ಪಾಕಿಸ್ತಾನ ಆಟಗಾರ ಉಮರ್ ಅಕ್ಮಲ್‌ಗೆ ಜೀವಮಾನ ನಿಷೇಧದ ಭೀತಿ!

ಇಸ್ಲಮಾಬಾದ್, ಮಾರ್ಚ್ 20: ಪಾಕಿಸ್ತಾನ ಬ್ಯಾಟ್ಸ್‌ಮನ್ ಉಮರ್ ಅಕ್ಮಲ್‌ಗೆ ಪಿಸಿಬಿಯಿಂದ ಜೀವಮಾನದ ನಿಷೇಧದ ಶಿಕ್ಷೆಯ ಭೀತಿ ಶುರುವಾಗಿದೆ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ (ಪಿಸಿಬಿ) ಭ್ರಷ್ಟಾಚಾರ ನಿಗ್ರಹ ದಳದ ನಿಯಮ ಉಲ್ಲಂಘಿಸಿದ್ದ ಆರೋಪ ಅಕ್ಮಲ್ ವಿರುದ್ಧ ಕೇಳಿ ಬಂದಿದೆ.
ಫಿಕ್ಸಿಂಗ್‌ಗಾಗಿ ಯಾರಾದರೂ ಸಂಪರ್ಕಿಸಿದಾಗ ಆ ವಿಚಾರವನ್ನು ತಡವಾಗಿ ಪಿಸಿಬಿ ಗಮನಕ್ಕೆ ತಂದು ಉಮರ್ ಅಕ್ಮಲ್ ತಪ್ಪೆಸಗಿದ್ದಾಗಿ ಆರೋಪಿಸಲಾಗಿದೆ. ಹೀಗಾಗಿ ಅಕ್ಮಲ್ 6 ವರ್ಷಗಳ ನಿಷೇಧಕ್ಕೆ ಗುರಿಯಾಗುವ ಸಾಧ್ಯತೆಯಿದೆ. ನಿಷೇಧವನ್ನು ಜೀವಮಾನದವರೆಗೂ ವಿಸ್ತರಿಸಲು ಅವಕಾಶವೂ ಇದೆ.
ತನ್ನ ಮೇಲೆ ಕೇಳಿ ಬಂದಿರುವ ಆರೋಪಕ್ಕೆ ಅಕ್ಮಲ್ ವಿವರಣೆ ನೀಡಬೇಕಾಗಿದೆ. ಮಾರ್ಚ್ 31ರ ಒಳಗಾಗಿ ಆರೋಪಕ್ಕೆ ಕುರಿತಂತೆ ಸ್ಪಷ್ಟನೆ ನೀಡಲು ಪಿಸಿಬಿ ತಿಳಿಸಿದೆ. ಈ ವೇಳೆ ಅಕ್ಮಲ್‌ದೇ ತಪ್ಪೆಂದು ಕಂಡುಬಂದರೆ ಅಕ್ಮಲ್ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.
'ಸಂಬಂಧವಿಲ್ಲದ ಎರಡು ಘಟನೆಗಳಲ್ಲಿ ಪಿಸಿಬಿ ಭ್ರಷ್ಟಾಚಾರ ನಿಗ್ರಹ ಸಂಹಿತೆಯ 2.4.4 ನೇ ವಿಧಿ ಉಲ್ಲಂಘನೆಗಾಗಿ ಉಮರ್ ಅಕ್ಮಲ್ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆರೋಪಿಸಿದೆ,' ಎಂದು ಪಿಸಿಬಿ ತನ್ನ ಹೇಳಿಕೆಯಲ್ಲಿ ಬರೆದುಕೊಂಡಿದೆ. ಅಕ್ಮಲ್ ಮೇಲೆ ಆರೋಪಿಸಿ ಪಿಸಿಬಿ ಮಾರ್ಚ್ 17ರಂದು ನೋಟಿಸ್ ನೀಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications