For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020ರ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್ಸ್

Expensive bowlers

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಗೆ ಕೌಂಟ್‌ಡೌನ್ ಶುರುವಾಗಿದೆ. ಇದೇ ತಿಂಗಳು ಮಾರ್ಚ್‌ 26ರಿಂದ ಮೆಗಾ ಟಿ20 ಟೂರ್ನಿಗೆ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಯಾಗಲಿವೆ. ಹಾಲಿ ಚಾಂಪಿಯನ್‌ ಸಿಎಸ್‌ಕೆ ಈ ಬಾರಿಯು ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, IPL 2022ರ ಸೀಸನ್‌ನಲ್ಲಿ 10 ತಂಡಗಳು ಕಣಕ್ಕಿಳಿಯುತ್ತಿವೆ.

ಐಪಿಎಲ್ 2020ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಅಬ್ಬರದ ಗೆಲುವು ಸಾಧಿಸುವ ಮೂಲಕ ಐದನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು. ಈ ಸೀಸನ್‌ನಲ್ಲಿ ಕೆಲವು ಬೌಲರ್‌ಗಳು ಹಿಗ್ಗಾಮುಗ್ಗ ರನ್ ಬಿಟ್ಟುಕೊಟ್ಟಿದ್ದು ಸಹ ಇದೆ. ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ಪತರುಗುಟ್ಟಿದ ಹಾಗೂ 2020ರ ಸೀಸನ್‌ನಲ್ಲಿ ಓವರ್‌ಗೆ ಅತಿ ಹೆಚ್ಚು ರನ್‌ ಬಿಟ್ಟುಕೊಟ್ಟ ಐವರು ಟಿ20 ಬೌಲರ್‌ಗಳ ಮಾಹಿತಿ ಈ ಕೆಳಗಿದೆ.

ಲುಂಗಿ ಎನ್‌ಗಿಡಿ (ಸಿಎಸ್‌ಕೆ: 56 ರನ್)

ಲುಂಗಿ ಎನ್‌ಗಿಡಿ (ಸಿಎಸ್‌ಕೆ: 56 ರನ್)

2020ರ ಐಪಿಎಲ್ ಸೀಸನ್‌ನ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್‌ಗಳ ಪಟ್ಟಿಯಲ್ಲಿ ಲುಂಗಿ ಎನ್‌ಗಿಡಿ ಐದನೇ ಸ್ಥಾನದಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಎನ್‌ಗಿಡಿ ರಾಜಸ್ತಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್‌ಗೆ 56 ರನ್ ಚಚ್ಚಿಸಿಕೊಂಡಿದ್ದರು. ಇದರ ಜೊತೆಗೆ ಕೇವಲ ಒಂದು ವಿಕೆಟ್ ಪಡೆದ ದಕ್ಷಿಣ ಆಫ್ರಿಕಾ ಬೌಲರ್‌ ಪಂದ್ಯದಲ್ಲಿ ದುಬಾರಿ ಬೌಲರ್ ಆಗಿ ಗುರುತಿಸಿಕೊಂಡ್ರು.

ಈ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ 7 ವಿಕೆಟ್ ನಷ್ಟಕ್ಕೆ 216 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಚೆನ್ನೈ 6 ವಿಕೆಟ್ ನಷ್ಟಕ್ಕೆ 200ರನ್‌ಗಳಿಸಲಷ್ಟೇ ಶಕ್ತವಾಗಿ 16 ರನ್‌ಗಳಿಂದ ಸೋಲನ್ನಪ್ಪಿತು.

ಕ್ರಿಸ್ ಜೋರ್ಡಾನ್ (ಪಂಜಾಬ್ ಕಿಂಗ್ಸ್‌:56 ರನ್)

ಕ್ರಿಸ್ ಜೋರ್ಡಾನ್ (ಪಂಜಾಬ್ ಕಿಂಗ್ಸ್‌:56 ರನ್)

ಇಂಗ್ಲೆಂಡ್ ಮೂಲದ ಬೌಲರ್ ಕ್ರಿಸ್ ಜೋರ್ಡಾನ್ 2020ರ ಐಪಿಎಲ್ ಸೀಸನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್‌ಗೆ 56ರನ್‌ಗಳನ್ನ ಬಿಟ್ಟುಕೊಟ್ಟಿದ್ದರು. ಇಷ್ಟು ರನ್ ಬಿಟ್ಟುಕೊಟ್ಟಿದ್ದಲ್ಲದೆ ಒಂದು ವಿಕೆಟ್ ಪಡೆಯಲು ವಿಫಲಗೊಂಡರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 8 ವಿಕೆಟ್ ಕಳೆದುಕೊಂಡು 157ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಪಂಜಾಬ್ ಕಿಂಗ್ಸ್ ಕೂಡ ಸಮಾನ ಮೊತ್ತ ಕಲೆಹಾಕಿತು. ಪರಿಣಾಮ ಪಂದ್ಯ ಸೂಪರ್ ಓವರ್‌ಗೆ ತಿರುಗಿತು. ಡೆಲ್ಲಿ ಕ್ಯಾಪಿಟಲ್ಸ್ ಸೂಪರ್‌ ಓವರ್‌ನಲ್ಲಿ ರೋಚಕ ಗೆಲುವು ಸಾಧಿಸಿತು.

ಐಪಿಎಲ್ 2022: ಮಹಾರಾಷ್ಟ್ರ ಸರ್ಕಾರದ ನಿರ್ಧಾರದಿಂದ 15ನೇ ಆವೃತ್ತಿಯ ಐಪಿಎಲ್‌ಗೆ ಭಾರೀ ಹಿನ್ನಡೆ ಸಾಧ್ಯತೆ!

ಡೇಲ್ ಸ್ಟೇನ್ (ಆರ್‌ಸಿಬಿ: 57 ರನ್)

ಡೇಲ್ ಸ್ಟೇನ್ (ಆರ್‌ಸಿಬಿ: 57 ರನ್)

ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ 2020ರ ಸೀಸನ್‌ನಲ್ಲಿ ಆರ್‌ಸಿಬಿ ಪರ ಕೆಲ ಪಂದ್ಯಗಳನ್ನಷ್ಟೇ ಆಡಿದ್ರು. ಆದ್ರೆ ಸಿಕ್ಕ ಅವಕಾಶದಲ್ಲಿ ಸ್ಟೇನ್ ಅಷ್ಟಾಗಿ ಮಿಂಚಲಿಲ್ಲ. ಅದ್ರಲ್ಲೂ ಪಂಜಾಬ್ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಭಾರೀ ರನ್‌ಬಿಟ್ಟುಕೊಟ್ಟರು. 4 ಓವರ್‌ಗಳಲ್ಲಿ 57 ರನ್ ಚಚ್ಚಿಸಿಕೊಂಡ ಸ್ಟೇನ್ ಬೌಲಿಂಗ್‌ನಲ್ಲಿ ಪಂಜಾಬ್ ಅಬ್ಬರಿಸಿತು. ಅಂತಿಮವಾಗಿ ಮೂರು ವಿಕೆಟ್ ನಷ್ಟಕ್ಕೆ 206ರನ್ ಕಲೆಹಾಕಿತು.

207 ರನ್ ಟಾರ್ಗೆಟ್ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೇವಲ 109ರನ್‌ಗಳಿಗೆ ಆಲೌಟ್ ಆಗುವ ಮೂಲಕ ಮುಖಭಂಗ ಎದುರಿಸಿತು. ಭರ್ಜರಿ 97ರನ್‌ಗಳಿಂದ ಸೋಲನ್ನ ಒಪ್ಪಿಕೊಂಡಿತು.

IPL 2022: ಮಿಂಚು ಹರಿಸಲು ಸಜ್ಜಾದ ಓಪನರ್ಸ್: ಈ ಬಾರಿಯ ಟಾಪ್ 5 ಆರಂಭಿಕ ಜೋಡಿ

ಅಂಕಿತ್ ರಜಪೂತ್ (ರಾಜಸ್ತಾನ್ ರಾಯಲ್ಸ್‌: 60 ರನ್)

ಅಂಕಿತ್ ರಜಪೂತ್ (ರಾಜಸ್ತಾನ್ ರಾಯಲ್ಸ್‌: 60 ರನ್)

ರಾಜಸ್ತಾನ್ ರಾಯಲ್ಸ್ ಪರ ಆಡಿದ ದೇಶೀಯ ಬೌಲರ್ ಅಂಕಿತ್ ರಜಪೂತ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಬರೋಬ್ಬರ 60 ರನ್‌ಗಳನ್ನ ಬಿಟ್ಟುಕೊಟ್ಟು ತಂಡಕ್ಕೆ ವಿಲನ್ ಆಗಿದ್ದರು. ಒಂದೂ ವಿಕೆಟ್ ಪಡೆಯಲು ಪರದಾಡಿದ ಈತನ ದಾಳಿಗೆ ಮುಂಬೈ ಅಬ್ಬರದ ಪ್ರದರ್ಶನ ತೋರಿತು.

ಈ ಪಂದ್ಯದಲ್ಲಿ ಮುಂಬೈ ಐದು ವಿಕೆಟ್ ಕಳೆದುಕೊಂಡು 195ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ರಾಜಸ್ತಾನ್ ಬೆಸ್‌ ಸ್ಟೋಕ್ಸ್‌ ಅಮೋಘ ಶತಕದ ನೆರವಿನಿಂದ 8 ವಿಕೆಟ್‌ಗಳ ಜಯ ಸಾಧಿಸಿತು.

KL Rahul ಅವರನ್ನು ತಂಡದವರೇ ತುಳಿಯುತ್ತಿದ್ದರು | Oneindia Kannada
ಸಿದ್ದಾರ್ಥ್ ಕೌಲ್ (ಎಸ್‌ಆರ್‌ಎಚ್‌: 64 ರನ್)

ಸಿದ್ದಾರ್ಥ್ ಕೌಲ್ (ಎಸ್‌ಆರ್‌ಎಚ್‌: 64 ರನ್)

ಅಶೋಕ್ ದಿಂಡಾ ಬಳಿಕ ಅತಿ ದುಬಾರಿ ಬೌಲರ್ ಆಗಿ ಗುರುತಿಸಿಕೊಂಡಿದ್ದ ಸಿದ್ದಾರ್ಥ್ ಕೌಲ್‌ 2020ರ ಐಪಿಎಲ್ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ಪರ ಆಡಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೌಲ್‌ ನಾಲ್ಕು ಓವರ್‌ಗೆ ವಿಕೆಟ್ ಪಡೆಯದೆ 64ರನ್‌ ನೀಡಿ ದುಬಾರಿ ಬೌಲರ್ ಆಗಿದ್ರು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 5 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಸನ್‌ರೈಸರ್ಸ್ ಹೈದ್ರಾಬಾದ್ 174-7 ಗಳಿಸಲಷ್ಟೇ ಶಕ್ತವಾಯ್ತು.

Story first published: Monday, March 21, 2022, 13:40 [IST]
Other articles published on Mar 21, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+