ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂಡರ್-19 ವಿಶ್ವಕಪ್ ಫೈನಲ್: ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ

India under19

ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ. ಆ್ಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ ಪ್ರಶಸ್ತಿಯ ಹೋರಾಟವು ಅಂತಿಮ ಹಂತಕ್ಕೆ ಬಂದು ತಲುಪಿದೆ. ನಾಲ್ಕು ಬಾರಿಯ ಚಾಂಪಿಯನ್ ಭಾರತವು ಐದನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಇಂಗ್ಲೆಂಡ್ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ. ಕಳೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಸಿದ ತಂಡವನ್ನೇ ಕಾಣಬಹುದಾಗಿದೆ. ಇನ್ನು ಭಾರತ ತಂಡವು ಮೊದಲು ಬ್ಯಾಟಿಂಗ್ ಆಡುವುದನ್ನ ಬಯಸಿತ್ತು ಎಂದು ನಾಯಕ ಯಶ್ ಧುಲ್ ಹೇಳಿದ್ರು. ಆದ್ರೆ ಭಾರತ ತಂಡದಲ್ಲೂ ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿದಿದೆ.

ವಿಶ್ವ ದಾಖಲೆಯ 1000ನೇ ಏಕದಿನ ಪಂದ್ಯವನ್ನಾಡಲಿರುವ ಭಾರತ: ಇದುವರೆಗೆ ಗೆದ್ದಿದ್ದೆಷ್ಟು, ಸೋತಿದೆಷ್ಟು?ವಿಶ್ವ ದಾಖಲೆಯ 1000ನೇ ಏಕದಿನ ಪಂದ್ಯವನ್ನಾಡಲಿರುವ ಭಾರತ: ಇದುವರೆಗೆ ಗೆದ್ದಿದ್ದೆಷ್ಟು, ಸೋತಿದೆಷ್ಟು?

ಯಶ್‌ ದುಲ್ ನಾಯಕತ್ವದ ಭಾರತ ಅಂಡರ್-19 ತಂಡವು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನ ಸೋಲಿಸಿ ಸತತ ನಾಲ್ಕನೇ ಬಾರಿಗೆ ಮತ್ತು ಒಟ್ಟಾರೆ ಎಂಟನೇ ಬಾರಿಗೆ ವಿಶ್ವಕಪ್ ಫೈನಲ್ ತಲುಪಿದೆ. ಭಾರತ ನೀಡಿದ 291 ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾವನ್ನ 194 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ 96ರನ್‌ಗಳ ಜಯದೊಂದಿಗೆ ಫೈನಲ್‌ಗೆ ಎಂಟ್ರಿಕೊಟ್ಟಿತು.

ಇದಕ್ಕೂ ಮುನ್ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನ ಮಣಿಸಿದ ಇಂಗ್ಲೆಂಡ್ ಜ್ಯೂನಿಯರ್ ತಂಡವು ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ಮಳೆಯಿಂದಾಗಿ ಪಂದ್ಯವು ಡೆಕ್ವರ್ತ್ ಲೂಹಿಸ್ ನಿಯಮದಡಿಯಲ್ಲಿ 47 ಓವರ್‌ಗಳಿಗೆ ಸೀಮಿತಗೊಂಡಿತ್ತು. ಇಂಗ್ಲೆಂಡ್ ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 231 ರನ್ ಕಲೆಹಾಕಿತು. 232 ರನ್‌ಗಳ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ 47 ಓವರ್‌ಗಳಲ್ಲಿ ಅಫ್ಘಾನಿಸ್ತಾನ 8 ವಿಕೆಟ್ ನಷ್ಟಕ್ಕೆ 215 ರನ್‌ ಗಳಿಸಲಷ್ಟೇ ಶಕ್ತವಾಯಿತು. ಪರಿಣಾಮ 15 ರನ್‌ಗಳ ಗೆಲುವು ಸಾಧಿಸಿದ ಇಂಗ್ಲೆಂಡ್ ವಿಶ್ವಕಪ್‌ ಫೈನಲ್ ಪ್ರವೇಶ ಪಡೆಯಿತು.

ಎರಡು ಬಲಿಷ್ಠ ತಂಡಗಳು ಫೈನಲ್ ಪ್ರವೇಶಿಸಿರುವ ಫೈನಲ್‌ ಕಾದಾಟದ ಕಾವು ಹೆಚ್ಚಿಸಿವೆ. ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ತಿಳಿದುಕೊಳ್ಳುವ ಮುನ್ನ ಕೆಲವು ಹಾಲಿ ಕ್ರಿಕೆಟಿಗರು ಭಾರತ ಅಂಡರ್-19 ವಿಶ್ವಕಪ್ ತಂಡಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಿದ್ದಾರೆ.

ಭಾರತ ಅಂಡರ್ 19 ಪ್ಲೇಯಿಂಗ್ 11:
ಆಂಗ್ಕ್ರಿಶ್ ರಘುವಂಶಿ, ಹರ್ನೂರ್ ಸಿಂಗ್, ಶೇಕ್ ರಶೀದ್, ಯಶ್ ಧುಲ್(ನಾಯಕ), ನಿಶಾಂತ್ ಸಿಂಧು, ರಾಜವರ್ಧನ್ ಹಂಗರ್ಗೇಕರ್, ದಿನೇಶ್ ಬನಾ(ವಿಕೆಟ್ ಕೀಪರ್), ಕೌಶಲ್ ತಾಂಬೆ, ರಾಜ್ ಬಾವಾ, ವಿಕ್ಕಿ ಒಸ್ವಾಲ್, ರವಿ ಕುಮಾರ್

ಇಂಗ್ಲೆಂಡ್ ಅಂಡರ್ 19 ಪ್ಲೇಯಿಂಗ್ 11:
ಜಾರ್ಜ್ ಥಾಮಸ್, ಜಾಕೋಬ್ ಬೆಥೆಲ್, ಟಾಮ್ ಪ್ರೆಸ್ಟ್(ನಾಯಕ), ಜೇಮ್ಸ್ ರೆವ್, ವಿಲಿಯಂ ಲಕ್ಸ್ಟನ್, ಜಾರ್ಜ್ ಬೆಲ್, ರೆಹಾನ್ ಅಹ್ಮದ್, ಅಲೆಕ್ಸ್ ಹಾರ್ಟನ್(ವಿಕೆಟ್ ಕೀಪರ್), ಜೇಮ್ಸ್ ಸೇಲ್ಸ್, ಥಾಮಸ್ ಆಸ್ಪಿನ್‌ವಾಲ್, ಜೋಶುವಾ ಬೋಡೆನ್

Story first published: Saturday, February 5, 2022, 18:24 [IST]
Other articles published on Feb 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X