Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೆಎಲ್ ರಾಹುಲ್‌, ಶುಭಮನ್‌ ಗಿಲ್ ಆಟ ಗುಣಗಾನ ಮಾಡಿದ ತಿಲಕರತ್ನೆ ದಿಲ್ಶಾನ್

ಅಂತಾರಾಷ್ಟ್ರೀಯ ಕ್ರಿಕೆಟ್‌ನ ಇತ್ತೀಚಿನ ವಿದ್ಯಮಾನ ಹಾಗೂ ಸವಾಲುಗಳ ಕುರಿತು ಶ್ರೀಲಂಕಾ ತಂಡದ ಮಾಜಿ ರನ್ ಮಷಿನ್ ಮತ್ತು ದಿಗ್ಗಜ ಕ್ರೀಡಾಪಟು ತಿಲಕರತ್ನೆ ದಿಲ್ಶಾನ್ ಅತ್ಯಂತ ಮಹತ್ವದ ಹಾಗೂ ಆಸಕ್ತಿದಾಯಕ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 'ಮೈಖೇಲ್' ಜೊತೆಗೆ ಮಾತನಾಡಿದ ಅವರು, ಪ್ರಸ್ತುತ ಆಧುನಿಕ ಕ್ರಿಕೆಟ್‌ನಲ್ಲಿ ಟಿ20 ಫಾರ್ಮೆಟ್‌ದಿಂದಾಗಿ ಸೃಷ್ಟಿಯಾಗಿರುವ ಭಾರಿ ಬದಲಾವಣೆಗಳ ಕೊಡುಗೆ ಹಾಗೂ ಸವಾಲುಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಟೀಮ್ ಇಂಡಿಯಾದ ಪ್ರತಿಭಾವಂತ ಆಟಗಾರರಾದ ಕೆಎಲ್ ರಾಹುಲ್ ಮತ್ತು ಶುಭಮನ್ ಗಿಲ್ ಅವರ ಬ್ಯಾಟಿಂಗ್‌ನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ.

ಹಿಂದೆ ಏಕದಿನ ಪಂದ್ಯಗಳಲ್ಲಿ 250 ರನ್ ದಾಟಿದರೆ ಸುಲಭವಾಗಿ ಗೆಲ್ಲಬಹುದು ಎಂಬ ವಿಶ್ವಾಸವಿತ್ತು. ಆದರೆ ಈಗ 300 ರನ್‌ ಬಾರಿಸಿದರೂ ಗೆಲ್ಲುವ ನಂಬಿಕೆ ಇಲ್ಲ. ಟಿ20 ಫಾರ್ಮೆಟ್‌ ಕ್ರಿಕೆಟ್‌ ಆಟ ಅಮೆರಿಕ ಹಾಗೂ ಕೆನಡಾದಲ್ಲಿ ವೇಗವಾಗಿ ಹಬ್ಬಲು ನೆರವಾಗಿದೆ.

Tillakaratne Dilshan

ಗಿಲ್ ಮತ್ತು ರಾಹುಲ್ ಯಶಸ್ಸಿನ ರಹಸ್ಯ

ಟೆಸ್ಟ್ ಮತ್ತು ಏಕದಿನ ಪಂದ್ಯಗಳು ಮಾತ್ರವೇ ಒಬ್ಬ ಆಟಗಾರನ ನೈಜ ಕ್ರಿಕೆಟ್ ಸಾಮರ್ಥ್ಯ ಹಾಗೂ ತಾಳ್ಮೆಯನ್ನು ಜಗತ್ತಿಗೆ ನಿರೂಪಿಸುತ್ತವೆ ಎಂದು ದಿಲ್ಶಾನ್ ತಿಳಿಸಿದ್ದಾರೆ. ಕೇವಲ ಒಂದು ನಿರ್ದಿಷ್ಟ ಮಾದರಿಗೆ ಸೀಮಿತಗೊಳ್ಳದೆ, ಇಂದಿನ ಮೂರೂ ಮಾದರಿಯಲ್ಲಿ ಏಕಕಾಲಕ್ಕೆ ಸತತವಾಗಿ ಯಶಸ್ಸು ಕಾಣುವುದು ಅಷ್ಟು ಸುಲಭವಲ್ಲ. ಆದರೆ ಶುಭಮನ್ ಗಿಲ್ ಮತ್ತು ಕೆಎಲ್ ರಾಹುಲ್ ಆಯಾ ಫಾರ್ಮೆಟ್‌ಗೆ ತಕ್ಕಂತೆ ತಮ್ಮ ಬ್ಯಾಟಿಂಗ್ ತಂತ್ರಗಾರಿಕೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಈ ಅನನ್ಯ ಕೌಶಲ್ಯವೇ ಇಬ್ಬರನ್ನೂ ಯಶಸ್ವಿ ಮೂರು ಮಾದರಿಯ ಆಟಗಾರರನ್ನಾಗಿ ರೂಪಿಸಿದೆ ಎಂದು ತಿಳಿಸಿದ್ದಾರೆ.

FIFA World Cup 2026: ಮೆಸ್ಸಿ, ರೊನಾಲ್ಡೊ, ನೇಮರ್‌, ಎಂಬಪ್ಪೆ ಮೈದಾನಕ್ಕೆ ಇಳಿಯುವುದು ಯಾವಾಗ?

FIFA World Cup 2026: ಮೆಸ್ಸಿ, ರೊನಾಲ್ಡೊ, ನೇಮರ್‌, ಎಂಬಪ್ಪೆ ಮೈದಾನಕ್ಕೆ ಇಳಿಯುವುದು ಯಾವಾಗ?

ವಿಶ್ವ ಕ್ರಿಕೆಟ್‌ನ ಇಂದಿನ ದಿನಗಳಲ್ಲಿ ಪ್ರತಿಯೊಂದು ದೇಶಗಳು ಆಯಾ ಮಾದರಿಗೆ ತಕ್ಕಂತೆ ಪ್ರತ್ಯೇಕ ತಂಡಗಳನ್ನು ಮತ್ತು ನಾಯಕರನ್ನು ಆಯ್ಕೆ ಮಾಡಲು ಆಟಗಾರರ ವಿಶೇಷ ಕೌಶಲ್ಯಗಳೇ ಮುಖ್ಯ ಕಾರಣ. ಗಿಲ್ ಹಾಗೂ ರಾಹುಲ್ ಅವರಂತಹ ಅಪರೂಪದ ಆಟಗಾರು ಯಾವುದೇ ಪರಿಸ್ಥಿತಿಗೆ ಒಗ್ಗಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಇವರಿಬ್ಬರು ಭಾರತ ತಂಡದ ಬ್ಯಾಟಿಂಗ್‌ಗೆ ಬಲ ತುಂಬಿದ್ದಾರೆ ಎಂದು ದಿಲ್ಶಾನ್ ಬಣ್ಣಿಸಿದ್ದಾರೆ.

ಟೆಸ್ಟ್ ಕ್ರಿಕೆಟ್ ಉಳಿವು ಮತ್ತು ಬೌಲರ್‌ಗಳ ಸವಾಲುಗಳು

ಮತ್ತೊಂದೆಡೆ ಪ್ರಸ್ತುತ ದಿನಗಳಲ್ಲಿ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್‌ನ ಅಸ್ತಿತ್ವದ ಬಗ್ಗೆ ದಿಲ್ಶಾನ್ ಆತಂಕ ವ್ಯಕ್ತಪಡಿಸಿದ್ದಾರೆ. ಜಗತ್ತಿನಾದ್ಯಂತ ಟಿ20 ಲೀಗ್‌ಗಳ ಹಾವಳಿಯಿಂದಾಗಿ ಪ್ರತಿಭಾವಂತ ಯುವ ಆಟಗಾರರು ಚಿಕ್ಕ ವಯಸ್ಸಿನಲ್ಲೇ ನಿವೃತ್ತಿ ಘೋಷಿಸುತ್ತಿರುವುದು ದುರದೃಷ್ಟಕರ ಸಂಗತಿ. ಪ್ರತಿಯೊಂದು ದೇಶದ ಕ್ರಿಕೆಟ್ ಮಂಡಳಿಗಳು ರೆಡ್ ಬಾಲ್ ಕ್ರಿಕೆಟ್ ಉಳಿಸಲು ಹೆಚ್ಚಿನ ಬಂಡವಾಳ ಹೂಡಬೇಕು ಎಂದು ಸಲಹೆ ನೀಡಿದ್ದಾರೆ.

IND vs AFG 1st ODI: ಗಿಲ್ ಭರ್ಜರಿ ಬ್ಯಾಟಿಂಗ್, ಪದಾರ್ಪಣಾ ಪಂದ್ಯದಲ್ಲಿ ಮಿಂಚಿದ ಯಂಗ್ ಸ್ಟರ್ಸ್‌

IND vs AFG 1st ODI: ಗಿಲ್ ಭರ್ಜರಿ ಬ್ಯಾಟಿಂಗ್, ಪದಾರ್ಪಣಾ ಪಂದ್ಯದಲ್ಲಿ ಮಿಂಚಿದ ಯಂಗ್ ಸ್ಟರ್ಸ್‌

ಬೌಲರ್‌ಗಳು ಕೇವಲ ಪರ್ಫೆಕ್ಟ್‌ ಲೈನ್, ಲೆಂತ್ ಮಾತ್ರ ನಂಬಿಕೊಂಡರೆ ಯಶಸ್ಸು ಸಿಗಲ್ಲ ಎಂದು ದಿಲ್ಶಾನ್ ಕಿವಿಮಾತು ಹೇಳಿದ್ದಾರೆ. ಮೈದಾನದಲ್ಲಿ ಎದುರಾಳಿ ಬ್ಯಾಟರ್‌ನ ಮೂವ್‌ಮೆಂಟ್ ಗಮನಿಸಿ ತಕ್ಷಣ ಪ್ರಾಯೋಗಿಕ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಚತುರ ಬೌಲರ್‌ಗಳು ಮಾತ್ರ ಇಂದು ಯಶಸ್ವಿಯಾಗುತ್ತಾರೆ. ಐಪಿಎಲ್‌ನಲ್ಲಿ ಇಂತಹ ಬೌಲರ್‌ಗಳನ್ನು ಕಂಡಿದ್ದಾಗಿ ದಿಲ್ಶಾನ್ ತಿಳಿಸಿದ್ದಾರೆ.

ಇದುವೇ ಭಾರತದ ಯಶಸ್ಸಿನ ರಹಸ್ಯ

ಟೀಮ್ ಇಂಡಿಯಾದ ಯಶಸ್ಸಿನ ಹಿಂದಿರುವ ಗುಟ್ಟನ್ನು ದಿಲ್ಶನ್ ತಿಳಿಸಿದ್ದಾರೆ. ಉತ್ತಮ ದೇಶೀಯ ಕ್ರಿಕೆಟ್ ವ್ಯವಸ್ಥೆಯೇ ಭಾರತ ಕ್ರಿಕೆಟ್‌ನ ಯಶಸ್ಸಿನ ರಹಸ್ಯ. ಇಲ್ಲಿನ ಆಟಗಾರರು ಬಿಡುವಿದ್ದಾಗ ದೇಶೀಯ ಟೂರ್ನಿಗಳಲ್ಲಿ ಆಡುತ್ತಾರೆ. ಇದರಿಂದಾಗಿ ಭಾರತ ನಿಯಮಿತವಾಗಿ ಉತ್ತಮ ಆಟಗಾರರನ್ನು ಸಿದ್ಧಪಡಿಸುತ್ತಿದೆ ಎಂದು ತಿಳಿಸಿದ್ದಾರೆ.

Tillakaratne Dilshan

ಸದ್ಯ ಭಾರತದಲ್ಲಿರುವ ಪ್ರತಿಭೆಗಳನ್ನು ನೋಡಿದರೆ, ಒಂದೇ ಸಮಯದಲ್ಲಿ ವಿಶ್ವಮಟ್ಟದಲ್ಲಿ ಬಲಿಷ್ಠ ಮೂರರಿಂದ ನಾಲ್ಕು ತಂಡಗಳನ್ನು ಕಟ್ಟ ಬಹುದು ಎಂದು ತಿಳಿಸಿದ್ದಾರೆ. ಶ್ರೀಲಂಕಾದಲ್ಲೂ ಅಪಾರ ಪ್ರತಿಭಾವಂತ ಕ್ರಿಕೆಟಿಗರಿದ್ದಾರೆ, ಆದರೆ ಅವರ ಕೌಶಲ್ಯವನ್ನು ಜಾಗತಿಕ ಮಟ್ಟದಲ್ಲಿ ತೋರಿಸಲು ಯೋಜನೆಗಳ ಕೊರತೆಯಿದೆ ಎಂದಿದ್ದಾರೆ.

ಲಂಕಾ ಕ್ರೀಡಾಲೋಕದ ಬಗ್ಗೆ ಕಳವಳ

ಶ್ರೀಲಂಕಾದಲ್ಲಿ ಕ್ರಿಕೆಟ್ ಹೊರತುಪಡಿಸಿ ಇತರ ಕ್ರೀಡೆಗಳಿಗೆ ಸಿಗುತ್ತಿರುವ ಆರ್ಥಿಕ ಬೆಂಬಲ ಕಡಿಮೆ ಇದೆ. ಜಾವೆಲಿನ್ ಎಸೆತದ ಪ್ರತಿಭೆ ರಮೇಶ್ ಪತಿರಾಗೆ ಅವರಂತಹ ಆಟಗಾರರಿಗೆ ಸರ್ಕಾರ ಮತ್ತು ಪ್ರಾಯೋಜಕರು ಆರ್ಥಿಕ ನೆರವು ನೀಡಬೇಕು. ಸೂಕ್ತ ವ್ಯವಸ್ಥೆ ಮತ್ತು ಮಾರ್ಗದರ್ಶನ ಸಿಕ್ಕರೆ ಒಲಿಂಪಿಕ್ಸ್‌ನಂತಹ ಜಾಗತಿಕ ವೇದಿಕೆಗಳಲ್ಲಿ ಶ್ರೀಲಂಕಾ ಮತ್ತಷ್ಟು ಸಾಧನೆ ಮಾಡಬಹುದು ಎಂದು ಮಾಜಿ ಕ್ರಿಕೆಟ್ ಆಟಗಾರ ದಿಲ್ಶನ್‌ ತಿಳಿಸಿದ್ದಾರೆ.

Story first published: Saturday, June 13, 2026, 23:36 [IST]
Other articles published on Jun 13, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+