ಟ್ವೀಟ್ಸ್ ಸ್ವಾಗತ: ಗೇಲ್ ಹೋದ, ಹೆಟ್ಮೆಯರ್ ಬಂದ ಢುಂ ಢುಂ


ಜೈಪುರ, ಡಿಸೆಂಬರ್ 18:ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಟೂರ್ನಮೆಂಟ್ ನಲ್ಲಿ ಪ್ರತಿ ಬಾರಿ ಬಲಿಷ್ಠ ಬ್ಯಾಟಿಂಗ್ ಹೊಂದಿರುವ ತಂಡಗಳ ಪೈಕಿ ಅಗ್ರಗಣ್ಯ ತಂಡವೆನಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಹರಾಜಿನಲ್ಲಿ ಬಂಪರ್ ಹೊಡೆದಿದೆ.
ಯಾರೆಲ್ಲ ಆಟಗಾರರರು ಆಡುತ್ತಾರೆ ಎಂಬುದು ಇಂದು ನಿರ್ಧಾರವಾಗಿದೆ. ಐಪಿಎಲ್ 12ರಲ್ಲಿ ಆಡುವುದಕ್ಕಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಸಿಮ್ರೋನ್ ಹೆಟ್ಮೆಯರ್ ಅವರನ್ನು ಆರ್ ಸಿಬಿ ಖರೀದಿಸಿದೆ. ಈ ಮೂಲಕ ಕ್ರಿಸ್ ಗೇಲ್ ಇಲ್ಲದ ಕೊರಗನ್ನು ನೀಗಿಸಿಕೊಂಡಿದೆ ಎನ್ನಬಹುದು.
ಹೆಟ್ಮೆಯರ್ ಗೆ 4.20 ಕೋಟಿ ರು ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಬಿಡ್ಡಿಂಗ್ ಸುಲಭವಾಗಿರಲಿಲ್ಲ. ಹೆಟ್ಮೆಯರ್ ಗಾಗಿ ರಾಜಸ್ಥಾನ್ ರಾಯಲ್ಸ್, ಸನ್ ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ಕೂಡಾ ಬಿಡ್ಡಿಂಗ್ ಸಲ್ಲಿಸಿದ್ದವು.
ಐಪಿಎಲ್ 2019 : ಅತಿ ಹೆಚ್ಚು ಬಿಡ್ ಪಡೆದ ಹೆಟ್ಮೆಯರ್, ವರುಣ್ ಚಕ್ರವರ್ತಿ
ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್ ಹಾಗೂ ಹೆಟ್ಮೆಯರ್ ಜೋಡಿ ಯಾವ ರೀತಿ ಮೋಡಿ ಮಾಡಲಿದೆ ಎಂಬುದನ್ನು ನೋಡಲು ಕಾತುರರಾಗಿರುವುದಾಗಿ ಟ್ವಿಟ್ಟಿಗರು ಹೇಳಿಕೊಂಡಿದ್ದಾರೆ.
ವಿಕೆಟ್ ಕೀಪರ್ ಆಗಬಲ್ಲ ಹೆಟ್ಮೆಯರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಪಾರ್ಥೀವ್ ಪಟೇಲ್ ಬಿಟ್ಟು ಬೇರೆ ವಿಕೆಟ್ ಕೀಪರ್ ಇಲ್ಲ, ಸಮಯ ಬಂದರೆ ಹೆಟ್ಮೆಯರ್ ರನ್ನು ವಿಕೆಟ್ ಕೀಪರ್ ಆಗಿ ಕೂಡಾ ಬಳಸಬಹುದು
ಮತ್ತೆ ಬ್ಯಾಟಿಂಗ್ ಬಲ ಹೆಚ್ಚಿದೆ
ಆರ್ ಸಿಬಿಯಲ್ಲಿ ಈಗ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಸಿಮ್ರೋನ್ ಹೆಟ್ಮಯರ್ ಇದ್ದು, ಬ್ಯಾಟಿಂಗ್ ಬಲ ಮತ್ತೆ ಹೆಚ್ಚಿದೆ. ಆದರೆ, ಟ್ರೋಫಿ ಗೆಲ್ಲಲ್ಲ ಬಿಡಿ
ಈ ಸಲ ಕಪ್ ನಮ್ದೆ
ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಹೆಟ್ಮೆಯರ್ ಬಂದ, ಈ ಸಲ ಕಪ್ ನಮ್ದೇ ಎಂಬ ಆರ್ ಸಿಬಿ ಅಭಿಮಾನಿಗಳು.
ಆರ್ ಸಿಬಿಗೆ ಲಕ್ ತರುವರೇ ಹೆಟ್ಮೆಯರ್
ಆರ್ ಸಿಬಿಗೆ ಈ ಬಾರಿ ಲಕ್ ತರುವರೇ ಹೆಟ್ಮೆಯರ್, ಕಾದು ನೋಡೋಣ. ಅಲೆಕ್ಸ್ ಹೇಲ್ಸ್ ರನ್ನು ಯಾರೂ ಖರೀದಿಸಿಲ್ಲ ಎಂಬುದು ನಂಬಲು ಆಗುತ್ತಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications