Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚಿತ್ರ ಅದ್ಲು-ಬದ್ಲು: ಕ್ರಿಕೆಟ್‌ ದಿಗ್ಗಜ ತೆಂಡೂಲ್ಕರ್‌ರಿಂದ ಟ್ವೀಟ್ ಯಡವಟ್!

ಕ್ರಿಕೆಟ್‌ ದಿಗ್ಗಜ ತೆಂಡೂಲ್ಕರ್‌ರಿಂದ ಟ್ವೀಟ್ ಎಡವಟ್ಟು! | Oneindia Kannada
Twitter Mistakes by Cricket Great Sachin Tendulkar

ನವದೆಹಲಿ, ಡಿಸೆಂಬರ್ 15: ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು ಟ್ವಿಟರ್‌ನಲ್ಲಿ ಯಡವಟ್ಟೊಂದನ್ನು ಮಾಡಿದ್ದಾರೆ. ಶುಭಾಶಯಕೋರಿ ಟ್ವೀಟ್ ಮಾಡುವಾಗ ಚಿತ್ರ ಅದಲುಬದಲಾಗಿದ್ದಷ್ಟೆ; ಸಚಿನ್ ಕೊಂಚ ಮುಜುಗರಕ್ಕೀಡಾಗಿರುವ ಸಂಗತಿ ನಡೆದಿದೆ.

ಭಾರತದ ಬ್ಯಾಡ್ಮಿಂಟನ್ ಸ್ಟಾರ್‌ಗಳಾದ ಸೈನಾ ನೆಹ್ವಾಲ್ ಮತ್ತು ಪಾರುಪಳ್ಳಿ ಕಶ್ಯಪ್ ಶುಕ್ರವಾರ (ಡಿಸೆಂಬರ್ 14) ತಾವು ದಾಂಪತ್ಯ ಜೀವನಕ್ಕೆ ಕಾಲಿರಿಸಿರುವುದನ್ನು ಟ್ವಿಟರ್ ಮೂಲಕ ಹೇಳಿಕೊಂಡಿದ್ದರು. ಟ್ವಿಟರ್‌ನಲ್ಲಿ ಹೆಚ್ಚು ಸಕ್ರಿಯವಾಗಿರುವ ಸಚಿನ್, ಹೆಚ್ಚಿನ ಕ್ಷಣಗಳಲ್ಲಿ ಶುಭ ಕೋರುವಂತೆ ನವ ಜೋಡಿಗೆ ಶುಭ ಹಾರೈಸಿ ಟ್ವೀಟ್ ಮಾಡಿದ್ದಾರೆ.

'ಮಿಶ್ರ ಡಬಲ್ಸ್ ಗೇಮ್‌ಗೆ ಇಳಿಯುತ್ತಿರುವ ಸೈನಾ ಮತ್ತು ಕಶ್ಯಪ್‌ಗೆ ಶುಭಾಶಯಗಳು' ಅಂತ ಸಚಿನ್ ಸಾಲನ್ನು ಬರೆದು ಟ್ವೀಟ್ ಮಾಡಿದ್ದಾರೆ. ಆದರೆ ಟ್ವೀಟ್ ಮಾಡಿರುವ ಫೋಟೋದಲ್ಲಿ ಸಣ್ಣ ಯಡವಟ್ಟಾಗಿತ್ತು. ಫೋಟೋದಲ್ಲಿ ಸೈನಾ ಜೊತೆಗೆ ಕಶ್ಯಪ್ ಬದಲು ಸ್ಟಾರ್ ಆಟಗಾರ ಕಿದಂಬಿ ಶ್ರೀಕಾಂತ್ ನಗುತ್ತ ನಿಂತಿದ್ದರು!

ಕಶ್ಯಪ್, ಸೈನಾ, ಶ್ರೀಕಾಂತ್ ಮೂವರೂ ಬ್ಯಾಡ್ಮಿಂಟನ್ ಆಟಗಾರರೇ ಆಗಿರುವುದರಿಂದ ಸಹಜವಾಗಿಯೇ ಲಿಟ್ಲ್‌ ಮಾಸ್ಟರ್ ಕನ್ಫ್ಯೂಸ್ ಆದರೋ, ಫೋಟೋ ಗಮನಿಸದೆ ಅರ್ಜೆಂಟು ಮಾಡಿದರೋ ಗೊತ್ತಿಲ್ಲ ಅಂತೂ ಚಿತ್ರದಲ್ಲಿ ಮದುಮಗ ಬದಲಾಗಿ ಸಚಿನ್ ಕೊಂಚ ಮುಜುಗರಕ್ಕೀಡಾಗಬೇಕಾಯ್ತು.

ತಾನು ಮಾಡಿರುವ ಯಡವಟ್ಟು ಸಚಿನ್‌ಗೆ ಕೊಂಚ ತಡವಾಗಿ ಅರಿವಾಯ್ತು. ಆ ಕೂಡಲೇ ಸಚಿನ್ ತನ್ನ ಟ್ವೀಟ್ ಡಿಲೀಟ್ ಮಾಡಿ, ಸರಿಯಾದ ಫೋಟೋದೊಂದಿಗೆ ಯುವ ಜೋಡಿಗೆ ಎರಡನೇ ಸಾರಿ ಶುಭ ಕೋರಿದರು. ಇನ್ಮುಂದೆ ಸಚಿನ್ ಬಹುಶಃ ಟ್ವೀಟ್ ಮಾಡೋಕೆ ಮುನ್ನ ಎರಡೆರಡು ಸಾರಿ ಗಮನಿಸಿಕೊಳ್ಳಬಹುದು ಅನ್ನಿ. ಒಟ್ಟಿನಲ್ಲಿ ತಪ್ಪು ಮಾಡದವರಿಲ್ಲ, ಜೀವನ ಪಾಠ ಕಲಿಯೋಕೆ ದೊಡ್ಡೋರು ಸಣ್ಣೋರು ಅನ್ನೋದೂ ಇಲ್ಲ ಅಲ್ವೆ?

Story first published: Saturday, December 15, 2018, 17:33 [IST]
Other articles published on Dec 15, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+