ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗೇಲ್ ಧೂಳಿಪಟ ಮಾಡಿದ ವಿಶ್ವ ದಾಖಲೆಗಳ ಪಟ್ಟಿ

By Mahesh

ಕ್ಯಾನ್ ಬೆರಾ, ಫೆ.24: ವಿಶ್ವಕಪ್ ಇತಿಹಾಸದಲ್ಲೇ ಪ್ರಪ್ರಥಮ ದ್ವಿಶತಕ ದಾಖಲಿಸಿ ಜಿಂಬಾಬ್ವೆ ತಂಡಕ್ಕೆ ದುಃಸ್ವಪ್ನವಾಗಿ ಕಾಡಿದ ಕ್ರಿಸ್ ಗೇಲ್ ಬೊಂಬಾಟ್ ಬ್ಯಾಟಿಂಗ್ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದೆ.

40 ವರ್ಷಗಳ ವಿಶ್ವಕಪ್ ಇತಿಹಾಸ 10 ವಿಶ್ವಕಪ್ ನಲ್ಲಿ ಯಾವೊಬ್ಬ ಬ್ಯಾಟ್ಸ್ ಮನ್ ದಾಟಲು ಸಾಧ್ಯವಾಗದ ಮೈಲಿಗಲ್ಲನ್ನು ಕ್ರಿಸ್ಟೋಫರ್ ಗೇಲ್ ಸುಲಭವಾಗಿ ಹಿಂದಿಕ್ಕಿದ್ದಾರೆ. [ಗೇಲ್ ಡಬ್ಬಲ್ ಸೆಂಚುರಿ, ರಿಚರ್ಡ್ಸ್ ದಾಖಲೆ ಢಮಾರ್]

ಏಕದಿನ ಕ್ರಿಕೆಟ್ ಜಗತ್ತಿನ ಅತ್ಯಂತ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರು ಕ್ಯಾನ್ ಬೆರಾದ ಮನುಕಾ ಓವಲ್ ಮೈದಾನದಲ್ಲಿ ಮಂಗಳವಾರ ಜಿಂಬಾಬ್ವೆ ಬೌಲರ್ ಗಳ ಎಸೆತಗಳನ್ನು ಮನಬಂದಂತೆ ಚೆಚ್ಚಿದರು. ಗೇಲ್ ಆರ್ಭಟಕ್ಕೆ ಪ್ರೇಕ್ಷಕರು ಬೆಚ್ಚಿದರು. ಗೇಲ್ ಇದೇ ಲಯದಲ್ಲಿ ಮುಂದುವರೆದರೆ ಮಾ.6ರಂದು ಟೀಂ ಇಂಡಿಯಾ ಬೌಲರ್ ಗಳನ್ನು ಯಾವ ದೇವರು ಕಾಪಾಡುತ್ತಾರೋ ಗೊತ್ತಿಲ್ಲ[ವಿಂಡೀಸ್ ಜೊತೆ ಇಂಡಿಯಾ ಕದನ ಯಾವಾಗ?]

World Cup: List of records broken by Chris Gayle

138 ಎಸೆತಗಳಲ್ಲಿ 201 ರನ್ ಗಡಿ ದಾಟುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ದ್ವಿಶತಕ ಚೆಚ್ಚುವ ಮೂಲಕ ವೈಯಕ್ತಿಕ ಹಾಗೂ ವಿಶ್ವ ಕಪ್ ದಾಖಲೆ ಮುರಿದರು. ಸ್ಯಾಮುಯಲ್ ಜೊತೆಗೂಡಿ ಏಕದಿನ ಕ್ರಿಕೆಟ್ ನಲ್ಲಿ ಹೊಸ ಜೊತೆಯಾಟದ ದಾಖಲೆ ಬರೆದರು.

ವಿಶ್ವಕಪ್ ಕ್ರಿಕೆಟ್ 2015</a>: </strong><a class=ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" title="ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" />ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ

2010ರಲ್ಲಿ ಮೊದಲ ಬಾರಿಗೆ ಏಕದಿನ ಕ್ರಿಕೆಟ್ ನಲ್ಲಿ ಬ್ಯಾಟ್ಸ್ ಮನ್ 200ರನ್ ಚೆಚ್ಚಬಹುದು ಎಂಬುದನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ತೋರಿಸಿಕೊಟ್ಟರು. ಗ್ವಾಲಿಯರ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2010ರಲ್ಲಿ ಸಚಿನ್ ಏಕದಿನ ಕ್ರಿಕೆಟ್ ನಲ್ಲಿ ಮೊದಲ 200 ರನ್ ಗಳಿಸಿದ ಆಟಗಾರ ಎನಿಸಿದರು.

ಇನ್ನಿಂಗ್ಸ್ ನ ಅಂತಿಮ ಓವರ್ ನ ಕೊನೆ ಎಸೆತದಲ್ಲಿ ಚಿಗುಂಬರಕ್ಕೆ ಕ್ಯಾಚಿತ್ತು ಗೇಲ್ ಔಟಾದಾಗ 215 ರನ್ (147 ಎಸೆತ, 10X4, 16X6) ಸ್ಟ್ರೈಕ್ ರೇಟ್ 146.3 ಆಗಿತ್ತು. [ಜಿಂಬಾಬ್ವೆ vs ವಿಂದೀಸ್ ಪಂದ್ಯದ ವರದಿ]

ಕ್ರಿಸ್ ಗೇಲ್, ವಿಂಡೀಸ್ ಧೂಳಿಪಟ ಮಾಡಿದ ವಿಶ್ವ ದಾಖಲೆಗಳ ಪಟ್ಟಿ ಇಂತಿದೆ:
* 215 ರನ್ (147 ಎಸೆತ, 10X4, 16X6)- ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ದ್ವಿಶತಕ ದಾಖಲಿಸಿದ ಕ್ರಿಸ್ ಗೇಲ್.
* ಅತ್ಯಂತ ತ್ವರಿತ ಗತಿಯಲ್ಲಿ ದ್ವಿಶತಕ 200 ರನ್ 138 ಎಸೆತ (ಹಿಂದಿನ ದಾಖಲೆ: ವೀರೇಂದ್ರ ಸೆಹ್ವಾಗ್ 140 ಎಸೆತಗಳಲ್ಲಿ 200)
* ಕ್ರಿಕೆಟ್ ನಲ್ಲಿ ಗೇಲ್ ಅಪೂರ್ವ ದಾಖಲೆ: ಟಿ20 ಶತಕ, ಏಕದಿನ ಕ್ರಿಕೆಟ್ ಡಬ್ಬಲ್ ಸೆಂಚುರಿ ಹಾಗೂ ಟೆಸ್ಟ್ ಕ್ರಿಕೆಟ್ ನಲ್ಲಿ ತಿಬ್ಬಲ್ ಸೆಂಚುರಿ ಬಾರಿಸಿರುವ ಏಕೈಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್.
* ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ದಾಖಲೆ (ಹಿಂದಿನ ದಾಖಲೆ 188 ನಾಟೌಟ್, ಗ್ಯಾರಿ ಕರ್ಸ್ಟನ್ vs ಯುಎಇ, 1996)
* ವೆಸ್ಟ್ ಇಂಡೀಸ್ ಪರ ಅತಿ ಹೆಚ್ಚು ವೈಯಕ್ತಿಕ ಸ್ಕೋರರ್ (ಹಿಂದಿನ ದಾಖಲೆ 189*-ವಿವಿಯನ್ ರಿಚರ್ಡ್ಸ್ vs ಇಂಗ್ಲೆಂಡ್, 1984).
* ಏಕದಿನ ಕ್ರಿಕೆಟ್ ನಲ್ಲಿ ಮೂರನೇ ಅತಿ ಹೆಚ್ಚು ವೈಯಕ್ತಿಕ ಮೊತ್ತ ಗೇಲ್ 215 (ರೋಹಿತ್ ಶರ್ಮ 264, ಸೆಹ್ವಾಗ್ 219)
* ಭಾರತೀಯ ಬ್ಯಾಟ್ಸ್ ಮನ್ ಅಲ್ಲದ ಬ್ಯಾಟ್ಸ್ ಮನ್ ರೊಬ್ಬರು ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಬಾರಿಸಿದ್ದು ಇದೇ ಮೊದಲು.

World Cup: List of records broken by Chris Gayle

* ಭಾರತದಿಂದ ಹೊರಗೆ ಮೊದಲ ಬಾರಿಗೆ ದ್ವಿಶತಕ ದಾಖಲು (ಹಿಂದಿನ ನಾಲ್ಕು ಭಾರತದಲ್ಲೇ ದಾಖಲಾಗಿದೆ. ಗ್ವಾಲಿಯರ್, ಇಂದೋರ್, ಬೆಂಗಳೂರು ಹಾಗೂ ಕೋಲ್ಕತ್ತಾ)
* ಏಕದಿನ ಕ್ರಿಕೆಟ್ ನಲ್ಲಿ 200 ಪ್ಲಸ್ ರನ್ ಐದನೇ ಬಾರಿಗೆ ದಾಖಲು (ರೋಹಿತ್ ಶರ್ಮ 2, ಸಚಿನ್ 1, ಸೆಹ್ವಾಗ್ 1)
* ಅತಿ ಹೆಚ್ಚು ಸಿಕ್ಸರ್ ದಾಖಲೆ(16 ಸಿಕ್ಸ್) ರೋಹಿತ್ ಹಾಗೂ ಎಬಿ ಡಿವಿಲೆಯರ್ಸ್ ಸಮಕ್ಕೆ ನಿಂತ ಗೇಲ್.
* 400 ಸಿಕ್ಸರ್ ದಾಖಲಿಸಿದ ವಿಶ್ವದ ಎರಡನೇ ಆಟಗಾರ. ಪಾಕಿಸ್ತಾನದ ಶಾಹೀದ್ ಅಫ್ರಿದಿ 447 ಸಿಕ್ಸ್ ನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
* ವೆಸ್ಟ್ ಇಂಡೀಸ್ ನ ಜೋಡಿ ಮರ್ಲಾನ್ ಸ್ಯಾಮುಯಲ್ಸ್ ಹಾಗೂ ಕ್ರಿಸ್ ಗೇಲ್ ರಿಂದ ಏಕದಿನ ಕ್ರಿಕೆಟ್ ನಲ್ಲಿ 2ನೇ ವಿಕೆಟ್ ಗೆ ವಿಶ್ವದಾಖಲೆ ಜೊತೆಯಾಟ 49.4 ಓವರ್ ಗಳಲ್ಲಿ 372ರನ್. (ಹಿಂದಿನ ದಾಖಲೆ : ಸಚಿನ್ -ರಾಹುಲ್ ದ್ರಾವಿಡ್ vs ನ್ಯೂಜಿಲೆಂಡ್ 331 , 1999)
*ಏಕದಿನ ಕ್ರಿಕೆಟ್ ನಲ್ಲಿ ವೆಸ್ಟ್ ಇಂಡೀಸ್ ದಾಖಲೆ ಟೀಂ ಸ್ಕೋರ್ 50 ಓವರ್ ಗಳಲ್ಲಿ 372/2.(ಈ ಹಿಂದೆ ಇದೇ ಜಿಂಬಾಬ್ವೆ ವಿರುದ್ಧ 2014ರಲ್ಲಿ 363/4 ಸ್ಕೋರ್ ದಾಖಲೆಯಾಗಿತ್ತು)

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X