

ಜೈಪುರ, ಡಿಸೆಂಬರ್ 18: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಟೂರ್ನಮೆಂಟ್ ನಲ್ಲಿ ಯಾರೆಲ್ಲ ಆಟಗಾರರರು ಆಡುತ್ತಾರೆ ಎಂಬುದು ಇಂದು ನಿರ್ಧಾರವಾಗಿದೆ. ಐಪಿಎಲ್ 12ರಲ್ಲಿ ಆಡುವುದಕ್ಕಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅತಿಹೆಚ್ಚು ಬೆಲೆ ಪಡೆದ ಆಟಗಾರರ ವಿವರ ಇಲ್ಲಿದೆ.
ಒಟ್ಟಾರೆ 346ಕ್ಕೂ ಅಧಿಕ ಆಟಗಾರರ ಹರಾಜು ನಡೆಯಿತು. ಸ್ಟಾರ್ ಆಟಗಾರರಾದ ಯುವರಾಜ್ ಸಿಂಗ್ (ಕಿಂಗ್ಸ್ ಎಲೆವನ್), ಗೌತಮ್ ಗಂಭೀರ್ (ಡೇರ್ ಡೆವಿಲ್ಸ್) ಅವರನ್ನು ಉಳಿಸಿಕೊಂಡಿರಲಿಲ್ಲ. ಡೇವಿಡ್ ವಾರ್ನರ್ (ಸನ್ ರೈಸರ್ಸ್), ಸ್ಟೀವ್ ಸ್ಮಿತ್(ರಾಯಲ್ಸ್), ಪೃಥ್ವಿ ಶಾ (ಡೇರ್ ಡೆವಿಲ್ಸ್) ಅವರನ್ನು ಉಳಿಸಿಕೊಳ್ಳಲಾಗಿತ್ತು.
ಐಪಿಎಲ್ 2019 ಹರಾಜು LIVE : ಆರ್ ಸಿಬಿ ಪಾಲಾದ ಹೆಟ್ಮೆಯರ್
ಡಿಸೆಂಬರ್ 18ರ ಹರಾಜಿನ ಮೊದಲ ದಿನದಂದು ಅತಿ ಹೆಚ್ಚು ಬೆಲೆ(1 ಕೋಟಿ ರು ಹಾಗೂ ಅಧಿಕ) ಪಡೆದ ಆಟಗಾರರ ಪಟ್ಟಿ ಇಲ್ಲಿದೆ:

* 3.4 ಕೋಟಿ ರು ನೀಡಿ ಬರೀಂದರ್ ಸ್ರಾನ್ ಖರೀದಿಸಿದ ಮುಂಬೈ ಇಂಡಿಯನ್ಸ್
* 1.6 ಕೋಟಿ ರು ನೀಡಿ ಲಕಿ ಫರ್ಗುಸನ್ ಖರೀದಿಸಿದ ಕೋಲ್ಕತ್ತಾ ನೈಟ್ ರೈಡರ್ಸ್
* 7.20 ಕೋಟಿ ರು ನೀಡಿ ಸ್ಯಾಮ್ ಕರನ್ ಖರೀದಿಸಿದ ಕಿಂಗ್ಸ್ ಎಲೆವನ್ ಪಂಜಾಬ್
* 6.40 ಕೋಟಿ ರು ನೀಡಿ ಕಾಲಿನ್ ಇನ್ ಗ್ರಾಮ್ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್
* ವರುಣ್ ಚಕ್ರವರ್ತಿಗೆ 8.40 ಕೋಟಿ ರು ನೀಡಿ ಖರೀದಿಸಿದ ಕಿಂಗ್ಸ್ ಎಲೆವನ್ ಪಂಜಾಬ್
* 2.20 ಕೋಟಿ ರು ನೀಡಿ ಆಲ್ ರೌಂಡರ್ ಶಿವಂ ದುಬೆ ಖರೀದಿಸಿದ ಆರ್ ಸಿಬಿ
* 5 ಕೋಟಿ ರು ನೀಡಿ ಮೋಹಿತ್ ಶರ್ಮ ಖರೀದಿಸಿದ ಚೆನ್ನೈ ಸೂಪರ್ ಕಿಂಗ್ಸ್
* 2.40 ಕೋಟಿ ರು ನೀಡಿ ವರುಣ್ ಅರೋನ್ ಖರೀದಿಸಿದ ರಾಜಸ್ಥಾನ ರಾಯಲ್ಸ್
* ಲಸಿತ್ ಮಾಲಿಂಗ 2 ಕೋಟಿ ರು ಮೂಲಬೆಲೆಗೆ ಖರೀದಿಸಿದ ಮುಂಬೈ ಇಂಡಿಯನ್ಸ್
* 1.10 ಕೋಟಿ ರು ನೀಡಿ ಇಶಾಂತ್ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್
* ಮೊಹಮ್ಮದ್ ಶಮಿ 4.80 ಕೋಟಿ ರು ಬೆಲೆಗೆ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್
* ಅಕ್ಷರ್ ಪಟೇಲ್ ಗೆ 5 ಕೋಟಿ ರು ನೀಡಿ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್
* ವೃದ್ಧಿಮಾನ್ ಸಹಾಗೆ 1.20 ಕೋಟಿ ರು ನೀಡಿ ಖರೀದಿಸಿದ ಸನ್ ರೈಸರ್ಸ್ ಹೈದರಾಬಾದ್.
* ಜಾನಿ ಬೈರ್ಸ್ಟೋಗೆ 2.20 ಕೋಟಿ ರು ನೀಡಿ ಖರೀದಿಸಿದ ಹೈದರಾಬಾದ್.
* ಮೋಸಿಸ್ ಹೆನ್ರಿಕ್ಯೂಸ್ ಗೆ 1 ಕೋಟಿ ರು ನೀಡಿ ಖರೀದಿಸಿದ ಪಂಜಾಬ್
ವಿಂಡೀಸ್ ಮತ್ತೊಬ್ಬ ದಾಂಡಿಗನ ಆಗಮನ: ಆರ್ ಸಿಬಿಗೆ ಬಂತು ಬಲ
* ವೃದ್ಧಿಮಾನ್ ಸಹಾಗೆ 1.20 ಕೋಟಿ ರು ನೀಡಿ ಖರೀದಿಸಿದ ಸನ್ ರೈಸರ್ಸ್ ಹೈದರಾಬಾದ್
* 5 ಕೋಟಿ ರು ಬೆಲೆಗೆ ವೆಸ್ಟ್ ಇಂಡೀಸ್ ನ ಕಾರ್ಲೋಸ್ ಬ್ರಥ್ ವೈಟ್ ಖರೀದಿಸಿದ ಕೋಲ್ಕತ್ತಾ ನೈಟ್ ರೈಡರ್ಸ್
* 4.20 ಕೋಟಿ ರು ನೀಡಿ ವಿಂಡೀಸ್ ಯುವ ಆಟಗಾರ ಸಿಮ್ರೊನ್ ಹೆಟ್ಮೆಯರ್ ಖರೀದಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು