ಮೂರು ವರ್ಷಗಳ ನಿಷೇಧದ ವಿರುದ್ಧ ಮನವಿ ಸಲ್ಲಿಸಿದ ಉಮರ್ ಅಕ್ಮಲ್

ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಪಾಕಿಸ್ತಾನ ತಂಡದ ಆಟಗಾರ ಉಮರ್ ಅಕ್ಮಲ್‌ಗೆ ಮೂರು ವರ್ಷಗಳ ನಿಷೇಧವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿಧಿಸಿತ್ತು. ಇದರ ವಿರುದ್ಧ ಉಮರ್ ಅಕ್ಮಲ್ ಮನವಿಯನ್ನು ಸಲ್ಲಿಸಿದ್ದಾರೆ. ಈ ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸಬೇಕೆಂದು ಈ ಮನವಿಯಲ್ಲಿ ಅಕ್ಮಲ್ ಕೇಳಿಕೊಂಡಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಶಿಸ್ತು ಪಾಲನಾ ಸಮಿತಿ ಕೆಲ ದಿನಗಳ ಹಿಂದೆಯಷ್ಟೇ ಉಮರ್ ಅಕ್ಮಲ್ ಮೇಲಿದ್ದ ಆರೋಪಕ್ಕೆ ಸಾಕಷ್ಟು ಸಾಕ್ಷ್ಯಗಳಿದ್ದ ಹಿನ್ನೆಲೆಯಲ್ಲಿ ಮತ್ತು ಸೂಕ್ತ ಉತ್ತರವನ್ನು ನೀಡುವಲ್ಲಿ ಅಕ್ಮಲ್ ವಿಫಲರಾಗಿದ್ದ ಕಾರಣದಿಂದಾಗಿ ಮೂರು ವರ್ಷಗಳ ಶಿಕ್ಷೆಯನ್ನು ಪ್ರಕಟಿಸಿತ್ತು.
ಉಮರ್ ಅಕ್ಮಲ್ ಅವರ ಮನವಿಯ ಅರ್ಜಿ ಸಲ್ಲಿಕೆಯಾಗಿರುವುದನ್ನು ಕ್ರಿಕೆಟ್ ಆಡಳಿತ ಮಂಡಳಿ ಖಚಿತಪಡಿಸಿದೆ. ಈ ಪ್ರಕರಣವನ್ನು ಆಲಿಸಲು ಸ್ವತಂತ್ರ ತೀರ್ಪುಗಾರರ ಸಮಿತಿಯನ್ನು ರಚಿಸಲಾಗುತ್ತದೆ ಎಂದಿದೆ. ಪಿಸಿಬಿ ನೀತಿ ಸಂಹಿತೆಯ ಪ್ರಕಾರ ಹೊಸದಾಗಿ ವಿಚಾರಣೆಯನ್ನು ನಡೆಸಲಾಗುವುದಿಲ್ಲ. ಆದರೆ ತೆಗೆದುಕೊಂಡಿರುವ ನಿರ್ಧಾರ ತಪ್ಪಾಗಿದೆಯಾ ಎಂಬ ವಿಮರ್ಶೆಯನ್ನು ನಡೆಸಾಗುತ್ತದೆ ಎಂದು ಕ್ರಿಕ್ ಇನ್ಫೋ ವರದಿ ಮಾಡಿದೆ.
ಪಾಕಿಸ್ತಾನ ಪ್ರೀಮಿಯರ್ ಲೀಗ್‌ನಲ್ಲಿ ಉಮರ್ ಅಕ್ಮಲ್ ಪಾಲ್ಗೊಂಡಿದ್ದಾಗ ಫಿಕ್ಸಿಂಗ್ ಮಾಡಿಕೊಳ್ಳುವ ಕಾರಣಕ್ಕೆ ಬುಕ್ಕಿಗಳು ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಉಮರ್ ಅಕ್ಮಲ್ ಅವರನ್ನು ಸಂಪರ್ಕಿಸಿದ್ದರು. ಆದರೆ ಈ ವಿಚಾರವನ್ನು ಭ್ರಷ್ಟಾಚಾರ ನಿಗ್ರಹದಳಕ್ಕೆ ಮಾಹಿತಿ ನೀಡದ ಕಾರಣ ಉಮರ್ ಅಕ್ಮಲ್ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು.
ಎರಡು ಸಂದರ್ಭಗಳಲ್ಲಿ ಉಮರ್ ಅಕ್ಮಲ್ ಪಿಸಿಬಿ ಭ್ರಷ್ಟಾಚಾರ ನಿಗ್ರಹ ಸಂಹಿತೆಯ 2.4.4 ನೇ ವಿಧಿಯನ್ನು ಉಲ್ಲಂಘನೆಗಾಗಿ ಮಾಡಿದ್ದರು. ಈ ಆರೋಪಕ್ಕೆ ಸಂಬಂಧ ಪಟ್ಟಂತೆ ಪಿಸಿಬಿ ಮಾರ್ಚ್ 17ರಂದು ನೋಟಿಸ್ ನೀಡಿತ್ತು. ಇದಕ್ಕೆ ಸೂಕ್ತ ಉತ್ತರವನ್ನು ನೀಡುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಉಮರ್ ಅಕ್ಮಲ್ ಶಿಕ್ಷೆಗೆ ಗುರಿಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications