Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವದ ಜನರಿಗೆ ಸ್ಫೂರ್ತಿದಾಯಕ ಸಂದೇಶ ಸಾರಿದ ಶೋಯೆಬ್ ಅಖ್ತರ್

Time To Be Human, Not Hindu, Muslim: Shoaib Akhtar On Coronavirus

ಕರಾಚಿ, ಮಾರ್ಚ್ 23: ಕೊರನಾವೈರಸ್ ಸೋಂಕಿಗೆ ಇಡೀ ವಿಶ್ವವೇ ಆತಂಕಕ್ಕೀಡಾಗಿದೆ. ವಿಶ್ವದಲ್ಲಿ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಇಂಥ ಸಮಯದಲ್ಲಿ ಜನರು ತಮ್ಮ ತಮ್ಮ ಧರ್ಮ, ಅಂತಸ್ತು ಬದಿಗಿಟ್ಟು ಒಬ್ಬರಿಗೊಬ್ಬರು ಸಹಾಯ ನೀಡಬೇಕು ಎಂದು ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಖ್ತರ್ ಹೇಳಿದ್ದಾರೆ.

ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಶೋಯೆಬ್ ಅಖ್ತರ್, ವಿಶ್ವದ ಜನರೆಲ್ಲ ಸೇರಿ ಒಂದು ಜಾಗತಿಕ ಶಕ್ತಿಯಾಗಿ ಕೊರೊನಾವೈರಸ್ ವಿರುದ್ಧ ಹೋರಾಡಬೇಕು. ವೈದ್ಯಾಧಿಕಾರಿಗಳು ನೀಡಿರುವ ಸೂಚನೆಗಳನ್ನು ಎಲ್ಲರೂ ತಪ್ಪದೆ ಪಾಲಿಸಬೇಕು ಎಂದು ಜನತ್ತಿನ ಎಲ್ಲಾ ಮಂದಿಯಲ್ಲಿ ವಿನಂತಿಸಿಕೊಂಡಿದ್ದಾರೆ.

'ವಿಶ್ವದಲ್ಲಿರುವ ನನ್ನೆಲ್ಲಾ ಅಭಿಮಾನಿಗಳೆ, ಕೊರೊನಾವೈರಸ್ ಒಂದು ಜಾಗತಿಕ ಬಿಕ್ಕಟ್ಟು. ಹೀಗಾಗಿ ನಾವೆಲ್ಲರೂ ಒಂದು ಜಾಗತಿಕ ಶಕ್ತಿಯಾಗಿ ಕೆಲಸ ಮಾಡಬೇಕು. ಇಂಥ ಸಮಯದಲ್ಲಿ ನಾವೆಲ್ಲರೂ ಮನುಷ್ಯರೇ ಹೊರತು; ಹಿಂದೂ, ಮುಸ್ಲಿಮ್ ಎಂದು ಪ್ರತ್ಯೇಕಿಸಿಕೊಳ್ಳುವುದು ಸಲ್ಲ,' ಎಂದು ರಾವಲ್ಪಿಂಡಿ ಎಕ್ಸ್‌ಪ್ರೆಸ್ ಅಖ್ತರ್ ಹೇಳಿದ್ದಾರೆ.

'ನೀವು ವಸ್ತುಗಳನ್ನು ಸಂಗ್ರಹಿಸುತ್ತಿದ್ದರೆ, ದಯವಿಟ್ಟು ದೈನಂದಿನ ಕೂಲಿ ಕಾರ್ಮಿಕರ ಬಗ್ಗೆ ಯೋಚಿಸಿ. ಮಳಿಗೆಗಳು ಖಾಲಿಯಾಗಿವೆ. ಮೂರು ತಿಂಗಳ ನಂತರ ನೀವು ಬದುಕುವಿರಿ ಎಂಬ ಭರವಸೆ ಏನು? ದೈನಂದಿನ ಕೂಲಿ ಕಾರ್ಮಿಕರ ಬಗ್ಗೆ ಯೋಚಿಸಿ, ಅವನು ತನ್ನ ಕುಟುಂಬವನ್ನು ಹೇಗೆ ಪೋಷಿಸುತ್ತಾನೆ? ಜನರ ಬಗ್ಗೆ ಯೋಚಿಸಿ, ಮನುಷ್ಯನಾಗಲು ಇದು ಸಮಯವೇ ಹೊರತು ಹಿಂದೂ ಆಗಿ ಅಲ್ಲ, ಮುಸ್ಲಿಂ ಆಗಿ ಅಲ್ಲ,' ಎಂದು ಶೋಯೆಬ್ ಜಗತ್ತಿಗೆ ಸೌಹಾರ್ದತೆ ಸಾರಿದ್ದಾರೆ.

Story first published: Monday, March 23, 2020, 12:19 [IST]
Other articles published on Mar 23, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+