For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಪ್ಲೇ ಆಫ್‌ ಪಂದ್ಯಗಳು ಪುಣೆಯಿಂದ ಕೋಲ್ಕತಾಗೆ ಶಿಫ್ಟ್

two playoff matches shifted to kolkata from pune

ಕೋಲ್ಕತಾ, ಮೇ 5: ಪುಣೆಯಲ್ಲಿ ನಡೆಯಬೇಕಿದ್ದ ಐಪಿಎಲ್‌ನ ಎರಡು ಪ್ಲೇ ಆಫ್ ಪಂದ್ಯಗಳನ್ನು ಕೋಲ್ಕತಾದ ಐತಿಹಾಸಿಕ ಈಡನ್‌ ಗಾರ್ಡನ್ಸ್ ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡಲಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಆಡಳಿತ ಸಮಿತಿ ಇದನ್ನು ಖಚಿತಪಡಿಸಿದೆ.

ಮೇ 23 ಮತ್ತು 25ರಂದು ನಡೆಯಲಿರುವ ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ 2 ಪಂದ್ಯಗಳು ಕೋಲ್ಕತಾದಲ್ಲಿ ನಡೆಯಲಿವೆ ಎಂದು ಸಮಿತಿಯ ಅಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ.

ಪ್ರಾರಂಭದ ವೇಳಾಪಟ್ಟಿಯಂತೆ ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ 2 ಪಂದ್ಯಗಳು ಪುಣೆಯಲ್ಲಿ ನಡೆಯಬೇಕಿತ್ತು. ಆದರೆ ಕಾವೇರಿ ವಿವಾದದ ಕಾರಣದಿಂದ ಚೆನ್ನೈನಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಪುಣೆಗೆ ಸ್ಥಳಾಂತರಿಸಲಾಗಿತ್ತು. ಇಲ್ಲಿ ಆರು ಪಂದ್ಯಗಳು ನಡೆದಿದ್ದವು.

ಸುಮಾರು 67 ಸಾವಿರ ಪ್ರೇಕ್ಷಕರು ಕೂರಬಹುದಾದಷ್ಟು ದೊಡ್ಡದಾದ ಈಡನ್‌ ಗಾರ್ಡನ್ಸ್ ನಲ್ಲಿ ಈ ಪಂದ್ಯಗಳನ್ನು ನಡೆಸುವುದು ಸೂಕ್ತ ಎಂದು ಸಮಿತಿ ತೀರ್ಮಾನಿಸಿದೆ.

ಪುಣೆಯಲ್ಲಿ ಆರು ಪಂದ್ಯಗಳನ್ನು ಆಡಿರುವುದರಿಂದ ಪಂದ್ಯಗಳನ್ನು ಕೋಲ್ಕತಾಕ್ಕೆ ಸ್ಥಳಾಂತರ ಮಾಡಲು ಅವಿರೋಧ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ತಿಳಿಸಿದ್ದಾರೆ.

ಮೇ 22 ಮತ್ತು 27ರಂದು ನಡೆಯಲಿರುವ ಕ್ವಾಲಿಫೈಯರ್ 1 ಹಾಗೂ ಫೈನಲ್ ಪಂದ್ಯಗಳಿಗೆ ಮುಂಬೈನ ವಾಂಖೇಡೆ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

Story first published: Saturday, May 5, 2018, 14:43 [IST]
Other articles published on May 5, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+