Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟ್ವೀಟ್ : ಗೇಲ್ ಬ್ಯಾಟ್ ಎಕೆ 47 ಥರಾ ಕಾಣ್ತಾ ಇತ್ತಂತೆ !

ಕ್ಯಾನ್ ಬೆರಾ, ಫೆ.24: ವೆಸ್ಟ್ ವಿಂಡೀಸ್ ತಂಡದ ದೈತ್ಯ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಆರ್ಭಟಕ್ಕೆ ಮನುಕಾ ಓವಲ್ ಮೈದಾನ ಅಲುಗಾಡಿದೆ. ಗೇಲ್ ಬ್ಯಾಟಿನಿಂದ ಬೌಂಡರಿ, ಸಿಕ್ಸರ್ ಮಳೆ ಹರಿದು ಬಂದಿದ್ದು, ಜಿಂಬಾಬ್ವೆ ಬೌಲರ್ ಗಳಿಗೆ ಗೇಲ್ ಕೈಲಿದ್ದ ಬ್ಯಾಟ್ ಎಕೆ 47 ಗನ್ ಮಾದರಿ ಕಂಡಿರಬಹುದು ಎಂದು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಥರಾವರಿ ಜೋಕುಗಳು, ಬಹುಪರಾಕ್ ಸಂದೇಶಗಳು ಹರಿದಾಡುತ್ತಿವೆ.

ಕ್ರಿಸ್ ಗೇಲ್ ವಿಶ್ವದಾಖಲೆ ದ್ವಿಶತಕದ ನೆರವಿನಿಂದ ವಿಂಡೀಸ್ ತಂಡ ಜಿಂಬಾಬ್ವೆ ವಿರುದ್ಧ ಭರ್ಜರಿ ಜಯದತ್ತ ದಾಪುಗಾಲಿರಿಸುತ್ತಿದೆ. ಕ್ರಿಸ್ ಗೇಲ್ ಸಿಕ್ಸರ್, ಬೌಂಡರಿ ಸುರಿಮಳೆಗೈದು ಪ್ರೇಕ್ಷಕರನ್ನು ರಂಜಿಸಿದ್ದಲ್ಲದೆ, ಹಲವು ದಾಖಲೆಗಳನ್ನು ಮುರಿದರು. ಜಿಂಬಾಬ್ವೆ ತಂಡಕ್ಕೆ ಗೆಲ್ಲಲು 373ರನ್ ಟಾರ್ಗೆಟ್ ನೀಡಲಾಗಿದೆ. ಜಿಂಬಾಬ್ವೆ ಕೂಡಾ ಸಮರ್ಥವಾಗಿ ಹೋರಾಟ ನಡೆಸಿದೆ. [ಗೇಲ್ ಧೂಳಿಪಟ ಮಾಡಿದ ವಿಶ್ವ ದಾಖಲೆಗಳ ಪಟ್ಟಿ]

ಈ ನಡುವೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿರುವ ಸಂದೇಶಗಳತ್ತ ಒಂದು ಇಣುಕು ನೋಟ ಇಲ್ಲಿದೆ:

ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲು

ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲು

40 ವರ್ಷಗಳ ವಿಶ್ವಕಪ್ ಇತಿಹಾಸ 10 ವಿಶ್ವಕಪ್ ನಲ್ಲಿ ಯಾವೊಬ್ಬ ಬ್ಯಾಟ್ಸ್ ಮನ್ ದಾಟಲು ಸಾಧ್ಯವಾಗದ ಮೈಲಿಗಲ್ಲನ್ನು ಕ್ರಿಸ್ಟೋಫರ್ ಗೇಲ್ ಸುಲಭವಾಗಿ ಹಿಂದಿಕ್ಕಿದ್ದಾರೆ.

ಇಂಡಿಯನ್ಸ್ ಹಾಗೂ ವೆಸ್ಟ್ ಇಂಡೀಸ್ ಬಲ

ಇಂಡಿಯನ್ಸ್ ಹಾಗೂ ವೆಸ್ಟ್ ಇಂಡೀಸ್ ಬಲ ಹೀಗಿದೆ ನೋಡಿ... ಉಭಯ ದೇಶದ ಬ್ಯಾಟ್ಸ್ ಮನ್ ಮಾತ್ರ ದ್ವಿಶತಕ ಸಿಡಿಸಿದ್ದಾರೆ.

ಎಕೆ 47 ಥರಾ ಕಾಣ್ತಾ ಇತ್ತಂತೆ

ಜಿಂಬಾಬ್ವೆ ಬೌಲರ್ ಗಳಿಗೆ ಕ್ರಿಸ್ ಗೇಲ್ ಕೈಲಿದ್ದ ಬ್ಯಾಟ್ ಎಕೆ 47 ಥರಾ ಕಾಣ್ತಾ ಇತ್ತಂತೆ

ಕ್ರಿಸ್ ಗೇಲ್ ಬ್ಯಾಟಿಂಗ್ ಫಿಲಾಸಫಿ

ಕ್ರಿಸ್ ಗೇಲ್ ಬ್ಯಾಟಿಂಗ್ ಫಿಲಾಸಫಿEAT SLEEP SMASH REPEAT

ಬಿರುಗಾಳಿ ಬರುತ್ತಿದೆ ಎಚ್ಚರ

ಜಾಗತಿಕವಾಗಿ ಎಚ್ಚರಿಕೆ ಸಂದೇಶ ನೀಡಲಾಗಿದೆ. ಗೇಲ್ ಬಿರುಗಾಳಿ ಎದುರಿಸಲು ಸಿದ್ದರಾಗಿ

ಕ್ಯಾನ್ ಬೆರಾ ಪ್ರೇಕ್ಷಕರಿಂದ ಒಳ್ಳೆ ಫೀಲ್ಡಿಂಗ್

ಕ್ಯಾನ್ ಬೆರಾ ಪ್ರೇಕ್ಷಕರಿಂದ ಒಳ್ಳೆ ಫೀಲ್ಡಿಂಗ್, ಜಿಂಬಾಬ್ವೆ ಫೀಲ್ಡರ್ ರೆಸ್ಟ್ ತೆಗೆದುಕೊಂಡರು.

ಡಬ್ಬಲ್ ಟನ್ ಡೇ ಎಂದು ಘೋಷಿಸಿ

ಫೆಬ್ರವರಿ ತಿಂಗಳ ಫೆ.24 ಡಬ್ಬಲ್ ಟನ್ ಡೇ ಎಂದು ಘೋಷಿಸಬೇಕು. ಸಚಿನ್ ಹಾಗೂ ಗೇಲ್ ಒಂದೇ ದಿನ ದ್ವಿಶತಕ ಬಾರಿಸಿದ್ದು ವಿಶೇಷ.

ಈ ಪಂದ್ಯ ಮೊದಲ ಹಾಗೂ ಕೊನೆ ಚೆಂಡು ನೋಡಿ

ಈ ಪಂದ್ಯ ಮೊದಲ ಹಾಗೂ ಕೊನೆ ಎಸೆತವನ್ನು ತಪ್ಪದೇ ನೋಡಿ

ಗೇಲ್ ಬ್ಯಾಟಿಂಗ್ ಶಕ್ತಿ ಹೇಗಿದೆ ನೋಡಿ

ಗೇಲ್ ಬ್ಯಾಟಿಂಗ್ ಶಕ್ತಿ ಹೇಗಿದೆ ನೋಡಿ, ಏಕದಿನ ಕ್ರಿಕೆಟ್ ನಲ್ಲಿ 200, ಟಿ 20 ನಲ್ಲಿ 150, ಟೆಸ್ಟ್ ನಲ್ಲಿ 300 ಗೇಲ್ ನಿಂದ ಮಾತ್ರ ಸಾಧ್ಯ.

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+