IPLನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಸ್: ಟಾಪ್ 10ನಲ್ಲಿ 7 ಭಾರತೀಯ ಬೌಲರ್ಸ್

ಟಿ20 ಕ್ರಿಕೆಟ್ ಫಾರ್ಮೆಟ್ ಬಂದಾಗಿನಿಂದ ಬ್ಯಾಟ್ಸ್‌ಮನ್‌ಗಳು ಅದನ್ನು ಆಳುತ್ತಿದ್ದಾರೆ. ಅವರು ಆಟದಲ್ಲಿ ಎಷ್ಟೇ ಸಮರ್ಥರಾಗಿದ್ದರೂ ಬೌಲರ್‌ಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಾರೆ. ಈ ಟಿ20 ಕ್ರಿಕೆಟ್‌ನಲ್ಲಿ ಬೌಲರ್‌ಗಳು ಸಾಕಷ್ಟು ವೇರಿಯೇಷನ್‌ಗಳನ್ನು ಮಾಡಲೇ ಬೇಕಾಗುತ್ತದೆ. ಇದರಿಂದ ಅವರು ವಿಕೆಟ್ ಪಡೆಯಲು ಮತ್ತು ಬ್ಯಾಟಿಂಗ್ ತಂಡವನ್ನು ಹೆಚ್ಚು ಒತ್ತಡದಲ್ಲಿ ಇಡಲು ಸಹಾಯ ಮಾಡುತ್ತದೆ.
ವಿಶ್ವದ ಟಿ20 ಟೂರ್ನಿಯಲ್ಲಿ ಐಪಿಎಲ್, ಟಿ20 ಕಠಿಣ ಲೀಗ್ ಆಗಿದ್ದು, ಪ್ರತಿ ಸೀಸನ್‌ನಲ್ಲೂ ಕೆಲವು ಪ್ರಚಂಡ ಬೌಲರ್‌ಗಳಿಗೆ ಸಾಕ್ಷಿಯಾಗಿದೆ. ಬೌಲಿಂಗ್‌ನಲ್ಲಿ ಸ್ಥಿರತೆಯನ್ನು ಒಟ್ಟು ವಿಕೆಟ್‌ಗಳು ಮತ್ತು ಬೌಲರ್‌ನ ಆರ್ಥಿಕತೆಯಿಂದ ನಿರ್ಧರಿಸಬಹುದು.

ಲಸಿತ್ ಮಾಲಿಂಗ ನಂಬರ್ 1 ಬೌಲರ್
ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಲಸಿತ್ ಮಾಲಿಂಗ ಹೆಚ್ಚಿನ ಸಂಖ್ಯೆಯ ವಿಕೆಟ್ ಪಡೆದಿದ್ದಾರೆ. ಶ್ರೀಲಂಕಾದ ವೇಗಿ ಮುಂಬೈ ಇಂಡಿಯನ್ಸ್ ಪರ 2010 ರಿಂದ ಆಡಿದ್ದಾರೆ.
ಅವರು 7.2 ರ ಅದ್ಭುತ ಎಕಾನಮಿಯಲ್ಲಿ 122 ಪಂದ್ಯಗಳಲ್ಲಿ 170 ವಿಕೆಟ್ ಪಡೆದಿದ್ದಾರೆ.
ಎದುರಾಳಿಯನ್ನು ಕಾಡುತ್ತಿದೆ RCB ಸ್ಪಿನ್ ಜೋಡಿ: ಚಹಾಲ್ ಜೊತೆಗೆ ಬೌಲಿಂಗ್ ಮಾಡುವುದೇ ದೊಡ್ಡ ಸಂತೋಷ ಎಂದ ಸುಂದರ್

ಇಬ್ಬರು ಸ್ಪಿನ್ನರ್‌ಗಳಿಗೆ ಎರಡು ಮತ್ತು ಮೂರನೇ ಸ್ಥಾನ
ಮಾಲಿಂಗ ನಂತರ ಅಮಿತ್ ಮಿಶ್ರಾ ಮತ್ತು ಪಿಯೂಷ್ ಚಾವ್ಲಾ ಕ್ರಮವಾಗಿ 160 ಮತ್ತು 156 ವಿಕೆಟ್ ಪಡೆದಿದ್ದಾರೆ. ಅಮಿತ್ ಮಿಶ್ರಾ ಐಪಿಎಲ್‌ನಲ್ಲಿ ವಿವಿಧ ಫ್ರಾಂಚೈಸಿಗಳನ್ನು ಪ್ರತಿನಿಧಿಸಿದ್ದಾರೆ ಮತ್ತು ಪ್ರಸ್ತುತ ದೆಹಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದು, ಗಾಯಾಳುವಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಮಿಶ್ರಾ ನಂತರದಲ್ಲಿ ಪಿಯೂಷ್ ಚಾವ್ಲಾ ಇದ್ದು ಪ್ರಸ್ತುತ ಸಿಎಸ್‌ಕೆ ಪರ ಕಣಕ್ಕಿಳಿಯುತ್ತಿದ್ದಾರೆ.

ಅಗ್ರ 10 ರಲ್ಲಿ 7 ಭಾರತೀಯ ಆಟಗಾರರು
ಐಪಿಎಲ್‌ನಲ್ಲಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರ 10 ರಲ್ಲಿ 7 ಭಾರತೀಯ ಆಟಗಾರರಿದ್ದಾರೆ. ಸುನಿಲ್ ನರೈನ್, ಲಸಿತ್ ಮಾಲಿಂಗ ಮತ್ತು ಡ್ವೇನ್ ಬ್ರಾವೋ ಮಾತ್ರ ದಾಖಲೆ ಪಟ್ಟಿಯಲ್ಲಿ ಇರುವ ವಿದೇಶಿ ಆಟಗಾರರು ಆಗಿದ್ದಾರೆ. ಇನ್ನುಳಿದಂತೆ ಟಾಪ್ 10ನಲ್ಲಿ ಏಳು ಭಾರತೀಯ ಬೌಲರ್‌ಗಳಿದ್ದಾರೆ.
KKR ವಿರುದ್ಧ ಮೂರು ವರ್ಷದ ಹಳೆಯ ಸೇಡು ತೀರಿಸಿಕೊಂಡ RCB

ಟಾಪ್ 10ನಲ್ಲಿ ಯಾರೆಲ್ಲಾ ಇದ್ದಾರೆ, ಎಷ್ಟು ವಿಕೆಟ್?
1. ಲಸಿತ್ ಮಾಲಿಂಗ - 170 ವಿಕೆಟ್
2. ಅಮಿತ್ ಮಿಶ್ರಾ- 160 ವಿಕೆಟ್
3. ಪಿಯೂಷ್ ಚಾವ್ಲಾ- 156 ವಿಕೆಟ್
4. ಹರ್ಭಜನ್ ಸಿಂಗ್- 150 ವಿಕೆಟ್
5. ಡ್ವೇನ್ ಬ್ರಾವೋ- 150 ವಿಕೆಟ್
6. ಭುವನೇಶ್ವರ್ ಕುಮಾರ್- 136 ವಿಕೆಟ್
7. ರವಿಚಂದ್ರನ್ ಅಶ್ವಿನ್- 131 ವಿಕೆಟ್
8. ಸುನಿಲ್ ನರೈನ್- 127 ವಿಕೆಟ್
9. ಉಮೇಶ್ ಯಾದವ್- 119 ವಿಕೆಟ್
10. ರವೀಂದ್ರ ಜಡೇಜಾ- 111 ವಿಕೆಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications