ಎಲ್ಲೆ ಮೀರಿ ವರ್ತಿಸಿದ್ದ ಪಾಕ್ ಪ್ಲೇಯರ್ ಉಮರ್ ಅಕ್ಮಲ್ ಬ್ಯಾನ್‌ನಿಂದ ಪಾರು

ಇಸ್ಲಮಾಬಾದ್, ಫೆಬ್ರವರಿ 15: ಫಿಟ್ನೆಸ್ ಟೆಸ್ಟ್ ವೇಳೆ ತರಬೇತುದಾರರೆದುರು ದುರ್ವರ್ತನೆ ತೋರಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ಅನುಭವಿ ಬ್ಯಾಟ್ಸ್‌ಮನ್ ಉಮರ್ ಅಕ್ಮಲ್, ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ)ನಿಂದ ಆಗಬಹುದಾಗಿದ್ದ ಬ್ಯಾನ್ ಶಿಕ್ಷೆಯಿಂದ ಪಾರಾಗಿದ್ದಾರೆ.
ಕೇಂದ್ರ ಮತ್ತು ದೇಸಿ ಒಪ್ಪಂದಗಳನ್ನು ಹೊಂದಿದ್ದ ಆಟಗಾರರು ಫಿಟ್ನೆಸ್ ಟೆಸ್ಟ್‌ಗೆ ಒಳಗಾಗಬೇಕೆಂದು ಪಿಸಿಬಿ ಸೂಚಿಸಿತ್ತು. ಈ ಸಂಬಂಧ ಲಾಹೋರ್‌ನಲ್ಲಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಕಳೆದ ತಿಂಗಳ ಕೊನೆಯಲ್ಲಿ ನಡೆದಿದ್ದ ಫಿಟ್‌ನೆಸ್ ಟೆಸ್ಟ್ ವೇಳೆ ಉಮರ್, ತರಬೇತುದಾರಿಗೆ ಬೈದಾಡಿದ್ದಾಗಿ ದೂರು ಕೇಳಿಬಂದಿತ್ತು.
ಕೆಲವೊಂದು ಟೆಸ್ಟ್‌ಗಳಲ್ಲಿ ಫೇಲ್ ಆಗಿದ್ದ ಉಮರ್ ಅಕ್ಮಲ್, ಬಾಡಿ ಫ್ಯಾಟ್ ಟೆಸ್ಟ್ ವೇಳೆ ತರಬೇತುದಾರರೆದು ಸಿಟ್ಟು ತೋರಿಕೊಂಡಿದ್ದರು. ಉಮರ್ ನಡೆಯನ್ನು ತರಬೇತುದಾರರು ಪಾಕ್ ಹೆಡ್ ಕೋಚ್ ಮಿಸ್ಬ ಉಲ್ ಹಕ್ ಮತ್ತು ಮುಖ್ಯ ಆಯ್ಕೆದಾರರ ಗಮನಕ್ಕೆ ತಂದಿದ್ದರು. ಆ ಮೇಲೆ ಪಾಕ್ ಬೋರ್ಡ್ ಈ ಬಗ್ಗೆ ವಿಚಾರಣೆ ನಡೆಸಿತ್ತು.
ಉಮರ್ ಮೇಲಿನ ಆರೋಪವನ್ನು ವಿಚಾರಣೆ ನಡೆಸಿದ ಪಿಸಿಬಿ, ಘಟನೆ ನಡೆದಿದ್ದು, ದೂರಿನವರೆಗೂ ಬಂದಿದ್ದು ಎಲ್ಲವೂ ಅಪಾರ್ಥದಿಂದಾಗಿ ಎಂದಿದೆ. 'ಘಟನೆಗೆ ಸಂಬಂಧಿಸಿ ಉಮರ್ ಪಶ್ಚಾತಾಪ ಸೂಚಿಸಿದ್ದಾರೆ. ಪಿಸಿಬಿ ಅವರಿಗೆ ಎಚ್ಚರಿಕೆ ನೀಡಿದೆಯಲ್ಲದೆ, ಒಬ್ಬ ಅನುಭವಿ ಆಟಗಾರನಾಗಿ ಅವರಿಗಿರುವ ಜವಾಬ್ದಾರಿಗಳ ಬಗ್ಗೆ ನೆನಪಿಸಿದೆ,' ಎಂದು ಹೇಳಿಕೆಯಲ್ಲಿ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications