ಭಾರತೀಯ ವೀಸಾ ಚಿತ್ರ ಹಂಚಿಕೊಂಡ ಸ್ಟೇಯ್ನ್, ಆರ್ ಸಿಬಿಗೆ ರೀ ಎಂಟ್ರಿ?


ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡಕ್ಕೆ ಬಲ ನೀಡಲು ದಕ್ಷಿಣ ಆಫ್ರಿಕಾ ವೇಗಿ ಡೇಲ್ ಸ್ಟೆಯ್ನ್ ಅವರು ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ, ಈ ಬಗ್ಗೆ ಖಚಿತ ಮಾಹಿತಿ ಇನ್ನೂ ಸಿಕ್ಕಿಲ್ಲ. ಆದರೆ, ಟ್ವಿಟ್ಟರ್ ನಲ್ಲಿ ಚರ್ಚೆ ಜೋರಾಗಿದೆ.
ಐಪಿಎಲ್ 2019ರಲ್ಲಿ ಅತ್ಯಂತ ಕುತೂಹಲದ ಪ್ರಶ್ನೆ ಇದೆ ಎನ್ನಬಹುದು. ಆರ್ ಸಿಬಿ ಫ್ಯಾನ್ಸ್ ಗಳಂತೂ ಸಕತ್ ಥ್ರಿಲ್ ಆಗಿದ್ದಾರೆ. ಆರ್ ಸಿಬಿ ತಂಡದಲ್ಲಿಗ ಉಮೇಶ್ ಯಾದವ್, ಟಿಮ್ ಸೌಥಿ, ಕೊಲಿನ್, ಮಾರ್ಕಸ್ ಮುಂತಾದ ಬೌಲರ್ ಗಳಿದ್ದಾರೆ.
ಡೇಲ್ ಸ್ಟೇನ್ ರ ಕಡೆಯ ಏಕದಿನ ಪಂದ್ಯಾಟವಾಗಲಿದೆ 2019ರ ವಿಶ್ವಕಪ್!
ಈ ಮಧ್ಯೆ ಅತಿವೇಗದ ಬೌಲರ್ ಗಳಲ್ಲಿ ಒಬ್ಬರಾದ ಡೇಲ್ ಸ್ಟೆಯ್ನ್ ಮತ್ತೊಮ್ಮೆ ತಂಡ ಸೇರಲಿದ್ದಾರೆ ಎಂಬ ಸಾಧ್ಯತೆ ಕಂಡು ಬಂದಿದೆ.
35 ವರ್ಷದ ವಯಸ್ಸಿನ ಡೇಲ್ ತಮ್ಮ ಪಾಸ್‍ಪೋರ್ಟ್ ಹಾಗೂ ಇಂಡಿಯನ್ ವೀಸಾದ ಫೋಟೋ ತೆಗೆದು ಅದರ ಮೇಲೆ Ahhh, what's this little surprise ಎಂದು ಬರೆದು ಇನ್ಸ್ಟಾಗ್ರಾಮ್ ಸ್ಟೋರಿಸ್ ನಲ್ಲಿ ಹಾಕಿದ್ದರು.
ಇದು ಟ್ವಿಟ್ಟರ್ ಸೇರಿ, ಅಭಿಮಾನಿಗಳು ಟ್ವೀಟ್ ಮಾಡಿರುವುದು ಇಷ್ಟೆಲ್ಲ ಕುತೂಹಲಕ್ಕೆ ಕಾರಣ. ಮುಂಬರುವ ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾ ಪರ ಆಡಲಿರುವ ಸ್ಟೆಯ್ನ್ ಅವರು ನಂತರ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications