3 ವರ್ಷಗಳ ನಿಷೇಧ ಪ್ರಶ್ನಿಸಿ ಮೇಲ್ಮನವಿ ತೀರ್ಪು ಪ್ರಕಟ: ಉಮರ್ ಅಕ್ಮಲ್‌ಗೆ ಅರ್ಧ ಯಶಸ್ಸು

ಪಾಕಿಸ್ತಾನದ ಕ್ರಿಕೆಟಿಗ ಉಮರ್ ಅಕ್ಮಲ್ ತಮ್ಮ ವಿರುದ್ಧ ಹೇರಲಾಗಿದ್ದ 3 ವರ್ಷಗಳ ನಿಷೇಧದ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸಿ ಅರ್ಧ ಗೆಲುವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೇಲ್ಮನವಿಯ ತೀರ್ಪು ಹೊರವಿದ್ದಿದ್ದು 3 ವರ್ಷಗಳ ಶಿಕ್ಷೆಯನ್ನು 18 ತಿಂಗಳಿಗೆ ಇಳಿಸಲಾಗಿದೆ. ಈ ಮೂಲಕ ಮಹತ್ವದ ಯಶಸ್ಸನ್ನು ಉಮರ್ ಅಕ್ಮಲ್ ಪಡೆದುಕೊಂಡಿದ್ದಾರೆ.
ಆದರೆ ಈ ಶಿಕ್ಷೆಯ ಪ್ರಮಾಣಕ್ಕೆ ಅಸಮಾಧಾನವನ್ನು ವ್ಯಕ್ತಪಡಿಸಿರುವ ಉಮರ್ ಅಕ್ಮಲ್ ಮತ್ತೊಮ್ಮೆ ಮೇಲ್ಮನವಿಯನ್ನು ಸಲ್ಲಿಸುವುದಾಗಿ ಹೇಳಿಕೊಂಡಿದ್ದಾರೆ. ಈ ವರ್ಷಾರಂಭದಲ್ಲಿ ಅಕ್ಮಲ್ ಮೇಲಿದ್ದ ಆರೋಪದ ವಿಚಾರಣೆಯನ್ನು ನಡೆಸಿದ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಶಿಸ್ತು ಪಾಲನಾ ಸಮಿತಿ 3 ವರ್ಷಗಳ ಕಾಲ ಎಲ್ಲಾ ರೀತಿಯ ಕ್ರಿಕೆಟ್‌ನಿಂದಲೂ ನಿಷೇಧ ವಿಧಿಸಿತ್ತು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಉಮರ್ ಅಕ್ಮಲ್ ಮೇಲ್ಮನವಿಯನ್ನು ಸಲ್ಲಿಸಿದ್ದರು. ಹೀಗಾಗಿ ಸ್ವತಂತ್ರ ತೀರ್ಪುಗಾರರ ಸಮಿತಿಯನ್ನು ರಚಿಸಿ ಪ್ರಕರಣವನ್ನು ಪರಾಮರ್ಶಿಸಲು ಅವಕಾಶವನ್ನು ನೀಡಲಾಗಿತ್ತು. ಮಾಜಿ ನ್ಯಾಯಮೂರ್ತಿ ಫಕೀರ್ ಮೊಹಮ್ಮದ್ ಖೋಖರ್ ಅವರಿದ್ದ ಸ್ವತಂತ್ರ ತೀರ್ಪುಗಾರರ ಸಮಿತಿ ಈ ಪ್ರಕರಣವನ್ನು ಪನರ್‌ಪರಿಸೀಲಿಸಿದ ನಂತರ ಶಿಕ್ಷೆಯ ಪ್ರಮಾಣವನ್ನು ಅರ್ಧಕ್ಕೆ ಇಳಿಸಿದ್ದಾರೆ.
ಉಮರ್ ಅಕ್ಮಲ್ ಮಾಡಿದ ಮೇಲ್ಮನವಿಯ ಹಿನ್ನೆಲೆಯಲ್ಲಿ ಬಂದ ತೀರ್ಪಿನ ಪ್ರಕಾರ 2020 ಫೆಬ್ರವರಿಯಿಂದ ಆರಂಭವಾಗುವ ಈ ನಿಷೇಧ ಶಿಕ್ಷೆ 2021ರ ಆಗಸ್ಟ್‌ಗೆ ತೆರವಾಗಲಿದೆ. ಹೊಸ ತೀರ್ಪು ಹೊರ ಬಿದ್ದ ನಂತರ ಉಮರ್ ಅಕ್ಮಲ್ ಪ್ರತಿಕ್ರಿಯಿಸಿದ್ದು ಈ ಹಿಂದೆ ಸಾಕಷ್ಟು ಮಂದಿ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ ಯಾರೂ ಕೂಡ ನನ್ನ ರೀತಿ ಕಠಿಣ ಶಿಕ್ಷೆಗೆ ಒಳಪಟ್ಟಿಲ್ಲ. ಹೀಗಾಗಿ ಮತ್ತೊಮ್ಮೆ ಮೇಲ್ಮನವಿಯನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.
ಪಾಕಿಸ್ತಾನ ಪ್ರೀಮಿಯರ್ ಲೀಗ್‌ನಲ್ಲಿ ಉಮರ್ ಅಕ್ಮಲ್ ಪಾಲ್ಗೊಂಡಿದ್ದಾಗ ಫಿಕ್ಸಿಂಗ್ ಮಾಡಿಕೊಳ್ಳುವ ಕಾರಣಕ್ಕೆ ಬುಕ್ಕಿಗಳು ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಉಮರ್ ಅಕ್ಮಲ್ ಅವರನ್ನು ಸಂಪರ್ಕಿಸಿದ್ದರು. ಆದರೆ ಈ ವಿಚಾರವನ್ನು ಭ್ರಷ್ಟಾಚಾರ ನಿಗ್ರಹದಳಕ್ಕೆ ಮಾಹಿತಿ ನೀಡದ ಕಾರಣ ಉಮರ್ ಅಕ್ಮಲ್ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು.
ಎರಡು ಸಂದರ್ಭಗಳಲ್ಲಿ ಉಮರ್ ಅಕ್ಮಲ್ ಪಿಸಿಬಿ ಭ್ರಷ್ಟಾಚಾರ ನಿಗ್ರಹ ಸಂಹಿತೆಯ 2.4.4 ನೇ ವಿಧಿಯನ್ನು ಉಲ್ಲಂಘನೆಗಾಗಿ ಮಾಡಿದ್ದರು. ಈ ಆರೋಪಕ್ಕೆ ಸಂಬಂಧ ಪಟ್ಟಂತೆ ಪಿಸಿಬಿ ಮಾರ್ಚ್ 17ರಂದು ನೋಟಿಸ್ ನೀಡಿತ್ತು. ಇದಕ್ಕೆ ಸೂಕ್ತ ಉತ್ತರವನ್ನು ನೀಡುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಉಮರ್ ಅಕ್ಮಲ್ ಶಿಕ್ಷೆಗೆ ಗುರಿಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications