಟಿಂಗ್ ಸರಾಸರಿಯಲ್ಲಿ 3204 ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ ಐದು ಶತಕಗಳಿವೆ. ಆದರೆ ಕುಕ್ ಇದುವರೆಗೆ ಏಕದಿನ ವಿಶ್ವಕಪ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ.

ಇಶಾಂತ್ ಶರ್ಮಾ
ಟೀಂ ಇಂಡಿಯಾ ಟೆಸ್ಟ್ ಸ್ಕ್ವಾಡ್‌ನಲ್ಲಿ ಇಶಾಂತ್ ಶರ್ಮಾ ಭಾರತ ತಂಡದ ನಿಷ್ಠಾವಂತ ಬೌಲರ್ ಆಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಅವರು ಟೆಸ್ಟ್ ತಂಡದ ಭಾಗವಾಗಿದ್ದಾರೆ. ಆದಾಗ್ಯೂ, ಹಲವಾರು ಯುವ ಮತ್ತು ಪ್ರತಿಭಾವಂತ ವೇಗಿಗಳ ಸ್ಪರ್ಧೆಯ ನಡುವೆ, ತಂಡದಲ್ಲಿ ಅವರ ಸ್ಥಾನವು ಪ್ರಶ್ನಾರ್ಹವಾಗಿದೆ. ಅಲ್ಲದೆ, ಅವರ ಪ್ರಸ್ತುತ ಫಾರ್ಮ್ ಕೂಡ ಉತ್ತಮವಾಗಿಲ್ಲ.
ಭಾರತದ ಪರ ಮೂರು ಫಾರ್ಮೆಟ್‌ನಲ್ಲಿ ಆಡಿರುವ ಇಶಾಂತ್ ಶರ್ಮಾಗೆ ಇಲ್ಲಿಯವರೆಗೂ ಏಕದಿನ ವಿಶ್ವಕಪ್ ನಲ್ಲಿ ಆಡುವ ಅದೃಷ್ಟ ಸಿಕ್ಕಿಲ್ಲ. ಅವರು 105 ಟೆಸ್ಟ್‌ಗಳಲ್ಲಿ 311 ವಿಕೆಟ್‌ಗಳನ್ನು ಪಡೆದಿದ್ದಾರೆ. 80 ಏಕದಿನ ಪಂದ್ಯಗಳಲ್ಲಿ 115 ವಿಕೆಟ್ ಪಡೆದಿದ್ದಾರೆ. 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಗೆಲ್ಲುವಲ್ಲಿ ಇಶಾಂತ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಇಶಾಂತ್ ಇನ್ನೂ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಆಡಲು ಸಾಧ್ಯವಾಗಿಲ್ಲ.


Click it and Unblock the Notifications












