For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ನಲ್ಲಿ ಹೆಚ್ಚು ರನ್ ಗಳಿಸಿದ ಟಾಪ್ 10 ಬ್ಯಾಟ್ಸ್ಮನ್ ಗಳಿವರು

Top 10 IPL Leading Run Scorrer Batsman (2008-2018) All Time

ನವದೆಹಲಿ, ಮೇ 22: 2018ರ ಐಪಿಎಲ್ 11ನೇ ಆವೃತ್ತಿಯ ಲೀಗ್ ಪಂದ್ಯಗಳು ಮುಗಿದಿವೆ. ಭಾನುವಾರದವರೆಗೂ ಪ್ಲೇ-ಆಫ್ ಗೆ ಅವಕಾಶ ಗಿಟ್ಟಿಸಿಕೊಳ್ಳುವುದಕ್ಕಾಗಿ ತೀವ್ರ ಸೆಣಸಾಟಗಳು ನಡೆದವು. ಅವುಗಳಲ್ಲಿ ಹೆಕ್ಕಿ ತೆಗೆದಂತೆ ನಾಲ್ಕು ತಂಡಗಳಷ್ಟೇ ಈಗ ಪ್ರಶಸ್ತಿ ಸುತ್ತಿನತ್ತ ಮುನ್ನುಗ್ಗಲು ಸಜ್ಜಾಗಿವೆ.

ಲೀಗ್ ಪಂದ್ಯಗಳವರೆಗೂ ಐಪಿಎಲ್ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದೆ. ಮುಂದೆಯೂ ಫೈನಲ್ ವರೆಗೆ ಐಪಿಎಲ್ ಸಂಭ್ರಮ ಇದ್ದೇಇದೆ. ಆದರೆ ಲೀಗ್ ಹಂತದ ಪಂದ್ಯಗಳಲ್ಲಿ ಬ್ಯಾಟಿಂಗ್ ವಿಭಾಗಗಳಲ್ಲಿ ಅನೇಕ ಪ್ರತಿಭಾನ್ವಿತ ಆಟಗಾರರು ಗಮನ ಸೆಳೆದಿದ್ದಾರೆ. ಬ್ಯಾಟಿಂಗ್ ಮೂಲಕ ಮಿಂಚಿದ ಸ್ಟಾರ್ ಆಟಗಾರರ ಪಟ್ಟಿ ಇಲ್ಲಿದೆ.

ಭಾನುವಾರದ ವರೆಗೆ ನಡೆದ ಐಪಿಎಲ್ ಹಣಾಹಣಿಯಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಡೆಲ್ಲಿ ಡೇರ್ ಡೆವಿಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಹೊರ ಬಿದ್ದಿವೆ. ಕ್ವಾಲಿಫೈಯರ್ ಪಂದ್ಯಗಳು ಮತ್ತು ಪ್ರಶಸ್ತಿ ಸುತ್ತಿನ ಪಂದ್ಯಗಳಿಗಾಗಿ ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಉಳಿದುಕೊಂಡಿವೆ.

ಲೀಗ್ ಹಂತದವರೆಗೆ ಮಿಂಚಿದ ಟಾಪ್ 10 ಬ್ಯಾಟ್ಸ್ಮನ್ ಗಳು

ರಿಷಬ್ ಪಂತ್

ರಿಷಬ್ ಪಂತ್

ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಸ್ಫೋಟಕ ಬ್ಯಾಟ್ಸ್ಮನ್ ರಿಷಬ್ ಪಂತ್ ಭಾನುವಾರ ಮುಗಿದ ಲೀಗ್ ಹಂತದ ಐಪಿಎಲ್ ಪಂದ್ಯಗಳವರೆಗೂ ಬ್ಯಾಟ್ಸ್ಮನ್ ಗಳ ಪೈಕಿ ಅಗ್ರ ಸ್ಥಾನಿಗರಾಗಿ ಗುರುತಿಸಿಕೊಂಡಿದ್ದರು. ಒಟ್ಟು 14 ಪಂದ್ಯಗಳನ್ನಾಡಿರುವ ರಿಷಬ್ 684 ರನ್ ಸಂಪಾದಿಸಿ ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದರು. ಡೆಲ್ಲಿ ಡೇರ್ ಡೆವಿಲ್ಸ್ ಪ್ಲೇಆಫ್ ಪ್ರವೇಶಿಸಲ್ಲವಾದ್ದರಿಂದ ಪಂತ್ ಸ್ಥಾನಕ್ಕೆ ಹೈದರಾಬಾದ್ ನ ಕೇನ್ ವಿಲಿಯಮ್ಸನ್ ಆವರಿಸಿಕೊಳ್ಳುವ ಸಾಧ್ಯತೆಗಳಿವೆ.

ಕೇನ್ ವಿಲಿಯಮ್ಸನ್

ಕೇನ್ ವಿಲಿಯಮ್ಸನ್

ಈ ಐಪಿಎಲ್ ಆವೃತ್ತಿಯಲ್ಲಿ ಅತೀಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ ಗಳ ಪೈಕಿ ಎರಡನೆಯವರಾಗಿ ಗುರುತಿಸಿಕೊಂಡಿದ್ದಾರೆ ಕೇನ್ ವಿಲಿಯಮ್ಸನ್. ಹೈದರಾಬಾದ್ ತಂಡದ ನಾಯಕರಾಗಿರುವ ಇವರು ಆಡಿರುವ 14 ಪಂದ್ಯಗಳಲ್ಲಿ 661 ರನ್ ಸಂಪಾದಿಸಿದ್ದಾರೆ. ಐಪಿಎಲ್ ಪ್ರಶಸ್ತಿ ಸುತ್ತಿಗೇರಲು ಹೈದರಾಬಾದ್ ಗೆ ಅವಕಾಶವಿರುವುದರಿಂದ ಪಂತ್ ಸ್ಥಾನಕ್ಕೆ ಕೇನ್ ಏರಿದರೂ ಏರಬಹುದು.

ಲೋಕೇಶ್ ರಾಹುಲ್

ಲೋಕೇಶ್ ರಾಹುಲ್

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬಿರುಗೈ ದಾಂಡಿಗ ಕೆಎಲ್ ರಾಹುಲ್. ಈ ಐಪಿಎಲ್ ಆವೃತ್ತಿಯಲ್ಲಿ ಪಂಜಾಬ್ ಗೆ ಹೆಚ್ಚಿನ ನೆರವು ನೀಡಿದವರು ರಾಹುಲ್. ಬಹುತೇಕ ಪಂದ್ಯಗಳ ಗೆಲುವಿಗೂ ಕಾರಣರಾಗಿದ್ದರು. 14 ಇನ್ನಿಂಗ್ಸ್ ಆಡಿರುವ ರಾಹುಲ್ ಖಾತೆಯಲ್ಲಿ 659 ರನ್ ಇವೆ.

ಅಂಬಾಟಿ ರಾಯುಡು

ಅಂಬಾಟಿ ರಾಯುಡು

ಚೆನ್ನೈ ಸೂಪರ್ ಕಿಂಗ್ಸ್ ನ ಅಂಬಾಟಿ ರಾಯುಡು ಖಾತೆಯಲ್ಲಿ 586 ರನ್ ಇವೆ. ಆಡಿರುವ 14 ಇನ್ನಿಂಗ್ಸ್ ಗಳಲ್ಲಿ ರಾಯುಡು ಈ ಸಾಧನೆ ಮಾಡಿದ್ದಾರೆ. ಚೇಸಿಂಗ್ ಚಾಂಪಿಯನ್ ಚೆನ್ನೈಗೆ ಬಹುತೇಕ ಐಪಿಎಲ್ ಪಂದ್ಯಗಳಲ್ಲಿ ಗೆಲ್ಲಲು ನೆರವು ನೀಡಿದ ಆಟಗಾರರಿವರು.

 ಜಾಸ್ ಬಟ್ಲರ್

ಜಾಸ್ ಬಟ್ಲರ್

ಇಂಗ್ಲೆಂಡ್ ಸ್ಫೋಟಕ ಬ್ಯಾಟ್ಸ್ಮನ್ ಜಾಸ್ ಬಟ್ಲರ್ ಈ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದು. ಬ್ಯಾಟಿಂಗ್ ವಿಚಾರದಲ್ಲಿ ರಾಜಸ್ಥಾನ್ ತಂಡಕ್ಕೆ ಹೆಚ್ಚು ಬೆಂಬಲವಾಗಿ ನಿಂತ ಆಟಗಾರ ಬಟ್ಲರ್. 13 ಇನ್ನಿಂಗ್ಸ್ ಗಳಲ್ಲಿ 548 ರನ್ ಗಳಿಸಿರುವ ಬಟ್ಲರ್ ಸದ್ಯ ರಾಜಸ್ಥಾನ್ ರಾಯಲ್ಸ್ ತಂಡವನ್ನು ತೊರೆದಿದ್ದಾರೆ. ಟೆಸ್ಟ್ ಪಂದ್ಯವೊಂದರಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸುವುದಕ್ಕಾಗಿ ಬಟ್ಲರ್ ರಾಜಸ್ಥಾನ್ ತಂಡಕ್ಕೆ ವಿದಾಯ ಹೇಳಬೇಕಾಯ್ತು.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಬ್ಯಾಟ್ ಬೀಸಿ ಗಮನ ಸೆಳೆದಿದ್ದಾರೆ. ಆರ್ಸಿಬಿ ಸೋತು ಪ್ರಶಸ್ತಿ ಸುತ್ತಿನ ಹಣಾಹಣಿಯಿಂದ ಹೊರ ನಡೆದಿದ್ದರೂ ಕೊಹ್ಲಿ ಬ್ಯಾಟಿಂಗ್ ಸಾಧನೆ ಗಮನಾರ್ಹವೆ. 14 ಇನ್ನಿಂಗ್ಸ್ ಆಡಿರುವ ಕೊಹ್ಲಿ ಒಟ್ಟು 530 ಅಂಕಗಳನ್ನು ಕಲೆ ಹಾಕಿ ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.

ಸೂರ್ಯಕುಮಾರ್ ಯಾದವ್

ಸೂರ್ಯಕುಮಾರ್ ಯಾದವ್

ಈ ಐಪಿಎಲ್ ನಲ್ಲಿ ಮುಂಬೈ ತಂಡ ಹೆಚ್ಚು ಅವಲಂಭಿತವಾಗಿದ್ದ ಆಟಗಾರ ಸೂರ್ಯಕುಮಾರ್ ಯಾದವ್. ಮುಂಬೈ ಆರಂಭಿಕ ಆಟಗಾರರಾಗಿದ್ದ ಸೂರ್ಯಕುಮಾರ್ 14 ಇನ್ನಿಂಗ್ಸ್ ಗಳಲ್ಲಿ 512 ರನ್ ಮೂಲಕ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 7ನೇ ಸ್ಥಾನಿಗರಲ್ಲಿ ಗುರುತಿಸಿಕೊಂಡಿದ್ದಾರೆ.

ಎಬಿ ಡಿವಿಲಿಯರ್ಸ್

ಎಬಿ ಡಿವಿಲಿಯರ್ಸ್

ದಕ್ಷಿಣ ಆಫ್ರಿಕಾ ದಾಂಡಿಗ ಎಬಿ ಡಿವಿಲಿಯರ್ಸ್ ಅವರು ಅರ್ಸಿಬಿಯಲ್ಲಿ ಹೆಚ್ಚು ಗಮನ ಸೆಳೆದ ಆಟಗಾರ. ಅದರಲ್ಲೂ ಇತ್ತೀಚೆಗೆ ಸಿಕ್ಸ್ ಲೈನ ನಲ್ಲಿ ಅದ್ಭುತ ಕ್ಯಾಚೊಂದನ್ನು ಹಿಡಿದು ಹೆಚ್ಚು ಸುದ್ದಿಯಾಗಿದ್ದರು. ಸ್ಪೈಡರ್ ಮ್ಯಾನ್, ಸೂಪರ್ ಮ್ಯಾನ್ ಎಂದೂ ಕರೆಯಲ್ಪಟ್ಟಿದ್ದ ಎಬಿಡಿ 11 ಇನ್ನಿಂಗ್ಸ್ ಗಳಲ್ಲಿ 480 ರನ್ ಕಲೆ ಹಾಕಿ 8ನೇ ಸ್ಥಾನದಲ್ಲಿದ್ದಾರೆ.

ಎಂಎಸ್ ಧೋನಿ

ಎಂಎಸ್ ಧೋನಿ

ಚೆನ್ನೈ ನಾಯಕ ಕೂಲ್ ಕ್ಯಾಪ್ಟನ್ ಖ್ಯಾತಿಯ ಧೋನಿ ಈ ಐಪಿಎಲ್ ನಲ್ಲಿ ಹೆಚ್ಚು ಬ್ಯಾಟಿಂಗ್ ಮೂಲಕ ಹೆಚ್ಚು ಗಮನ ಸೆಳೆದರು. ಅನುಭವಿ ಆಟಗಾರರೆಲ್ಲಾ ಕಳಪೆ ಬ್ಯಾಟಿಂಗ್ ಮೂಲಕ ಮೂಲೆ ಗುಂಪಾಗುತ್ತಿರುವ ವೇಳೆ ಅದೂ ಐಪಿಎಲ್ ನಂತ ಚುಟುಕು ಆಟಗಳಲ್ಲಿ ಬ್ಯಾಟ್ ಬೀಸಿ ಈಗಲೂ ಆಕರ್ಷಣೆ ಉಳಿಸಿಕೊಂಡಿದ್ದಾರೆ ಧೋನಿ. ಧೋನಿ ಖಾತೆಯಲ್ಲಿ 446 ರನ್ ಗಳಿವೆ.

ದಿನೇಶ್ ಕಾರ್ತಿಕ್

ದಿನೇಶ್ ಕಾರ್ತಿಕ್

ಕಳೆದಬಾರಿ ಗುಜರಾತ್ ಲಯನ್ಸ್ ತಂಡಕ್ಕಾಗಿ ಆಡಿದ್ದ ದಿನೇಶ್ ಕಾರ್ತಿಕ್ ಈ ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಗುರುತಿಸಿಕೊಂಡಿದ್ದರು. ಕೆಕೆಆರ್ ನಾಯಕತ್ವದಲ್ಲೂ ಇರುವ ಕಾರ್ತಿಕ್ ಬ್ಯಾಟಿಂಗ್ ಮುಖಾಂತರ ಗಮನ ಸೆಳೆದಿದ್ದಾರೆ. 14 ಇನ್ನಿಂಗ್ಸ್ ಗಳಲ್ಲಿ 438 ರನ್ ಗಳಿಸಿರುವ ಕಾರ್ತಿಕ್ ಹೆಚ್ಚು ರನ್ ಗಳಿಸಿದ ಐಪಿಎಲ್ ಆಟಗಾರರ ಪಟ್ಟಿಯಲ್ಲಿ 10ನೇ ಸ್ಥಾನಿಗರಾಗಿ ಗುರುತಿಸಿಕೊಂಡಿದ್ದಾರೆ.

Story first published: Tuesday, May 22, 2018, 17:33 [IST]
Other articles published on May 22, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+