ಶೋಕಿ ಬಿಟ್ಟು ಆಟದ ಕಡೆ ಗಮನ ಕೊಡು; ಐಷಾರಾಮಿ ಬೈಕ್ ಏರಿದ ಸೈನಿಗೆ ಬುದ್ಧಿ ಹೇಳಿದ ನೆಟ್ಟಿಗರು

ಜೂನ್ 18ರಿಂದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಇಂಗ್ಲೆಂಡ್‌ನ ಸೌತಂಪ್ಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದಾದ ಬಳಿಕ ಇಂಗ್ಲೆಂಡ್ ನೆಲದಲ್ಲಿಯೇ ಆಗಸ್ಟ್ 4ರಿಂದ ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ತಂಡಗಳ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.
ಯಾರಾಗ್ತಾರೆ ಧೋನಿ ಬಳಿಕ ಚೆನ್ನೈ ತಂಡದ ನಾಯಕ? ಈ 5 ಆಟಗಾರರ ಮೇಲೆ ಸಿಎಸ್‌ಕೆ ಕಣ್ಣು!
ಈ ಪಂದ್ಯಗಳನ್ನಾಡಲು 20 ಸದಸ್ಯರ ಟೀಮ್ ಇಂಡಿಯಾ ತಂಡ ಜೂನ್ 3ರಂದು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು ಈ ತಂಡದಲ್ಲಿ ಯುವ ವೇಗಿ ನವದೀಪ್ ಸೈನಿ ಸ್ಥಾನವನ್ನು ಪಡೆದುಕೊಂಡಿರಲಿಲ್ಲ. ಈ ಕುರಿತು ಕೆಲವೊಂದಿಷ್ಟು ಮಂದಿ ಇನ್ನಷ್ಟು ಯುವ ಪ್ರತಿಭೆಗಳಿಗೆ ಈ ಪ್ರವಾಸದಲ್ಲಿ ಅವಕಾಶಗಳನ್ನು ನೀಡಬೇಕಿತ್ತು ಎಂದಿದ್ದರು.
ಆ ಪಂದ್ಯದಿಂದ ನಾನು ಕೆಟ್ಟವನಾಗಿ ತಂಡದಿಂದ ಹೊರಬಿದ್ದೆ, ಎಷ್ಟೋ ರಾತ್ರಿ ನಿದ್ರೆ ಮಾಡಿರಲಿಲ್ಲ: ರವೀಂದ್ರ ಜಡೇಜಾ
ಆದರೆ ಇದೀಗ ನವದೀಪ್ ಸೈನಿ ತಮ್ಮ ಟ್ವಿಟರ್ ಖಾತೆಯಲ್ಲಿ ಐಷಾರಾಮಿ ಹಾರ್ಲೆ ಡೇವಿಡ್‌ಸನ್ ಬೈಕ್‌ನ ವಿಡಿಯೋವೊಂದನ್ನು ಹಂಚಿಕೊಂಡಿದ್ದು ನೆಟ್ಟಿಗರು ಸಿಕ್ಕಾಪಟ್ಟೆ ಕಾಲೆಳೆದಿದ್ದಾರೆ. ನವದೀಪ್ ಸೈನಿ ಹಾರ್ಲೆ ಡೇವಿಡ್‌ಸನ್ ಬೈಕ್ ಚಲಾಯಿಸುತ್ತಿರುವ ವಿಡಿಯೋಗೆ ಸಾಲು ಸಾಲು ಕಾಮೆಂಟ್ ಹಾಕಿರುವ ಕ್ರೀಡಾಭಿಮಾನಿಗಳು ಈ ಶೋಕಿ ಬಿಟ್ಟು ಉತ್ತಮ ಆಟದ ಕಡೆ ಗಮನ ಕೊಡು ಎಂದು ಬುದ್ದಿ ಮಾತನ್ನು ಹೇಳಿದ್ದಾರೆ. ಈ ವಿಡಿಯೋದಲ್ಲಿ ನವ್ ದೀಪ್ ಸೈನಿ ಬೈಕ್ ಮೂಲಕ ಧೂಳೆಬ್ಬಿಸುತ್ತಿದ್ದು ನೆಟ್ಟಿಗರು ಕಿಡಿಕಾರಿದ್ದಾರೆ.
ಕೊಹ್ಲಿ ಪಡೆ ವಿರುದ್ಧ ಸೇಡು ತೀರಿಸಿಕೊಳ್ಳಲು ಇಂಗ್ಲೆಂಡ್ ಆ ಕೆಲಸ ಮಾಡಬಹುದು: ಸುನಿಲ್ ಗವಾಸ್ಕರ್
ನವದೀಪ್ ಸೈನಿ ಮಾಡಿರುವ ಈ ಹಾರ್ಲೆ ಡೇವಿಡ್‌ಸನ್ ಟ್ವೀಟ್‌ಗೆ ನೆಟ್ಟಿಗರು ಯಾವ ರೀತಿ ಕಾಲೆಳೆದಿದ್ದಾರೆ ಎಂಬುದು ಮುಂದೆ ಇದೆ ನೋಡಿ..

ಇಷ್ಟೊಂದು ಧೂಳು ಮತ್ತು ಮಾಲಿನ್ಯ
ನವದೀಪ್ ಸೈನಿ ವಿಡಿಯೋದಲ್ಲಿ ಬೈಕ್ ಮೂಲಕ ಧೂಳು ಎಬ್ಬಿಸುತ್ತಿರುವುದಕ್ಕೆ ಕಿಡಿಕಾರಿರುವ ನೆಟ್ಟಿಗರು ಇಷ್ಟೊಂದು ಧೂಳು ಎಬ್ಬಿಸುವುದರ ಮೂಲಕ ವಾಯುಮಾಲಿನ್ಯಕ್ಕೆ ಕಾರಣರಾಗಿದ್ದೀರಿ ಎಂದು ಸೈನಿಯ ಕಾಲೆಳೆದಿದ್ದಾರೆ.

ನೀವೊಬ್ಬ ಟೀಮ್ ಇಂಡಿಯಾ ಆಟಗಾರ ಎನ್ನುವುದು ನೆನಪಿರಲಿ
ಇನ್ನೂ ಕೆಲವರು ನೀವೊಬ್ಬ ಟೀಮ್ ಇಂಡಿಯಾವನ್ನು ಪ್ರತಿನಿಧಿಸುವ ಆಟಗಾರ ಎನ್ನುವುದು ನೆನಪಿರಲಿ, ಈ ರೀತಿಯ ಕೆಲಸಗಳನ್ನು ಮಾಡಿ ನಿಮ್ಮ ಹೆಸರಿಗೆ ನೀವೆ ಮಸಿಬಳಿದುಕೊಳ್ಳುತ್ತಿದ್ದೀರ ಎಂದು ಸೈನಿಗೆ ಬುದ್ದಿವಾದ ಹೇಳಿದ್ದಾರೆ.

ಕೊಹ್ಲಿ ಎಲ್ಲಿದೀಯಪ್ಪ?
ನಿಮಗೆಲ್ಲಾ ನೆನಪಿರಬಹುದು ದೀಪಾವಳಿ ಸಮಯದಲ್ಲಿ ವಿರಾಟ್ ಕೊಹ್ಲಿ ವಾಯುಮಾಲಿನ್ಯ ಮಾಡಬೇಡಿ ಎಂದು ಜನರಿಗೆ ಸಂದೇಶವನ್ನು ನೀಡಿದ್ದರು. ಅದನ್ನು ಗುರಿಯಾಗಿಸಿಕೊಂಡು ನೆಟ್ಟಿಗನೊಬ್ಬ ವಿರಾಟ್ ಕೊಹ್ಲಿ ಎಲ್ಲಿದೀಯಪ್ಪ ಈಗ ನಿಮ್ಮ ಕಣ್ಣಿಗೆ ವಾಯುಮಾಲಿನ್ಯ ಕಾಣುವುದಿಲ್ಲವಾ? ಎಂದು ಕೊಹ್ಲಿ ಮತ್ತು ಸೈನಿ ಇಬ್ಬರ ಕಾಲನ್ನೂ ಎಳೆದಿದ್ದಾನೆ.
ಇದಷ್ಟೇ ಅಲ್ಲದೆ ಇನ್ನೂ ಹಲವಾರು ರೀತಿಯ ಕಾಮೆಂಟ್ ಮಾಡಿ ನೆಟ್ಟಿಗರು ನವದೀಪ್ ಸೈನಿಯನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications